ದಾವಣಗೆರೆಯಲ್ಲಿ ಹಿಂದೂ-ರಾಷ್ಟ್ರ ಅಧಿವೇಶನ !
ದಾವಣಗೆರೆ : ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆಯನ್ನು ಮಾಡಿ ತಮ್ಮಲ್ಲಿ ಸತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಮತ್ತು ಮೊದಲು ನಮ್ಮ ಮನಸ್ಸಿನಲ್ಲಿ ಅದರ ನಂತರ ನಮ್ಮ ಕುಟುಂಬದಲ್ಲಿ, ಹಳ್ಳಿ, ಪಟ್ಟಣ, ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಹೀಗೆ ಹಂತಹಂತವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಆಗಬೇಕು, ಈ ದಿಶೆಯಲ್ಲಿ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಅತ್ಯಂತ ಪ್ರಭಾವಿಯಾಗಿ ಕಾರ್ಯ ಮಾಡುತ್ತಿದೆ. ಇದೇ ಆದರ್ಶವನ್ನು ಎಲ್ಲಾ ಸಂಘಟನೆಗಳು ಇಟ್ಟುಕೊಳ್ಳಬೇಕು, ಎಂದು ಹರಿಹರ ಪುಣ್ಯ ಕೋಟಿ ಆಶ್ರಮದ ಪೂಜ್ಯ ಜಗದೀಶ್ವರ ಸ್ವಾಮಿಗಳು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಗರದ ಶ್ರೀ ನಿಮಿಷಾಂಬ ಸಮುದಾಯ ಭವನದಲ್ಲಿ ಜನವರಿ ೭ ರಂದು ನಡೆದ ಪ್ರಾಂತೀಯ ಹಿಂದೂ-ರಾಷ್ಟ್ರ ಅಧಿವೇಶನದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಈ ವೇಳೆ ಹಿಂದುತ್ವನಿಷ್ಠರಾದ ಡಾ. ಎಸ್.ಆರ್. ಹೆಗಡೆ, ನ್ಯಾಯವಾದಿ ರವಿಕುಮಾರ್, ಹಿಂದೂ ರಾಷ್ಟ್ರ ಸೇನಾದ ಶ್ರೀ. ಸಂದೀಪ್ ಗುರೂಜಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಮೊದಲಾದ ಗಣ್ಯರು ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.