ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬೆಂಗಳೂರಿನ ಚಂದಾಪುರದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ ಸಂಪನ್ನ !
ಬೆಂಗಳೂರು : ‘ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನರಾಗುತ್ತಿದ್ದಾರೆ. ಭಾರತದ ಪವಿತ್ರ ಭೂಮಿಯು ಪ್ರಭು ಶ್ರೀರಾಮರ ‘ರಾಮರಾಜ್ಯ’ವನ್ನು ನೋಡಿತು, ಪಾಂಡವರ ‘ಧರ್ಮರಾಜ್ಯ’ವನ್ನು ನೋಡಿತು, ಚಂದ್ರಗುಪ್ತ ಮೌರ್ಯನ ವಿಶಾಲವಾದ ‘ಮೌರ್ಯಶಾಸನ’ವನ್ನು ನೋಡಿತು, ರಾಜಾಕೃಷ್ಣದೇವರಾಯರ ‘ವಿಜಯನಗರ ಸಾಮ್ರಾಜ್ಯ’ವನ್ನು ನೋಡಿತು, ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ‘ಹಿಂದವೀ ಸ್ವರಾಜ್ಯ’ವನ್ನು ಅನುಭವಿಸಿದೆ. ಇಂದು ಅದೇ ಭೂಮಿಯಲ್ಲಿ ಪುನಃ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಧ್ವನಿಯನ್ನು ಮೊಳಗಿಸಲು ಸಂಕಲ್ಪ ಮಾಡೋಣ’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಚಂದಾಪುರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ನಾರಾಯಣ ಘಟ್ಟದ ಶ್ರೀ ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಶ್ರೀ. ಸೋಮೇಶ್ ರೆಡ್ಡಿ ಹಾಗೂ ಶ್ರೀ. ಮೋಹನ್ ಗೌಡ ಇವರು ದೀಪ ಪ್ರಜ್ವಲನೆ ಮೂಲಕ ಸಭೆಯನ್ನು ಉದ್ಘಾಟಿಸಿದರು, ೧೫೦ ಕ್ಕೂ ಹೆಚ್ಚು ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು