ಶಿಲ್ಪಿ ಅರುಣ ಯೋಗಿರಾಜ ಇವರು ಹೇಳಿದ ಅನುಭೂತಿ !

ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತರ ಶ್ರೀರಾಮಲಲ್ಲಾನ ಮೂರ್ತಿಯಲ್ಲಿನ ಭಾವ ಸಂಪೂರ್ಣವಾಗಿ ಬದಲಾಗಿದೆ !

ನವ ದೆಹಲಿ – ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಶ್ರೀರಾಮಲಲ್ಲಾ (ಶ್ರೀ ರಾಮನ ಮಗುವಿನ ರೂಪ) ಸಂಪೂರ್ಣವಾಗಿ ಬೇರೆಯೆ ಕಾಣುತ್ತಿದ್ದಾನೆ. ಇದು ನನ್ನ ಕಾರ್ಯವಲ್ಲ ಎಂದು ಅನಿಸಿತು. ಆಭರಣ ತೊಡಿಸುವ ವಿಧಿಯ ನಂತರ ಶ್ರೀರಾಮಲಲ್ಲಾನ ರೂಪ ಸಂಪೂರ್ಣವಾಗಿ ಬದಲಾಗಿದೆ. ಯಾವಾಗ ಮೂರ್ತಿ ನಿರ್ಮಾಣವಾಯಿತು ಆಗ ಮೂರ್ತಿಯ ರೂಪ ಬೇರೆ ಆಗಿತ್ತು ಮತ್ತು ಈಗ ಮಂದಿರದ ಗರ್ಭಗೃಹದಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಶ್ರೀರಾಮಲಲ್ಲಾನ ರೂಪ ಬೇರೆ ಆಗಿದೆ. ಎರಡು ರೂಪ,(ಪ್ರತಿಷ್ಠಾಪನೆಯ ಮೊದಲು ಮತ್ತು ನಂತರ) ಬಹಳ ಬೇರೆ ಕಾಣುತ್ತಿದೆ. ದೇವರು ಬೇರೆ ಬೇರೆ ರೂಪ ತಾಳಿದ್ದಾನೆ, ಎಂದು ಶ್ರೀರಾಮಲಲ್ಲಾ ಮೂರ್ತಿ ಕೆತ್ತಿರುವ ಶಿಲ್ಪಿ ಶ್ರೀ. ಅರುಣ ಯೋಗಿರಾಜವರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಅನುಭೂತಿ ಹೇಳಿದರು.

ಶ್ರೀ. ಅರುಣ ಯೋಗಿರಾಜವರು ಶ್ರೀರಾಮಲಲ್ಲಾನ ಮೂರ್ತಿಯ ಸಂದರ್ಭದಲ್ಲಿ ಹೇಳಿರುವ ಅಂಶಗಳು !

ನಾನು ನನ್ನ ಭಾವನೆಗಳು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ !

ಇದು ನಮ್ಮ ಪೂರ್ವಜರ ೩೦೦ ವರ್ಷಗಳ ತಪಸ್ಸಿನ ಫಲವಾಗಿದೆ. ಬಹುಷಃ ದೇವರು ನನ್ನನ್ನು ಅದೇ ಉದ್ದೇಶಕ್ಕಾಗಿ ಈ ಭೂಮಿಯಲ್ಲಿ ಕಳುಹಿಸಿದ್ದಾನೆ. ಈ ಜನ್ಮದಲ್ಲಿ ಪ್ರಭು ಶ್ರೀರಾಮನ ಮೂರ್ತಿ ಕೆತ್ತುವುದು ನನ್ನ ಯೋಗ ಇತ್ತು. ನಾನು ಈಗ ಯಾವ ಭಾವನೆಯಲ್ಲಿ ಇದ್ದೇನೆ ಇದು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.

ನಮ್ಮ ಮನೆತನದವರು ೩೦೦ ವರ್ಷಗಳಿಂದ ಮೂರ್ತಿಗಳನ್ನು ಕೆತ್ತುತ್ತಿದ್ದಾರೆ !

