ಸಾಧಕರೇ, ಬಾಲಸಾಧಕರ ಅಥವಾ ಸಾಧಕರ ಛಾಯಾಚಿತ್ರಗಳನ್ನು ತೆಗೆಯುವಾಗ ಮುಂದಿನ ಅಂಶಗಳನ್ನು ಗಮನಿಸಿ !

(ಯುವ ಸಾಧಕಿ) ಕು. ಶಾರ್ವರಿ ಕಾನಸಕರ್‌

‘ಸನಾತನ ಪ್ರಭಾತ’ದಲ್ಲಿ ಸಾಧಕರ ಅಥವಾ ಬಾಲಸಾಧಕರ ಲೇಖನಗಳ ಜೊತೆಗೆ ಅದಕ್ಕೆ ಸಂಬಂಧಪಟ್ಟವರ ಛಾಯಾಚಿತ್ರಗಳನ್ನೂ ಮುದ್ರಿಸಲಾಗುತ್ತದೆ. ಅನೇಕ ಬಾರಿ ಈ ಛಾಯಾಚಿತ್ರಗಳನ್ನು ಯೋಗ್ಯ ಪದ್ಧತಿಯಿಂದ ತೆಗೆಯದಿರುವುದರಿಂದ ಅವುಗಳನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ ಮತ್ತು ಯೋಗ್ಯವಾದ ಚಿತ್ರಗಳನ್ನು ಪಡೆಯಲು ಸೇವೆಯಲ್ಲಿನ ಸಾಧಕರಿಗೆ ತುಂಬಾ ಸಮಯವನ್ನು ಕೊಡಬೇಕಾಗುತ್ತದೆ. ಇನ್ನು ಮುಂದೆ ಸಾಧಕರು ಛಾಯಾಚಿತ್ರವನ್ನು ತೆಗೆಯುವಾಗ ಮುಂದಿನ ಎಲ್ಲ ಅಂಶಗಳನ್ನು ಗಮನದಲ್ಲಿಡಬೇಕು ಮತ್ತು ಯೋಗ್ಯವಾದ ಛಾಯಾಚಿತ್ರಗಳೊಂದಿಗೆ ಲೇಖನವನ್ನು ಕಳುಹಿಸಬೇಕು.

(ಬಾಲಸಾಧಕರು) ಕು. ಪ್ರಾರ್ಥನಾ ಪಾಠಕ

೧. ಬಾಲಸಾಧಕರು

 

ಅ. ಬಾಲಸಾಧಕರ ಲೇಖನಗಳನ್ನು ಕಳುಹಿಸುವಾಗ ಕೆಲವು ಪಾಲಕರು ಮಕ್ಕಳಿಗೆ ಉದ್ದೇಶಪೂರ್ವಕವಾಗಿ ಬೇರೆ ಉಡುಪು ಗಳನ್ನು ತೊಡಿಸಿ ಅವರ ಛಾಯಾಚಿತ್ರವನ್ನು ತೆಗೆಯುತ್ತಾರೆ. ಕೆಲವು ಪಾಲಕರು ಅಸಾತ್ತ್ವಿಕ ಬಟ್ಟೆಗಳನ್ನು ಧರಿಸಿದ ಛಾಯಾ ಚಿತ್ರಗಳನ್ನು ಕಳುಹಿಸುತ್ತಾರೆ. ಬಾಲಕರಿಗೆ ಗಾಢ ಬಣ್ಣದ, ಹಾಗೆಯೇ ಚಿತ್ರವಿಚಿತ್ರ ಮತ್ತು ವಿನ್ಯಾಸಗಳಿರುವ ಉಡುಪುಗಳನ್ನು ಹಾಕಬಾರದು. ಅವರಿಗೆ ಸಾತ್ತ್ವಿಕ ಬಣ್ಣದ ಮತ್ತು ಸಾಮಾನ್ಯ (ಸಾದಾ) ಬಟ್ಟೆಗಳನ್ನು ಹಾಕಬೇಕು. ಹೆಣ್ಣುಮಕ್ಕಳಿಗೆ ‘ಫ್ರಾಕ್’ ಅಥವಾ ಲಂಗ-ದಾವಣಿ, ಗಂಡುಹುಡುಗರಿಗೆ ಕುರ್ತಾ ಅಥವಾ ಸಾತ್ತ್ವಿಕ ಬಣ್ಣದ ಜುಬ್ಬಾವನ್ನು ತೊಡಿಸಬಹುದು.
ಆ. ಹುಡುಗಿಯರ-ಹುಡುಗರ ಕೂದಲುಗಳು ಹರಡಿರಬಾರದು. ಕೂದಲನ್ನು ಸರಿಯಾಗಿ ಬಾಚಿ ಬೈತಲೆಯನ್ನು ತೆಗೆಯಬೇಕು. ಹುಡುಗಿಯ ಕೂದಲುಗಳು ಉದ್ದವಾಗಿದ್ದರೆ ಅವಳಿಗೆ ಎರಡು ಜಡೆ ಅಥವಾ ಒಂದು ಜಡೆಯನ್ನು ಹಾಕಬೇಕು.
ಇ. ಬಾಲಕನ ಕಣ್ಣುಗಳಿಗೆ ಕಾಡಿಗೆ ಹಚ್ಚಬಾರದು. ಛಾಯಾಚಿತ್ರ ದಲ್ಲಿ ಬಾಲಕನ ದೃಷ್ಟಿಯು ನೇರವಾಗಿರಬೇಕು. ಛಾಯಾಚಿತ್ರವನ್ನು ತೆಗೆಯುವಾಗ ಬಾಲಕನಿಗೆ ಎದುರಿಗೆ ಛಾಯಾಚಿತ್ರಕದೆಡೆಗೆ (ಕ್ಯಾಮೆರಾದ ಕಡೆಗೆ) ನೋಡಲು ಹೇಳಬೇಕು.
ಈ. ಬಾಲಕನ ಹಣೆಯ ಮೇಲೆ ತಿಲಕವನ್ನು (ಉದ್ದತಿಲಕ) ಹಚ್ಚಬಹುದು, ಹಾಗೆಯೇ ಬಾಲಕಿಯ ಹಣೆಯ ಮೇಲೆ ಕುಂಕುಮವನ್ನು ಹಚ್ಚಬಹುದು.
ಉ. ಛಾಯಾಚಿತ್ರವನ್ನು ತೆಗೆಯುವಾಗ ಹುಡುಗರ-ಹುಡುಗಿಯರ ನಗುಮುಖವಿರಬೇಕು.

