ಚಳಿಗಾಲ, ಬೇಸಿಗೆಗಾಲ ಮತ್ತು ಮಳೆಗಾಲ ಈ ಋತುಗಳಲ್ಲಿ ಹಾಗೂ ಪ್ರವಾಸದಲ್ಲಿ ಅಥವಾ ಆಪತ್ಕಾಲದಲ್ಲಿ ಧೋತಿಯಿಂದಾಗುವ ವಿವಿಧ ಲಾಭಗಳು

‘ಸನಾತನ ಸಂಸ್ಥೆ’ಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಆಚಾರಧರ್ಮ ವನ್ನು ಆಚರಿಸುವುದರ ಮಹತ್ವವನ್ನು ಸನಾತನದ ನಿಯತಕಾಲಿಕೆಗಳು, ಗ್ರಂಥಗಳು ಹಾಗೂ ಜಾಲತಾಣಗಳ ಮೂಲಕ ಹೇಳಲು ಪ್ರಾರಂಭಿಸಿದರು. ಅಂದಿನಿಂದ ನಾನು ಪ್ರತಿದಿನ ಧೋತಿಯನ್ನು ಉಟ್ಟುಕೊಳ್ಳಲು ಪ್ರಯತ್ನಿಸಿದೆನು. ಆಗ ಸನಾತನ ಹಿಂದೂ ಧರ್ಮದ ನಿಜವಾದ ವಿಜ್ಞಾನಿಗಳಾದ ಋಷಿಮುನಿಗಳು ಸ್ವತಃ ಆಚರಣೆ ಮಾಡಿ ಅಭ್ಯಾಸವಾದ ನಂತರ ಎಲ್ಲರಿಗೂ ‘ಸಾಧನೆಯೆಂದು ಆಚಾರಧರ್ಮವನ್ನು ಪಾಲಿಸಲು ಏಕೆ ಹೇಳಿದ್ದಾರೆ ಹಾಗೂ ಹಾಗೆ ಆಚರಣೆ ಮಾಡುವುದರಿಂದ ನಮಗೆ ಹೇಗೆ ಲಾಭವಾಗುತ್ತದೆ’, ಎಂಬುದು ನನಗೆ ಪ್ರತ್ಯಕ್ಷ ಅನುಭವಿಸಲು ಸಾಧ್ಯವಾಯಿತು. ಆದ್ದರಿಂದ ಋಷಿಮುನಿಗಳು ಹಾಗೂ ಕಲಿಯುಗದ ವಿಜ್ಞಾನಯುಗದಲ್ಲಿಯೂ ಆಚಾರಧರ್ಮ ಪಾಲನೆ ಮಾಡಲು ಪ್ರೋತ್ಸಾಹ ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ನನ್ನಿಂದ ಕೃತಜ್ಞತೆ ವ್ಯಕ್ತವಾಯಿತು. ಈ ಕಾಲದಲ್ಲಿ ಗುರುಕೃಪೆಯಿಂದ ಧೋತಿಯ ಲಾಭದ ಬಗ್ಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಚಳಿಗಾಲದಲ್ಲಿ ಧೋತಿಯ ಸಹಾಯದಿಂದ ಚಳಿಯಿಂದ ಹೇಗೆ ರಕ್ಷಿಸಿಕೊಳ್ಳಬೇಕು ?

