ಹಿಂದೂ ದ್ವೇಷಿ ವಿದೇಶಿ ಪ್ರಸಾರ ಮಾಧ್ಯಮಗಳಿಂದ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕುರಿತು ಟೀಕೆ

ಮಸೀದಿಯ ಸ್ಥಳದಲ್ಲಿ ಮಂದಿರ ನಿರ್ಮಿಸಿರುವುದರಿಂದ ಮುಸಲ್ಮಾನರಲ್ಲಿ ಭಯ ನಿರ್ಮಾಣವಾಗಿರುವ ದಾವೆ !

ನವ ದೆಹಲಿ – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿರುವ ಸುದ್ದಿಯನ್ನು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಮಾಧ್ಯಮಗಳು ಪ್ರಕಟಿಸಿವೆ. ಇದರಲ್ಲಿ ಕೆಲವು ಪ್ರಸಾರಮಾಧ್ಯಮಗಳು ಮೊದಲಿನಿಂದಲೂ ಹಿಂದೂದ್ವೇಷಿ ಮತ್ತು ಭಾರತ ವಿರೋಧಿ ಆಗಿರುವುದರಿಂದ ಅವರು ಈ ಘಟನೆಯ ವಿರುದ್ಧ ಈಗಾಗಲೇ ಸುದ್ದಿಗಳನ್ನು ಪ್ರಕಟಿಸಿವೆ. ಈ ಘಟನೆಗಳಿಂದಾಗಿ ಭಾರತದಲ್ಲಿನ ಮುಸ್ಲಿಮರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ದಾವೆ ಮಾಡಿದೆ.

1. ಬ್ರಿಟನ್‌ನ ಬಿಬಿಸಿ ಪ್ರಸಾರಮಾಧ್ಯಮವು, ಭಾರತದ ಪ್ರಧಾನಮಂತ್ರಿಗಳು ಕೆಡವಿದ ಮಸೀದಿಯ ಸ್ಥಳದಲ್ಲಿ ಮಂದಿರವನ್ನು ಉದ್ಘಾಟಿಸಿದರು.(ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿತ್ತು, ಇದನ್ನು ಬಿಬಿಸಿ ಹೇಳುತ್ತಿಲ್ಲ ಎನ್ನುವುದನ್ನು ಗಮನಿಸಿ ! – ಸಂಪಾದಕರು) ಕೆಲವು ಮುಸಲ್ಮಾನರು ನಮಗೆ, ಪ್ರಾಣಪ್ರತಿಷ್ಠಾಪನೆಯ ಸಮಾರಂಭವು ಅವರಿಗೆ ನೋವಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. (ಕೆಲವು ಮುಸಲ್ಮಾನರ ಹೇಳಿಕೆಗಳನ್ನು ಪರಿಗಣಿಸುವಾಗ ‘ಕೋಟ್ಯಾಂತರ ಹಿಂದೂಗಳಿಗೆ ಏನು ಅನಿಸಿತು?’ ಎಂದು ಬಿಬಿಸಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ, ಎನ್ನುವುದನ್ನು ಗಮನಿಸಬೇಕು! – ಸಂಪಾದಕರು)

