ಸರ್ಕಾರಿ ಅಧಿಕಾರಿ ಶಿವ ಬಾಲಕೃಷ್ಣ ಅವರಿಂದ 100 ಕೋಟಿ ಮೌಲ್ಯದ ಆಸ್ತಿ ಜಪ್ತಿ!

  • ಬಾಲಕೃಷ್ಣ ಅವರು ‘ತೆಲಂಗಾಣ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ’ದ ಕಾರ್ಯದರ್ಶಿ ಆಗಿದ್ದಾರೆ.

  • ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ ಬಳಿಕ ಬಂಧನ

ಭಾಗ್ಯನಗರ (ತೇಲಂಗಾಣ) – ತೇಲಂಗಾಣದ ಭ್ರಷ್ಟಾಚಾರ ನಿಗ್ರಹ ದಳವು ` ತೇಲಂಗಾಣದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ’ದ ( ತೇಲಂಗಾಣ ಭೂಮಿ ಖರೀದಿ- ಮಾರಾಟ ನಿಯಂತ್ರಣ ಪ್ರಾಧಿಕಾರ) ಸರ್ಕಾರಿ ಇಲಾಖೆಯ ಕಾರ್ಯದರ್ಶಿ ಶಿವ ಬಾಲಕೃಷ್ಣ ಅವರ ಮನೆ ಮೇಲೆ ದಾಳಿ ನಡೆಸಿದೆ. ಆ ವೇಳೆ ಅವರ ಮನೆರ ಪರಿಸರದಿಂದ 100 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಯಿತು. ಶಿವ ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆಗಳು ಮತ್ತು ಕಚೇರಿಗಳು ಸೇರಿದಂತೆ 20 ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಈ ಸಮಯದಲ್ಲಿ ಬಾಲಕೃಷ್ಣರನ್ನು ಬಂಧಿಸಲಾಯಿತು.

1. ಈ ಸಮಯದಲ್ಲಿ 40 ಲಕ್ಷ ನಗದು, 2 ಕೆಜಿ ಚಿನ್ನ, 60 ದುಬಾರಿ ಕೈಗಡಿಯಾರಗಳು, 14 ಸ್ಮಾರ್ಟ್ ಫೋನ್ ಗಳು, 10 ಲ್ಯಾಪ್ ಟಾಪ್ ಗಳು ಹಾಗೂ ಸ್ಥಿರಾಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

2. ಇದೆಲ್ಲದರ ಒಟ್ಟು ಮೌಲ್ಯ 100 ಕೋಟಿ ರೂಪಾಯಿಗಿಂತಲೂ ಅಧಿಕವಿದೆಯೆಂದು ಹೇಳಲಾಗಿದೆ.

3. ಬಾಲಕೃಷ್ಣ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

4. ಬಾಲಕೃಷ್ಣ ಅವರು ‘ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ’ದ ನಿರ್ದೇಶಕರಾಗಿದ್ದಾರೆ.

5. ಜಮೀನು ಖರೀದಿ-ಮಾರಾಟಕ್ಕೆ ಸಂಬಂಧಿಸಿದ ವ್ಯವಹಾರ ನಡೆಸುವ ಹಲವು ಸಂಸ್ಥೆಗಳಿಗೆ ‘ಪರ್ಮಿಟ್ ಸೌಲಭ್ಯ’ (ಅನುಮತಿ ಸೌಲಭ್ಯ) ಕಲ್ಪಿಸಿ ಕೋಟ್ಯಂತರ ರೂಪಾಯಿಗಳನ್ನು ಖರೀದಿಸಿದ್ದಾರೆ.

ಸಂಪಾದಕೀಯ ನಿಲುವು

ಭ್ರಷ್ಟಾಚಾರದ ಮೂಲಕ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವವರೆಗೆ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮಲಗಿದ್ದವೇ? ಆದ್ದರಿಂದ ಈ ವಿಚಾರದಲ್ಲಿ ಈಗ ಬಾಲಕೃಷ್ಣ ಮಾತ್ರವಲ್ಲ, ಅವರ ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ಸಚಿವರು, ಪೊಲೀಸ್ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಬೇಕು. ಅವರಲ್ಲಿ ಯಾರ ಬಳಿಯಾದರೂ ಇಂತಹ ಆಸ್ತಿ ಕಂಡುಬಂದರೆ, ಅವರೆಲ್ಲರನ್ನು ಬಂಧಿಸಿ ಆಜನ್ಮ ಕಾರಾಗೃಹಕ್ಕೆ ಕಳುಹಿಸಬೇಕು.