೧ ಅ. ಮಲಗಲು ಬೆಚ್ಚಗಿನ ಹಾಸಿಗೆ-ಹೊದಿಕೆಯ ತಯಾರಿ
೧ ಅ ೧. ಹಾಸಿಗೆ : ಒಂದು ಹತ್ತಿಯ ಧೋತಿಯನ್ನು ತೆಗೆದುಕೊಂಡು ಅದರ ಎರಡು ಮಡಿಕೆಗಳನ್ನು ಮಾಡಬೇಕು ಹಾಗೂ ಧೋತಿಯನ್ನು ಚಾಪೆಯ ಮೇಲೆ, ಗೋಧಡಿಯ ಮೇಲೆ ಅಥವಾ ಹಾಸಿಗೆಯ (ಗಾದಿಯ) ಮೇಲೆ ಹಾಸಬೇಕು.
೧ ಅ ೨. ಹೊದಿಕೆ : ಒಂದು ಹತ್ತಿಯ ಧೋತಿಯನ್ನು ತೆಗೆದುಕೊಂಡು ಅದರ ಎರಡು ಮಡಿಕೆಗಳನ್ನು ಮಾಡಬೇಕು ಹಾಗೂ ಅದರ ಹೊರಗಿನಿಂದ ಆವಶ್ಯಕತೆಗನುಸಾರ ಶಾಲು, ಹೊದಿಕೆ (ಚಾದರ) ಅಥವಾ ಗೋಧಡಿಯನ್ನು ತೆಗೆದುಕೊಳ್ಳಬೇಕು. ನಂತರ ‘ಧೋತಿಯ ಒಳಗಿನ ಭಾಗ ಮೈಮೇಲೆ ಬರುವ ಹಾಗೆ’, ಅದನ್ನು ಹೊದ್ದುಕೊಳ್ಳಬೇಕು. ಈ ಮೇಲಿನಂತೆ ಹಾಸಿಗೆ-ಹೊದಿಕೆ ಎಂದು ಹತ್ತಿಯ ಧೋತಿಯನ್ನು ಉಪಯೋಗಿಸುವುದರಿಂದ ಹಾಸಿಗೆ-ಹೊದಿಕೆ ಹೆಚ್ಚು ಪ್ರಮಾಣದಲ್ಲಿ ಬೆಚ್ಚಗೆ ಉಳಿದು ಚಳಿಯಿಂದ ರಕ್ಷಣೆಯಾಗುತ್ತದೆ.
೧ ಆ. ಕಿವಿ, ಮೂಗು ಗಂಟಲನ್ನು ರಕ್ಷಿಸಲು ಧೋತಿಯನ್ನು ಉಪಯೋಗಿಸುವುದು : ಈ ಮೇಲಿನಂತೆ ಹತ್ತಿಯ ಧೋತಿ ಯನ್ನು ತೆಗೆದುಕೊಂಡು ಅದನ್ನು ಅವಶ್ಯಕತೆಗನುಸಾರ ೧೦ ರಿಂದ ೧೫ ಸೆಂಟಿಮೀಟರ್‌ ಅಗಲದ ಮಡಿಕೆಯನ್ನು ಮಾಡಬೇಕು. ಮಡಚಿದ ಧೋತಿಯನ್ನು ಎರಡೂ ಕಿವಿಗಳ ಸುತ್ತಲೂ ಅಥವಾ ಎರಡೂ ಕಿವಿ, ಮೂಗು ಹಾಗೂ ಗಂಟಲಿನ ಸುತ್ತಲೂ ಮುಂಡಾಸಿನಂತೆ ಅಥವಾ ‘ಮಫಲರ್’ ನಂತೆ ಸುತ್ತಿಕೊಂಡರೆ ಕಿವಿ, ಮೂಗು ಹಾಗೂ ಗಂಟಲನ್ನು ಚಳಿಯಿಂದ ರಕ್ಷಿಸಿ ಕೊಳ್ಳಬಹುದು.

೨. ಬೇಸಿಗೆಯಲ್ಲಿ ಧೋತಿಯ ಸಹಾಯದಿಂದ ಕಡು ಬಿಸಿಲಿನಿಂದ ಹೇಗೆ ರಕ್ಷಣೆಯನ್ನು ಮಾಡಿಕೊಳ್ಳಬೇಕು ?