೨. ಸಾಧಕಿಯರು

(ಸಾಧಕಿ) ಸೌ. ಪ್ರಿಯಾಂಕಾ ರಾಜಹಂಸ

 

ಅ. ಕೇವಲ ಮುಖ ಮಾತ್ರ ಕಾಣುವ ಹಾಗೆ ಛಾಯಾಚಿತ್ರವನ್ನು ತೆಗೆಯಬಾರದು. ಮುಖದಿಂದ ಅನಾಹತಚಕ್ರದ ವರೆಗಿನ ಭಾಗದ (ಎದೆಯ ವರೆಗೆ) ಛಾಯಾಚಿತ್ರವಿರಬೇಕು.
ಆ. ಸಾಧಕಿಯು ಗಾಢ ಬಣ್ಣದ ಬಟ್ಟೆಗಳನ್ನು ಧರಿಸದೇ ಸಾತ್ತ್ವಿಕ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಪಂಜಾಬಿ ಉಡುಪುಗಳನ್ನು ಹಾಕಿದ್ದರೆ ವೇಲ್‌(ದುಪ್ಪಟ್ಟಾ) ಸರಿಯಾಗಿ ಹಾಕಿರಬೇಕು. ಅದನ್ನು ತುಂಬಾ ಹರಡಿಸಿಕೊಂಡಿರಬಾರದು.
ಇ. ಸಾಧಕಿಯು ವಿವಾಹಿತಳಾಗಿದ್ದರೆ, ಅವಳು ಕೊರಳಿನಲ್ಲಿ ಹಾಕಿದ ಮಂಗಳಸೂತ್ರವು ಸೆರಗಿನ ಮೇಲೆ ಸರಿಯಾಗಿ ಕಾಣುವಂತೆ ಇರಬೇಕು. ಅವಿವಾಹಿತ ಸಾಧಕಿಯು ಕೊರಳಿನಲ್ಲಿ ‘ಚೈನ್‌’ನಂತಿರುವ ಆಭರಣವನ್ನು ಧರಿಸಬಹುದು.

೩. ಸಾಧಕರು

ಸಾಧಕ (ಮುಗುಳ್ನಗು) ಶ್ರೀ. ಗಿರಿಜಯ ಪ್ರಭುದೇಸಾಯಿ

 

 

