ಶ್ರೀರಾಮ ಮಂದಿರದ ಸಮಾರಂಭಕ್ಕೆ ಉಪಸ್ಥಿತ ಇರುವ ಆಮಂತ್ರಿತರಿಗೆ ದೇವಸ್ಥಾನದ ಮೃತ್ತಿಕೆ, ಸಿಹಿ ಮತ್ತು ತುಳಸಿಪತ್ರ ವಿತರಣೆ !

ಅಯೋಧ್ಯೆ (ಉತ್ತರಪ್ರದೇಶ) – ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭಕ್ಕಾಗಿ ೮ ರಿಂದ ೧೦ ಸಾವಿರ ಗಣ್ಯರಿಗೆ ಆಮಂತ್ರಣ ನೀಡಿದ್ದಾರೆ. ಈ ಎಲ್ಲರಿಗೂ ಆ ದಿನದಂದು ಮಂದಿರದ ಕಾಮಗಾರಿ ಸಮಯದಲ್ಲಿ ಅಡಿಪಾಯ ಆಗದಿರುವ ಸಮಯದಲ್ಲಿ ಯಾವ ಮೃತ್ತಿಗೆ ಹೊರತೆಗೆದಿದ್ದರೋ ಅದನ್ನು ಪ್ರಸಾದವೆಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನೀಡುವರು. ಇದರ ಜೊತೆಗೆ ೧೦೦ ಗ್ರಾಮ್ ಮೋತಿಚೂರ ಲಡ್ಡು ಮತ್ತು ತುಳಸಿಪತ್ರ ಒಂದು ಬಾಕ್ಸ್ ನಲ್ಲಿ ಹಾಕಿ ನೀಡುವರು. ಹಾಗೂ ಶರಯು ನದಿಯ ತೀರ್ಥದ ಬಾಟಲಿ ಕೂಡ ನೀಡುವರು. ಮತ್ತು ವರ್ಷಗಳಿಂದ ‘ಗೀತಾ ಪ್ರೆಸ್’ ಈ ಧಾರ್ಮಿಕ ಗ್ರಂಥದ ಪ್ರಕಾಶನ ಮಾಡುವ ಸಂಸ್ಥೆಯಿಂದ ಆಮಂತ್ರಿತರಿಗಾಗಿ ಉಡುಗೊರೆ ಎಂದು ಧಾರ್ಮಿಕ ಗ್ರಂಥಗಳು ಕಳುಹಿಸಿದ್ದಾರೆ. ಶ್ರೀರಾಮ ಮಂದಿರಕ್ಕಾಗಿ ಅನೇಕ ಜನರು ಉಡುಗೊರೆ ನೀಡುತ್ತಿದ್ದಾರೆ. ಶ್ರೀರಾಮನಿಗಾಗಿ ಪಂಚೆ, ಪ್ಯಾಂಟ್ ಶರ್ಟ್ ಹಾಗೂ ಸೀತಾ ಮಾತೆಗಾಗಿ ಬಳೆ, ಬಿಂದಿಗೆ, ಕಿವಿ ಓಲೆ ಉಡುಗೊರೆಯಾಗಿ ನೀಡುತ್ತಿದ್ದಾರೆ.