ಬಿಳಿ ಬಣ್ಣದ ಧೋತಿಯಿಂದ ಸೂರ್ಯಪ್ರಕಾಶವು ಪ್ರತಿ ಫಲಿಸುತ್ತದೆ. ಆದ್ದರಿಂದ ಕಡು ಬಿಸಿಲಿನಲ್ಲಿ ಕೆಲಸವನ್ನು ಮಾಡು ವಾಗ ಅವಶ್ಯಕತೆಗನುಸಾರ ತಲೆ, ಕಿವಿ ಹಾಗೂ ಮೂಗಿನ ಸುತ್ತಲೂ ಧೋತಿಯನ್ನು ಸುತ್ತಿಕೊಳ್ಳುವುದರಿಂದ ಬಿಸಿಲಿನಿಂದ ನಮ್ಮ ರಕ್ಷಣೆಯಾಗುತ್ತದೆ. ತೀವ್ರ ಬೇಸಿಗೆಯ ಕಾಲದಲ್ಲಿ ಧೋತಿಯನ್ನು ಸ್ವಲ್ಪ ಒದ್ದೆ ಮಾಡಿ ಅದನ್ನು ಮೈಮೇಲೆ ಹೊದ್ದುಕೊಂಡರೆ ಬಿಸಿಲಿನ ತೀವ್ರತೆ ಕಡಿಮೆಯಾಗುತ್ತದೆ.

೩. ಮಳೆಗಾಲದಲ್ಲಿ ಧೋತಿಯನ್ನು ಉಪಯೋಗಿಸುವುದು ಲಾಭದಾಯಕವಾಗಿದೆ !

ಮಳೆಗಾಲದಲ್ಲಿ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿದ್ದು ಸೂರ್ಯ ಪ್ರಕಾಶದ ಪ್ರಮಾಣ ಕಡಿಮೆಯಿರುತ್ತದೆ. ಆದ್ದರಿಂದ ಇತರ ಬಟ್ಟೆಗಳು ಅಥವಾ ಹಾಸಿಗೆ-ಹೊದಿಕೆ ಗಳ ತುಲನೆಯಲ್ಲಿ ಧೋತಿಯನ್ನು ಕಡಿಮೆ ಸ್ಥಳದಲ್ಲಿ ಒಣಗಿಸ ಬಹುದು. ಹಾಗಾಗಿ ಈ ಮೇಲಿನಂತೆ ಧೋತಿ ಉಪಯೋಗಿಸುವುದು ಮಳೆಗಾಲದಲ್ಲಿಯೂ ಲಾಭದಾಯಕವಾಗಿದೆ.

೪. ಕರವಸ್ತ್ರ, ಧೋತಿಯಂತಹ ತೆಳ್ಳಗಿನ ಬಟ್ಟೆಗಳನ್ನು ಹೇಗೆ ತೊಳೆಯಬೇಕು ?

ಕರವಸ್ತ್ರ, ಧೋತಿಯಂತಹ ತೆಳ್ಳಗಿನ ಬಟ್ಟೆಗಳನ್ನು ಸಾಬೂನಿನ ಹುಡಿಯನ್ನು ಹಾಕಿದ ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿಟ್ಟು ಅದನ್ನು ಕೈಯಿಂದ ಅಥವಾ ಪ್ಲಾಸ್ಟಿಕ್‌ನ ಸ್ಕ್ರಬ್ಬರ್‌ನಿಂದ ಉಜ್ಜಿ ತೊಳೆಯಬೇಕು. (ಕರವಸ್ತ್ರ, ಧೋತಿಯಂತಹ ತೆಳ್ಳಗಿನ ಬಟ್ಟೆ ಗಳನ್ನು ತೊಳೆಯಲು ‘ಬ್ರಶ್’ ಉಪಯೋಗಿಸಿದರೆ ಬಟ್ಟೆಗಳ ಬಾಳಿಕೆ ಕಡಿಮೆಯಾಗುತ್ತದೆ.) ಆ ಮೇಲೆ ಈ ಬಟ್ಟೆಗಳನ್ನು ಸ್ವಚ್ಚ ನೀರಿನಲ್ಲಿ ೨-೩ ಬಾರಿ ಮುಳುಗಿಸಿ ತೆಗೆದು ಎರಡೂ ಕೈಗಳಲ್ಲಿ ಹಿಡಿದು ಹಿಂಡಿ ಒಣಗಲು (ಧೋತಿ ಇದ್ದರೆ ೧-೨ ಮಡಿಕೆ ಮಾಡಿ) ಹಾಕಬೇಕು.

