ಶ್ರೀರಾಮನ ಕಣ್ಣು ತೆರೆದಿರುವ ಮೂರ್ತಿಯ ಚಿತ್ರ ಪ್ರಸಾರಗೊಳಿಸಿರುವವರ ವಿಚಾರಣೆ ನಡೆಯಬೇಕು !

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಮುಖ್ಯ ಅರ್ಚಕರು ಆಚಾರ್ಯ ಸತ್ಯೇಂದ್ರ ದಾಸ ಇವರ ಬೇಡಿಕೆ !

ಅಯೋಧ್ಯೆ (ಉತ್ತರಪ್ರದೇಶ) – ಪ್ರಸಾರ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಸ್ಥಾಪನೆ ಮಾಡುವ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡುವ ಮೊದಲಿನ ಅಂದರೆ ಕಣ್ಣು ತೆರೆದಿರುವ ಛಾಯಾಚಿತ್ರ ಎಲ್ಲಡೆ ಪ್ರಸಾರವಾಗಿದೆ. ಇದರಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಮುಖ್ಯ ಅರ್ಚಕರು ಆಚಾರ್ಯ ಸತ್ಯೇಂದ್ರ ದಾಸ ಇವರು ಟೀಕಿಸಿದ್ದಾರೆ. ಆಚಾರ್ಯ ಸತ್ಯೇಂದ್ರ ದಾಸ ಇವರು, ಪ್ರಾಣ ಪ್ರತಿಷ್ಠಾಪನೆ ಆಗುವ ಮೊದಲು, ಶ್ರೀರಾಮನ ಮೂರ್ತಿಯ ಕಣ್ಣು ತೋರಿಸುವುದಿಲ್ಲ. ಮೂರ್ತಿಯ ಕಣ್ಣು ಬಟ್ಟೆಯಿಂದ ಮುಚ್ಚಿದ್ದರು. ಯಾವ ಮೂರ್ತಿಯಲ್ಲಿ ರಾಮನ ಕಣ್ಣು ಕಾಣುತ್ತಿದೆ ಅದು ನಿಜವಾದ ಮೂರ್ತಿಯಲ್ಲ. ಮೂರ್ತಿಯ ಆಯ್ಕೆ ಮಾಡಿದ ನಂತರ ಮೂರ್ತಿಯ ಕಣ್ಣು ಮುಚ್ಚಲಾಗುತ್ತದೆ. ಆದ್ದರಿಂದ ಈ ಮೂರ್ತಿ ನಿಜವಾಗಿದ್ದರೆ, ಕಣ್ಣುಗಳು ಯಾರು ತೋರಿಸಿದ್ದಾರೆ ಮತ್ತು ಮೂರ್ತಿಯ ಛಾಯಾಚಿತ್ರ ಹೇಗೆ ಪ್ರಸಾರವಾಗುತ್ತದೆ ? ಇದರ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಸಂಪಾದಕರ ನಿಲುವು

* ಪ್ರಾಣಪ್ರತಿಷ್ಠಾಪನೆಯ ಮೊದಲು ಮೂರ್ತಿಯ ಕಣ್ಣು ತೋರಿಸಬಾರದು, ಎಂದು ಶಾಸ್ತ್ರ ಇರುವ ಬಗ್ಗೆ ಮಾಹಿತಿ ನೀಡಿದರು !