ನಮ್ಮದು ಶಿಲ್ಪಿಗಳ ಮನೆತನವಾಗಿದೆ. ನಮ್ಮ ಮನೆಯಲ್ಲಿ ೩೦೦ ವರ್ಷಗಳಿಂದ ಕಲ್ಲಿನಲ್ಲಿ ಮೂರ್ತಿಗಳು ಕೆತ್ತುತ್ತಿದ್ದೇವೆ. ಶಿಲ್ಪಿ ಎಂದು ನನ್ನದು ಐದನೆಯ ತಲೆಮಾರು. ನನ್ನ ತಂದೆಯವರೇ ನನ್ನ ಗುರುಗಳು. ಶ್ರೀ ರಾಮನ ಕೃಪೆಯಿಂದ ನನಗೆ ಶ್ರೀರಾಮಲಲ್ಲಾನ ಮೂರ್ತಿ ಕೆತ್ತುವ ಸೇವೆ ದೊರೆಯಿತು. ಈಗ ದೇವರೇ ನನಗೆ, ‘ಬಾ ಮತ್ತು ನನ್ನ ಮೂರ್ತಿ ಕೆತ್ತು’ ಎಂದು ಹೇಳಿದರು. ಈ ಅನುಭವ ಬಹಳ ಸುಂದರ ಮತ್ತು ಮನಸ್ಸಿಗೆ ಪ್ರಸನ್ನಗೊಳಿಸುವುದಾಗಿತ್ತು.

  • ಶ್ರೀರಾಮಲಲ್ಲಾ ಬಾಲಕ ರೂಪದಲ್ಲಿ ಕಾಣಬೇಕು, ಅದಕ್ಕಾಗಿ ಅನೇಕ ಮಕ್ಕಳ ಜೊತೆಗೆ ಬಹಳಷ್ಟು ಸಮಯ ಕಳೆದು ಅವರ ನಿರೀಕ್ಷಣೆ ಮಾಡಿದ್ದೇನೆ.

  • ಶ್ರೀ ರಾಮಲಲ್ಲಾನ ಮೂರ್ತಿ ತಯಾರಿಸುವಾಗ ಪ್ರತಿದಿನ ನಾನು ಜನರ ಭಾವನೆಯ ಯೋಚನೆ ಮಾಡುತ್ತಿದ್ದೆ.

‘ಪ್ರಭು ರಾಮಲಲ್ಲ ನನಗೆ ಬಾಲಕ ರೂಪದಲ್ಲಿ ಆಶೀರ್ವಾದ ನೀಡುತ್ತಿರುವ ಹಾಗೆ ಕಾಣುತ್ತಿತ್ತು’, ಎಂಬುದನ್ನು ನಾನು ಅನುಭವಿಸುವ ಪ್ರಯತ್ನ ಮಾಡಿದ್ದೆ. ೫ ವರ್ಷದ ರಾಮನ ಮೂರ್ತಿ ಕೆತ್ತುವುದು ಇದು ನಿಜವಾಗಿಯೂ ಸವಾಲೇ ಆಗಿತ್ತು. ನಿಜವೆಂದರೆ ಕಲ್ಲಿನಲ್ಲಿ ಒಂದು ಮುಖ ಕೆತ್ತುವುದು ಅಂದರೆ, ನಾನು ಅದನ್ನು ೨ – ೩ ಗಂಟೆಯಲ್ಲಿ ಕೆತ್ತು ಬಹುದು; ಆದರೆ ರಾಮಲಲ್ಲಾನ ಮೂರ್ತಿ ಬೇರೆ ಆಗಿತ್ತು. ನಾವೆಲ್ಲರೂ ಮೊದಲು ೫ ವರ್ಷದ ಹುಡುಗರ ಮಾಹಿತಿ ಪಡೆದೆವು. ನಾನು ಚಿಕ್ಕ ಮಕ್ಕಳ ಬಹಳಷ್ಟು ಛಾಯಾಚಿತ್ರಗಳನ್ನು ನೋಡಿದೆ. ನಾನು ೧ ಸಾವಿರ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದೇನೆ. ಶ್ರೀರಾಮಲಲ್ಲಾನ ಕಣ್ಣಿನಲ್ಲಿ ಶ್ರದ್ದೆ, ಭಕ್ತಿ ಮತ್ತು ಭಾವ ಈ ಭಾವನೆ ಎದ್ದು ಬರಬೇಕು, ಅದಕ್ಕಾಗಿ ನಾನು ಮಕ್ಕಳ ಜೊತೆಗೆ ಬಹಳಷ್ಟು ಸಮಯ ಕಳೆದೆ. ಚಿಕ್ಕ ಮಕ್ಕಳು ನಗುವಾಗ ಅವರ ಕಣ್ಣಿನಲ್ಲಿ ಬರುವ ತೇಜ ತಿಳಿಯಲು ಪ್ರಯತ್ನಪಟ್ಟೆ. ಅವರ ಕೆನ್ನೆಯ ಮೇಲೆ ಬರುವ ಏರಿಳಿತ ತಿಳಿದುಕೊಂಡೆ. ಅದರ ಆಧಾರದಲ್ಲಿ ಮೂರ್ತಿಗೆ ಅಂತಿಮ ಸ್ವರೂಪ ನೀಡಿದೆ.