2. ಕತಾರ್‌ನ ‘ಅಲ್ ಜಜೀರಾ’ ತನ್ನ ಸುದ್ದಿಯ ಮುಖ್ಯ ಶೀರ್ಷಿಕೆಯಲ್ಲಿ ‘ಮೋದಿಯವರಿಂದ ಶ್ರೀರಾಮ ಮಂದಿರ ಉದ್ಘಾಟನೆ; ಮುಸ್ಲಿಮರಿಗೆ ಅವರ ಭವಿಷ್ಯದ ಬಗ್ಗೆ ಭಯ ಹೆಚ್ಚಾಯಿತು !’ ಎಂದು ಹೇಳಿದೆ. ಅಯೋಧ್ಯೆಯ ಒಬ್ಬ ಮುಸ್ಲಿಂ ಮಹಿಳೆಯನ್ನು ಉಲ್ಲೇಖಿಸಿ, `ಅವರು ನನಗೆ ವ್ಯಂಗ್ಯವಾಗಿ ನಡೆದುಕೊಂಡರು, ನನ್ನನ್ನು ನೋಡುತ್ತಲೇ ಕೆಲವು ಜನರು ‘ಜಯ ಶ್ರೀ ರಾಮ’ ಎಂದು ಘೋಷಣೆ ನೀಡಿದರು. ಅವರಲ್ಲಿ ಆಕ್ರಮಣಕಾರಿ ವಿಜಯದ ಭಾವನೆಯಿತ್ತು.’ (ಅಯೋಧ್ಯೆಯಲ್ಲಿರುವ ಇತರ ಮುಸಲ್ಮಾನರು ಮಂದಿರವನ್ನು ಬೆಂಬಲಿಸಿದರು, ಇದನ್ನು ಈ ಜಿಹಾದಿ ಮಾಧ್ಯಮವು ಎಂದಿಗೂ ಉಲ್ಲೇಖಿಸುವುದಿಲ್ಲ ! – ಸಂಪಾದಕರು) 1992 ರ ಡಿಸೆಂಬರ್‌ನಲ್ಲಿ ಹಿಂದೂ ರಾಷ್ಟ್ರವಾದಿಗಳ ಗುಂಪು ಧ್ವಂಸಗೊಳಿಸಿದ ಮಸೀದಿಯ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ಯಾವುದೇ ಉಲ್ಲೇಖವಿಲ್ಲ.

3. ಪಾಕಿಸ್ತಾನದ ‘ಡಾನ್ ನ್ಯೂಸ್’, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂದೂ ರಾಷ್ಟ್ರವಾದಿ ರಾಜಕಾರಣದ ವಿಜಯದ ಪ್ರತಿಬಿಂಬವಾಗಿರುವ ಒಂದು ಮಂದಿರವನ್ನು ಉದ್ಘಾಟನೆ ಮಾಡಿದರು ಎಂದು ಬರೆದಿದೆ. ಬಂಗಾರ ಬಣ್ಣದ ವಸ್ತ್ರ ಧರಿಸಿದ್ದ ಮೋದಿಯವರು ಶ್ರೀರಾಮನ ಮೂರ್ತಿಯನ್ನು ಮಂದಿರದ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ನೂರಾರು ವರ್ಷಗಳಿಂದ ಹಳೆಯ ಮಸೀದಿ ಇದ್ದ ಜಾಗದಲ್ಲಿ ಈ ಮಂದಿರದ ನಿರ್ಮಾಣವಾಗಿದೆ. 1992ರಲ್ಲಿ ಮೋದಿಯವರ ಪಕ್ಷದ ಪ್ರಚೋದನೆಯಿಂದ ಜನರು ಇದನ್ನು ಕೆಡವಿದ್ದರು. (ನಂಬುವಂತೆ ಸುಳ್ಳನ್ನು ಹೇಳಿರಿ’, ಎನ್ನುವ ಮನೋವೃತ್ತಿಯ ಪ್ರಾಕಿಸ್ತಾನಿ ಪ್ರಸಾರ ಮಾಧ್ಯಮಗಳು – ಸಂಪಾದಕರು)