ಅ. ಸಾಧಕರು ಕಣ್ಣು ಕೋರೈಸುವ ಬಣ್ಣದ ಅಥವಾ ಬಣ್ಣಬಣ್ಣದ ಶರ್ಟನ್ನು (ಜುಬ್ಬವನ್ನು) ಧರಿಸದೇ ಸಾತ್ತ್ವಿಕ ಬಣ್ಣದ ಶರ್ಟನ್ನು (ಜುಬ್ಬ್ಬಾ) ಧರಿಸಿ ಛಾಯಾಚಿತ್ರವನ್ನು ತೆಗೆಯಬೇಕು.
ಆ. ಶರ್ಟು (ಜುಬ್ಬಾ) ಪಾರದರ್ಶಕ, ಹಾಗೆಯೇ ಮುದುಡಿರಬಾರದು.
೪. ಸಾಮಾನ್ಯ ಅಂಶಗಳು
ಅ. ಛಾಯಾಚಿತ್ರವನ್ನು ತೆಗೆಯುವಾಗ ಹಿಂದಿನ ಪರದೆ ಗಾಢಬಣ್ಣದ್ದಾಗಿರದೇ ತಿಳಿ ಬಣ್ಣದ್ದಾಗಿರಬೇಕು.
ಆ. ಛಾಯಾಚಿತ್ರಗಳನ್ನು ಹಗಲಿನಲ್ಲಿ ಮತ್ತು ಬೆಳಕಿನಲ್ಲಿ ತೆಗೆಯ ಬೇಕು. ಛಾಯಾಚಿತ್ರವನ್ನು ತೆಗೆಯುವಾಗ ಮುಖದ ಮೇಲೆ ನೆರಳು ಬೀಳದಂತೆ ಗಮನ ಹರಿಸಬೇಕು.
ಇ. ಛಾಯಾಚಿತ್ರವನ್ನು ತೆಗೆಯುವಾಗ ಬಾಲಕರ ಅಥವಾ ಸಾಧಕರ ದೃಷ್ಟಿಯು ಎದುರಿಗೆ ಇರಬೇಕು. ಅವರ ಎರಡೂ ಕಿವಿ ಮತ್ತು ಹೆಗಲು ನೇರವಾಗಿರಬೇಕು. ಛಾಯಾಚಿತ್ರದಲ್ಲಿ ಅವರ ಎರಡೂ ಹೆಗಲು ಪೂರ್ಣ ಕಾಣಿಸಬೇಕು.
ಈ. ಕನ್ನಡಕವನ್ನು ಧರಿಸುವ ಸಾಧಕರು ಮತ್ತು ಸಾಧಕಿಯರ ಕನ್ನಡಕದ ಮೇಲೆ ಬೆಳಕು ಬೀಳದಂತೆ ಕಾಳಜಿ ವಹಿಸಬೇಕು.
ಉ. ಕೂದಲುಗಳು ಹರಡಿರಬಾರದು. ಕೂದಲುಗಳಿಗೆ ಎಣ್ಣೆ ಅಥವಾ ನೀರು ಹಚ್ಚಿ ಅದನ್ನು ಸರಿಯಾಗಿ ಬಾಚಿಕೊಂಡು ಛಾಯಾಚಿತ್ರವನ್ನು ತೆಗೆಯಬೇಕು.

 

ಸಾಧಕ (ಮಂದಹಾಸ) ಶ್ರೀ. ಗಿರಿಜಯ ಪ್ರಭುದೇಸಾಯಿ

 

ಊ. ಒಂದು ಮುಗುಳ್ನಗುವ ಮತ್ತು ಒಂದು ಮಂದಹಾಸದ ಛಾಯಾಚಿತ್ರವನ್ನು ತೆಗೆಯಬೇಕು. ‘ಛಾಯಾಚಿತ್ರಗಳು ಯಾವ ರೀತಿಯಲ್ಲಿರಬೇಕು’, ಎಂಬುದರ ಮಾದರಿಯನ್ನು ಮೇಲೆ ಕೊಡಲಾಗಿದೆ. ಸಾಧಕರು ಅದರಂತೆ ಛಾಯಾಚಿತ್ರಗಳನ್ನು ತೆಗೆದು ಅವುಗಳನ್ನು ಲೇಖನಗಳೊಂದಿಗೆ ಕಳುಹಿಸಬೇಕು.
ಮಹತ್ವದ ಸೂಚನೆ : ಕೇವಲ ಒಂದೇ ಛಾಯಾಚಿತ್ರವನ್ನು ಕಳುಹಿಸದೇ ೨-೩ ಛಾಯಾಚಿತ್ರಗಳನ್ನು ಕಳುಹಿಸಬೇಕು. ಆವಾಗ ಅದರಲ್ಲಿನ ಯೋಗ್ಯವಾದ ಛಾಯಾಚಿತ್ರವನ್ನು ಆಯ್ಕೆ ಮಾಡಬಹುದು. ‘ಛಾಯಾಚಿತ್ರಗಳನ್ನು ಯಾವಾಗ ತೆಗೆಯಲಾಗಿದೆ’, ಎಂಬುದನ್ನೂ ಕಡತದಲ್ಲಿ ಬರೆಯಬೇಕು.’

– ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೬.೧.೨೦೨೪)