೫ ವರ್ಷದ ಮಕ್ಕಳ ಮುಖಗಳನ್ನು ಮನಸ್ಸಿನಲ್ಲಿ ಮತ್ತು ತಲೆಯಲ್ಲಿ ಇಟ್ಟುಕೊಂಡು ಮೂರ್ತಿ ಕೆತ್ತುತ್ತಿದ್ದೆ !

ಯಾವಾಗ ಮೂರ್ತಿಗಳ ಮುಖದ ಕೆಲಸ ಮಾಡುವುದಿತ್ತು, ಆಗ ಮೂರ್ತಿಯ ಮುಖದ ಮೇಲೆ ಭಾವ ತರಬೇಕಾಗುತ್ತದೆ ಆಗ ಅದರಲ್ಲಿ ತಿದ್ದುವ ಅವಕಾಶ ಕಡಿಮೆ ಇರುತ್ತದೆ. ಅದಕ್ಕಾಗಿ ಯಾವ ಶಿಲೆಯಲ್ಲಿ ಮೂರ್ತಿ ಕೆತ್ತುತ್ತಿರುತ್ತೇವೆ, ಆ ಶಿಲೆಯ ಜೊತೆಗೆ ಹೆಚ್ಚು ಕಾಲ ಇರುವುದು ಅವಶ್ಯಕವಾಗಿರುತ್ತದೆ. ನಾನು ನನ್ನ ಕೆಲಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುತ್ತಿದ್ದೆ. ಎರಡನೆಯ ದಿನ ಏನು ಮಾಡಬೇಕು ? ಅದರ ಅಭ್ಯಾಸ ಮೊದಲ ದಿನವೇ 5 ವರ್ಷದ ಮಕ್ಕಳ ಮುಖ ಮನಸ್ಸಿನಲ್ಲಿ ಮತ್ತು ತಲೆಯಲ್ಲಿ ಇಟ್ಟುಕೊಂಡು ಮೂರ್ತಿ ಕೆತ್ತುತ್ತಿದ್ದೆ. ಅದರಿಂದ ಶ್ರೀರಾಮನ ಮುಖದ ಮೇಲೆ ಮುಗ್ಧಹಾಸ್ಯ ನಿರ್ಮಾಣವಾಯಿತು.

೭ ತಿಂಗಳು ಹಗಲಿರಳು ಪ್ರಭು ಶ್ರೀರಾಮನ ಯೋಚನೆ ಇರುತ್ತಿತ್ತು !

ಕಳೆದ ೭ ತಿಂಗಳಿಂದ ನಾನು ಶ್ರೀರಾಮಲಲ್ಲಾನ ಮೂರ್ತಿ ಕೃಷ್ಣ ಶಿಲೆಯಲ್ಲಿ ಕೆತ್ತುತ್ತಿದ್ದೆ. ಹಗಲಿರಳು ಮನಸ್ಸಿನಲ್ಲಿ ಇದೇ ಯೋಚನೆ ಇರುತ್ತಿತ್ತು. ‘ಸಂಪೂರ್ಣ ದೇಶಕ್ಕೆ ನಾನು ಕೆತ್ತಿರುವ ಮೂರ್ತಿಯಲ್ಲಿ ಪ್ರಭು ಶ್ರೀರಾಮನ ದರ್ಶನ ಹೇಗೆ ಆಗುವುದು ?’ ದೇವರ ಆಶೀರ್ವಾದವಿತ್ತು; ಆದ ಕಾರಣ ನಾನು ಮೂರ್ತಿ ಕೆತ್ತಲು ಸಾಧ್ಯವಾಯಿತು.