4. ‘ನ್ಯೂಯಾರ್ಕ್ ಟೈಮ್ಸ್’ಪತ್ರಿಕೆಯು ‘ಪ್ರಧಾನಮಂತ್ರಿ ಮೋದಿಯವರ ‘ಹಿಂದೂ ಮೊದಲು’ ಭಾರತದ ವಿಜಯವಾಗಿದೆ ಎಂದು ಹೇಳಿದೆ. ಮುಂದುವರಿದು, ಭಾರತದಲ್ಲಿ ಹಿಂದೂಗಳ ಪ್ರಾಬಲ್ಯವನ್ನು ಸ್ಥಾಪಿಸುವ ಗುರಿಯನ್ನು ಮೋದಿಯವರು ಪೂರ್ಣಗೊಳಿಸಿದರು; ಆದರೆ ದೇಶದ 20 ಕೋಟಿ ಮುಸಲ್ಮಾನರಲ್ಲಿ ಭಯ ನಿರ್ಮಾಣವಾಗಿದೆ. (ನ್ಯೂಯಾರ್ಕ್ ಟೈಮ್ಸ್ ಇದು ಹಿಂದೂ ಮತ್ತು ಭಾರತ-ವಿರೋಧಿ ದಿನಪತ್ರಿಕೆಯಾಗಿದ್ದು, ಅದರಿಂದ ಇದಕ್ಕಿಂತ ಪ್ರತ್ಯೇಕವಾಗಿರುವ ಬೇರೆ ಹೇಳಿಕೆಯನ್ನು ನಿರೀಕ್ಷಿಸುವಂತಿಲ್ಲ! – ಸಂಪಾದಕರು) ಭಾರತದ ಹಿಂದೂ ಬಲಪಂಥೀಯರು ದೇಶದ ರಾಜಕೀಯದಲ್ಲಿ ಒಂದು ಪ್ರಮುಖ ರಾಜಕೀಯ ಶಕ್ತಿಯಾಗಲು ಶ್ರೀರಾಮ ಮಂದಿರ ಚಳವಳಿಯನ್ನು ಪ್ರಾರಂಭಿಸಿದರು. 2 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿ 70 ಎಕರೆ ಜಾಗದಲ್ಲಿ ಶ್ರೀರಾಮ ಮಂದಿರದ ನಿರ್ಮಾಣವು ಪ್ರಧಾನಮಂತ್ರಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗುವುದರ ಕಡೆಗೆ ನೋಡಲಾಗಿದೆ.

5. `ಸಿ.ಎನ್.ಎನ್.’ ಭಾರತದ ಪ್ರಧಾನಮಂತ್ರಿ ಮೋದಿ ವಿವಾದಿತ ಮಂದಿರವನ್ನು ಉದ್ಘಾಟಿಸಿದರು ಎಂದು ಬರೆದಿದೆ. ಭಾರತದ ಲಕ್ಷಾಂತರ ಜನರು ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಮನೆಯ ದೂರದರ್ಶನದಲ್ಲಿ ವೀಕ್ಷಿಸಿದರು. ಈ ಮಂದಿರದಿಂದಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಪ್ರಾರಂಭವಾಗಲಿದೆ. ಶ್ರೀರಾಮಮಂದಿರವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೊಸ ಭಾರತದ ಕನಸು ಪ್ರತ್ಯಕ್ಷದಲ್ಲಿ ನನಸಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಬಾಬರಿ ಅಥವಾ ಮುಸಲ್ಮಾನರನ್ನು ಉಲ್ಲೇಖಿಸಲಿಲ್ಲ. ಅವರು ಇದನ್ನು ಒಂದು ಹೊಸ ಯುಗದ ಪ್ರಾರಂಭವೆಂದು ಹೇಳಿದರು.

ಸಂಪಾದಕೀಯ ನಿಲುವು

ವಿದೇಶಿಯರಿಗೆ ಮತ್ತು ಇಸ್ಲಾಮಿಕ್ ಪ್ರಸಾರ ಮಾಧ್ಯಮಗಳಿಗೆ, ಭಾರತ ಮತ್ತು ಹಿಂದೂಗಳ ಬಗ್ಗೆ ಮೊದಲಿನಿಂದಲೂ ದ್ವೇಷವಿರುವುದರಿಂದ ಅವರು ಉದ್ದೇಶಪೂರ್ವಕವಾಗಿ ಅವರಿಬ್ಬರನ್ನೂ ಗುರಿ ಮಾಡುತ್ತಾರೆ. ಅಂತಹ ಪ್ರಸಾರ ಮಾಧ್ಯಮಗಳನ್ನು ಭಾರತೀಯರು ಬಹಿಷ್ಕರಿಸುವ ಮೂಲಕ ಭಾರತ ಸರಕಾರವು ಅವರನ್ನು ಈ ಬಗ್ಗೆ ಪಾಠ ಕಲಿಸುವುದು ಆವಶ್ಯಕವಾಗಿದೆ !