ಅಮೇರಿಕಾದಲ್ಲಿ ಅಪರಾಧಿಗೆ ಇದೇ ಮೊದಲ ಬಾರಿ ನೈಟ್ರೋಜನ್ ಅನಿಲ (ಗ್ಯಾಸ್) ಬಿಟ್ಟು ಮರಣದಂಡನೆ !

ವಾಷಿಂಗ್ಟನ್ – ಅಲಬಾಮಾ ರಾಜ್ಯದಲ್ಲಿ ಕೆನೆಥ ಸ್ಮಿಥಗೆ ಒಂದು ಕೊಲೆ ಪ್ರಕರಣದಲ್ಲಿ ಮರಣದಂಡನೆಯ ಶಿಕ್ಷೆ ಕೊಡಲಾಗಿತ್ತು. ಅವನಿಗೆ ನೈಟ್ರೋಜನ್ ಅನಿಲ ಬಿಟ್ಟು ಮರಣದಂಡನೆಯ ಶಿಕ್ಷೆ ಕೊಡಲಾಯಿತು. ಅಮೇರಿಕಾದಲ್ಲಿ ಇದೇ ಮೊದಲಬಾರಿಗೆ ನೈಟ್ರೋಜನ್ ಅನಿಲ ಬಿಟ್ಟು ಅಪರಾಧಿಗೆ ಮರಣಶಿಕ್ಷೆ ಕೊಡಲಾಯಿತು. ಅಲಬಾಮಾ ಕಾರಾಗೃಹದ ಅಧಿಕಾರಿಗಳು ಕೊಟ್ಟಿರುವ ಮಾಹಿತಿಗನುಸಾರ ಸ್ಮಿಥನನ್ನು ಮೊದಲು ಒಂದು ಛೇಂಬರ್‌ಗೆ ಕರೆದೊಯ್ದು ಸ್ಟ್ರೆಚರ್‌ಗೆ ಕಟ್ಟಲಾಯಿತು. ಅವನ ಮುಖದ ಮೇಲೆ ಮುಖವಾಡವನ್ನು ಹಾಕಲಾಯಿತು ಮತ್ತು ಅದರಲ್ಲಿ ನೈಟ್ರೋಜನ್ ಅನಿಲವನ್ನು ಬಿಡಲಾಯಿತು.

ಅಮೇರಿಕಾದಲ್ಲಿ ೧೯೮೦ ರಿಂದ ಮರಣದಂಡನೆಯನ್ನು ವಿಷದ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತಿತ್ತು. ಅದರಿಂದ ಹೃದಯ ಕೆಲಸಮಾಡುವುದನ್ನು ನಿಲ್ಲಿಸುತ್ತದೆ; ಆದರೆ ಅನೇಕ ರಾಜ್ಯಗಳಲ್ಲಿ ಈ ಪದ್ಧತಿಯಿಂದ ಸಮಸ್ಯೆಗಳಾಗುತ್ತಿತ್ತು. ೨೦೨೨ ರಲ್ಲಿ ಸ್ಮಿಥ್‌ಗೆ ವಿಷದ ಚುಚ್ಚುಮದ್ದಿನ ಮೂಲಕ ಶಿಕ್ಷೆ ಕೊಡುವ ಪ್ರಯತ್ನ ಮಾಡಲಾಯಿತು; ಆದರೆ ಅವನು ಬದುಕಿದನು. ಆದ್ದರಿಂದ ಅವನಿಗೆ ನೈಟ್ರೋಜನ್ ಅನಿಲ ಬಿಟ್ಟು ಮರಣದಂಡನೆ ನೀಡಲಾಯಿತು.

(ಸೌಜನ್ಯ: CBS Evening News)