‘ಮೂರ್ತಿ ಜನರಿಗೆ ಇಷ್ಟಾ ಆಗುವುದೋ ಅಥವಾ ಇಲ್ಲವೋ ? ಅನಿಸುತ್ತಿತ್ತು !

ನನಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ನನ್ನ ಮಗಳು ೭ ವರ್ಷದವಳಾಗಿದ್ದಾಳೆ. ಆಕೆಗೆ ನಾನು ಕೇಳುತ್ತಿದ್ದೆ, ಮಗಳೇ ಈ ಮೂರ್ತಿ ಹೇಗೆ ಕಾಣುತ್ತದೆ ? ಆಗ ಅವಳು ‘ಚಿಕ್ಕ ಹುಡುಗನ ಹಾಗೆ ಕಾಣುತ್ತಿದೆ.’ ಎಂದು ಹೇಳುತ್ತಿದ್ದಳು. ನನಗೆ ಮೂರ್ತಿ ಕೆತ್ತುವಾಗ, ಮೂರ್ತಿ ಜನರಿಗೆ ಇಷ್ಟ ಆಗುವುದೋ ಅಥವಾ ಇಲ್ಲವೋ ? ಕೇವಲ ಇಷ್ಟೇ ಅನಿಸುತ್ತಿತ್ತು, ಆದರೆ ಜನರಿಗೆ, ಎಲ್ಲಾ ಭಾರತೀಯರಿಗೆ ಈ ಮೂರ್ತಿ ಇಷ್ಟ ಆಗಿದೆ. ಅವರೆಲ್ಲರೂ ಮನಪೂರ್ವಕವಾಗಿ ಈ ಮೂರ್ತಿಗೆ ನಮಸ್ಕಾರ ಮಾಡಿದ್ದಾರೆ, ಇದು ನನಗಾಗಿ ಬಹಳ ಸಮಾಧಾನದ ವಿಷಯವಾಗಿದೆ ಎಂದು ಹೇಳಿದರು.

ಮೂರ್ತಿ ಕೆತ್ತುತ್ತಿರುವಾಗ ಪ್ರತಿದಿನ ಒಂದು ಕೋತಿ ಬರುತ್ತಿತ್ತು !

ಯಾವಾಗ ನಾನು ಈ ಮೂರ್ತಿ ಕೆತ್ತುತ್ತಿದ್ದೆ ಆಗ ಪ್ರತಿದಿನ ಸಂಜೆ ೫ ಗಂಟೆಯ ಸುಮಾರು ಒಂದು ಕೋತಿ ಬಂದು ಕುಳಿತುಕೊಳ್ಳುತ್ತಿತ್ತು. ಕೆಲವು ದಿನ ಚಳಿ ಇರುತ್ತಿತ್ತು; ಅದಕ್ಕಾಗಿ ನಾವು ಮೂರ್ತಿ ಶಾಲೆಯ ಬಾಗಿಲು ಮುಚ್ಚುತ್ತಿದ್ದೆವು, ಆಗ ಕೋತಿ ಬಂದು ಕದ ತಟ್ಟುತ್ತಿತ್ತು. ನಾನು ಯಾವಾಗ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿ’ನ ಕಾರ್ಯದರ್ಶಿ ಶ್ರೀ. ಚಂಪತ ರಾಯ ಇವರಿಗೆ ಈ ವಿಷಯ ಹೇಳಿದೆ, ಆಗ ಅವರು, ‘ಸಾಕ್ಷಾತ ಹನುಮಂತ ನೀವು ಮಾಡುವ ಶ್ರೀರಾಮಲಲ್ಲಾನ ಮೂರ್ತಿ ಹೇಗೆ ನಿರ್ಮಾಣವಾಗುತ್ತಿದೆ ಎಂಬುದು ನೋಡುವುದಿರಬಹುದು ? ಎಂದು ಹೇಳಿದರು. ನಾನು ಯಾವಾಗ ನಿದ್ರಿಸಲು ಕಣ್ಣು ಮುಚ್ಚುತ್ತಿದ್ದೆ, ಆಗಲೂ ಕೂಡ ನನ್ನ ಎದುರು ಮೂರ್ತಿ ಕಾಣುತ್ತಿತ್ತು ಎಂದು ಹೇಳಿದರು.