ತೆಲಂಗಾಣದ ಮೇಡಕ ಜಿಲ್ಲೆಯ ಒಂದು ಹಳ್ಳಿಯಲ್ಲಿಯ ಘಟನೆ !
ಸಂಗಾರೆಡ್ಡಿ (ತೆಲಂಗಾಣ) – ತೆಲಂಗಾಣದ ಮೇಡಕ ಜಿಲ್ಲೆಯ ಗ್ರಾಮವೊಂದರಲ್ಲಿ ಒಬ್ಬ ಮುಸಲ್ಮಾನ ಯುವಕನು ಕೇಸರಿ ಧ್ವಜಕ್ಕೆ ಅವಮಾನ ಮಾಡಿ ಅದರ ವೀಡಿಯೋವನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದನು. ಇದರಿಂದ ರೊಚ್ಚಿಗೆದ್ದ ಜನರು ಈ ಯುವಕನನ್ನು ಹುಡುಕಿ ಅವನನ್ನು ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಈ ವೇಳೆ ಜನರು ‘ಜಯ ಶ್ರೀರಾಮ್‘ ಘೋಷಣೆ ಕೂಗುತ್ತಿದ್ದರು. ಆನಂತರ ಅವನ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದರಿಂದ ಪೊಲೀಸರಲ್ಲಿ ದೂರನ್ನು ದಾಖಲಿಸಲಾಯಿತು. ಪೋಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ಈ ಯುವಕನೂ ಕೂಡ ಗ್ರಾಮಸ್ಥರ ವಿರುದ್ಧ ಥಳಿಸಿರುವ ದೂರನ್ನು ನೀಡಿದ ನಂತರ ಪೊಲೀಸರು ಗ್ರಾಮಸ್ಥರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಸೌಜನ್ಯ:BIHAR 24 NEWS)
ಸಂಪಾದಕರ ನಿಲುವು* ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕಾನೂನು ಬದ್ಧ ಮಾರ್ಗಗಳನ್ನು ಪ್ರಯತ್ನಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜನರು ಈಗ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದರೆ, ಅದು ಸರಕಾರದ ಮತ್ತು ಪೊಲೀಸ್ ರ ವೈಫಲ್ಯವೇ ಆಗಿದೆ. ಈಗ ಅದರ ಬಗ್ಗೆ ಯೋಚಿಸುವುದು ಅವಶ್ಯಕವಾಗಿದೆ ! |