ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಇನ್ನೂ 2 ಮೂರ್ತಿಗಳನ್ನು ಸ್ಥಾಪಿಸಲಾಗುವುದು!

ಕಪ್ಪು ಶಿಲೆಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪಿಸಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಒಟ್ಟು 3 ಶಿಲ್ಪಕಾರರನ್ನು 3 ಮೂರ್ತಿಗಳನ್ನು ತಯಾರಿಸುವಂತೆ ಹೇಳಿತ್ತು. ಈ ಮೂವರಲ್ಲಿ ಅರುಣ ಯೋಗಿರಾಜ ಅವರು ತಯಾರಿಸಿದ ವಿಗ್ರಹವನ್ನು ಆಯ್ಕೆ ಮಾಡಿ ಅದನ್ನು ಮಂದಿರದಲ್ಲಿ ಸ್ಥಾಪಿಸಿ ಅದರ ಪ್ರಾಣ ಪ್ರತಿಷ್ಠಾಪಪನೆ ಮಾಡಲಾಯಿತು.ಈಗ ಇನ್ನುಳಿದ 2 ಮೂರ್ತಿಗಳನ್ನು ಈ ಮಂದಿರಗಳ ಮೇಲಿನ ಮಹಡಿಗಳಲ್ಲಿ ಸ್ಥಾಪಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ಈ ಮೂರ್ತಿಗಳ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ಇದರಲ್ಲಿ ಒಂದು ಮೂರ್ತಿ ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದ್ದರೆ, ಇನ್ನೊಂದು ಮೂರ್ತಿ ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ಅಥವಾ ಇವೆರಡರ ಎತ್ತರ 51 ಇಂಚು ಗಳಷ್ಟಿವೆ. ಈ ಮೂರ್ತಿಯೂ ಕಮಲದ ಮೇಲೆ ನಿಂತಿದೆ.

1. ಕಪ್ಪು ಕಲ್ಲಿನ ವಿಗ್ರಹವನ್ನು ಕರ್ನಾಟಕದ ಶಿಲ್ಪಕಾರ ಗಣೇಶ ಭಟ ಅವರು ತಯಾರಿಸಿದ್ದಾರೆ. ಗಣೇಶ ಭಟ ಅವರು ಇಲ್ಲಿಯವರೆಗೆ 1 ಸಾವಿರಕ್ಕಿಂತ ಹೆಚ್ಚು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಅವರು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬ್ರಿಟನ್, ಜರ್ಮನಿ, ಫ್ರಾನ್ಸ್, ಅಮೇರಿಕಾ ಮತ್ತು ಇಟಲಿಯಲ್ಲಿ ಸ್ಥಾಪಿಸಲಾಗಿದೆ.

ಅಮೃತಶಿಲೆಯ ಕಲ್ಲಿನಲ್ಲಿ ಬಿಳಿ ಮೂರ್ತಿ

2. ಮತ್ತೊಂದು ಮೂರ್ತಿಯನ್ನು ರಾಜಸ್ಥಾನ ಮೂಲದ ಶಿಲ್ಪಕಾರ ಸತ್ಯನಾರಾಯಣ ಪಾಂಡೆ ತಯಾರಿಸಿದ್ದಾರೆ. ಈ ಮೂರ್ತಿಯನ್ನು ಮಕರಾನಾದ ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಸತ್ಯನಾರಾಯಣ ಪಾಂಡೆ ಅವರು ಜಯಪುರದ ಪ್ರಸಿದ್ಧ ಶಿಲ್ಪಕಾರ ರಾಮೇಶ್ವರ ಲಾಲ್ ಪಾಂಡೆ ಅವರ ಪುತ್ರ ಆಗಿದ್ದಾರೆ. ಅವರ ಕುಟುಂಬದವರು ಕಳೆದ 7 ದಶಕಗಳಿಂದ ಅಮೃತಶಿಲೆಯ ಶಿಲ್ಪಗಳನ್ನು ತಯಾರಿಸುತ್ತಿದ್ದಾರೆ.