ನೆರೆಯಲ್ಲಿ ಇತರ ಧರ್ಮದವರು ವಾಸಿಸುತ್ತಾರೆ ಎಂದು ಪ್ರಸಾರ ನಿಲ್ಲಿಸಲಾಗದು ! – ಸುಪ್ರೀಂ ಕೋರ್ಟ್

ಶ್ರೀರಾಮಮಂದಿರದ ಉದ್ಘಾಟನೆಯ ಪ್ರಸಾರ ತಡೇದಿದ್ದ ತಮಿಳುನಾಡಿನ ದ್ರಮುಕ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ತಪರಾಕಿ !

(ದ್ರಮುಕ ಎಂದರೆ ದ್ರಾವಿಡ ಮುನ್ನೆತ್ರಿ ಕಳಘಂ – ದ್ರವೀಡ ಪ್ರಗತಿ ಸಂಘ)

ನವ ದೆಹಲಿ – ನೆರೆಯಲ್ಲಿ ಇತರ ಧರ್ಮದವರು ವಾಸಿಸುತ್ತಾರೆ ಎಂದು ಯಾರಿಗೂ ಪೂಜೆ ಮತ್ತು ಇದರ ಸಂದರ್ಭದಲ್ಲಿನ ನೇರ ಪ್ರಸಾರಕ್ಕಾಗಿ ಅನುಮತಿ ನೀರಾಕರಣೆ ಸಾಧ್ಯವಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯ ತಮಿಳುನಾಡ ಸರಕಾರಕ್ಕೆ ತಪರಾಕಿ ನೀಡಿದೆ. ‘ನೀವು ಯಾವುದೇ ಮೌಖಿಕ ಆದೇಶದ ಪ್ರಕಾರ ಹೋಗದೆ ಕಾನೂನಿನ ರೀತಿ ಕೆಲಸ ಮಾಡಿ’, ಎಂದು ಸರಕಾರಕ್ಕೆ ಸೂಚನೆ ಕೂಡ ನೀಡಿತು. ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರತಿಷ್ಠಾಪನೆಯ ನೇರ ಪ್ರಸಾರ ಮಂದಿರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಡಲು ಹಾಗೂ ಆ ಸಮಯದಲ್ಲಿ ಪೂಜೆ ಮಾಡಲು ಸರಕಾರದಿಂದ ಮೌಖಿಕ ಆದೇಶ ಆಡಳಿತಕ್ಕೆ ನೀಡಿತ್ತು. ಅದರ ವಿರುದ್ಧ ನ್ಯಾಯವಾದಿ ಜಿ. ಬಾಲಾಜಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದರ ಕುರಿತು ವಿಚಾರಣೆ ನಡೆಸುವಾಗ ನ್ಯಾಯಾಲಯವು ಸರಕಾರಕ್ಕೆ ತಪರಾಕಿ ನೀಡಿತು.

ಸರ್ವೋಚ್ಚ ನ್ಯಾಯಾಲಯದ ಮುಂದಿನ ವಿಚಾರಣೆಯ ಮೊದಲು ಪೂಜೆ ಮತ್ತು ನೇರ ಪ್ರಸಾರಕ್ಕಾಗಿ ಅರ್ಜಿ ಅನುಮೋದಿಸಿದ ನಂತರ ತಿರಸ್ಕರಿಸಿರುವ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ಮಾಹಿತಿ ಕೇಳಿದೆ. ಇದರಲ್ಲಿ ಯಾವ ಕಾರಣಗಳು ನೀಡಿದ್ದಾರೆ ? ಹೀಗೆ ವಿಚಾರಣೆ ನಡೆಸಿತು.

ಸಂಪಾದಕರು ನಿಲುವು

* ಸನಾತನ ಧರ್ಮ ಮುಗಿಸುವ ಬಗ್ಗೆ ಮಾತನಾಡುವ ದ್ರಮುಕ ಸರಕಾರದಿಂದ ಪೂಜಾ ಅರ್ಚನೆಯನ್ನು ನಿಷೇಧಿಸುವ ಪ್ರಯತ್ನ ಮಾಡುವುದು ಇದರಲ್ಲಿ ಆಶ್ಚರ್ಯವೇನು ಇಲ್ಲ. ಚುನಾವಣೆಯಲ್ಲಿ ಇಂತಹ ತಮಿಳುನಾಡಿನ ಸರಕಾರಕ್ಕೆ ಹಿಂದೂಗಳು ಪಾಠ ಕಲಿಸುವುದು ಆವಶ್ಯಕವಾಗಿದೆ !