೫. ಧೋತಿಯ ಗುಣವೈಶಿಷ್ಟ್ಯದಿಂದಾಗುವ ವಿವಿಧ ನಿಯಮಿತ ಲಾಭಗಳು

ಅ. ಧೋತಿಯು ಹತ್ತಿಯ ಹಾಗೂ ಬಿಳಿ ಬಣ್ಣದ್ದಾಗಿರುವುದರಿಂದ ಅದು ಇತರ ವಸ್ತ್ರಗಳಿಗಿಂತ ಹೆಚ್ಚು ಸಾತ್ತ್ವಿಕವಾಗಿರುತ್ತದೆ.
ಆ. ಈ ಮೇಲಿನ ಉಪಯೋಗಕ್ಕಾಗಿ ಯಾರಿಗಾದರೂ ಹಳೆಯ ಧೋತಿ ಸಿಗದಿದ್ದರೂ ಪೇಟೆಯಲ್ಲಿ ಕಡಿಮೆ ಗುಣಮಟ್ಟದ ಹಾಗೂ ಶೇ. ೧೦೦ ರಷ್ಟು ಹತ್ತಿಯಿಲ್ಲದಿರುವ ಧೋತಿಗಳು ಕಡಿಮೆ ಬೆಲೆಗೆ ಸಿಗುತ್ತವೆ. ಇಂತಹ ಧೋತಿಗಳು ಉಟ್ಟುಕೊಳ್ಳಲು ಆಗದಿದ್ದರೂ ಈ ಮೇಲಿನ ಉದ್ದೇಶಕ್ಕಾಗಿ ಉಪಯುಕ್ತವಾಗಿವೆ.
ಇ. ಹಾಸಿಗೆ-ಹೊದಿಕೆಗಾಗಿ ಉಪಯೋಗಿಸಿದ ಧೋತಿಗಳು ಹೊಲಸಾಗಿದ್ದರೆ ಅಥವಾ ಅವುಗಳಿಗೆ ಬೆವರಿನ ದುರ್ಗಂಧ ಬರುತ್ತಿದ್ದರೆ ೮ ಅಥವಾ ೧೫ ದಿನಗಳಿಗೊಮ್ಮೆ ಅವುಗಳನ್ನು ಕಡಿಮೆ ಪರಿಶ್ರಮದಲ್ಲಿ ತೊಳೆಯಬಹುದು. ಅದೇ ರೀತಿ ಅವು ಇತರ ಹಾಸಿಗೆ-ಹೊದಿಕೆಗಳ ತುಲನೆಯಲ್ಲಿ ಅತ್ಯಲ್ಪ ಸಮಯದಲ್ಲಿ ಕಡಿಮೆ ಸ್ಥಳದಲ್ಲಿ ಒಣಗುತ್ತವೆ.
ಈ. ಪ್ರವಾಸದಲ್ಲಿ ಅಥವಾ ಆಪತ್ಕಾಲದಲ್ಲಿ ಅತ್ಯಲ್ಪ ಸಾಹಿತ್ಯಗಳನ್ನು ಇಡಲು ಸ್ಥಳ ಲಭ್ಯವಿದ್ದರೆ ಈ ಮೇಲಿನಂತೆ ೨ ಧೋತಿ ಹಾಗೂ ಒಂದು ಶಾಲು ಇಟ್ಟುಕೊಂಡರೂ ಆಗುತ್ತದೆ. ಇತರ ಬಟ್ಟೆಗಳ ತುಲನೆಯಲ್ಲಿ ಅವುಗಳ ಭಾರವೂ ಕಡಿಮೆಯಿರುತ್ತದೆ. ಅವುಗಳನ್ನು ಸಣ್ಣ ಚೀಲದಲ್ಲಿಯೂ ಇಟ್ಟುಕೊಳ್ಳಬಹುದು. ಈ ಮೇಲಿನ ಉದ್ದೇಶಗಳನ್ನು ಈಡೇರಿಸಲು ಹಳೆಯ ಧೋತಿ ಅಥವಾ ತೆಳ್ಳಗಿನ ಹತ್ತಿಯ ಸೀರೆಯನ್ನು ಕೂಡ ಉಪಯೋಗಿಸಬಹುದು.’

– ಶ್ರೀ. ಗಿರಿಧರ ಭಾರ್ಗವ ವಝೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೮.೧.೨೦೨೩)