ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿ ನಡೆಯುವ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಉತ್ಸಾಹದ ವಾತಾವರಣ ಇದೆ. ಇಂತಹದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಶ್ರೀರಾಮ ಮಂದಿರದ ಸ್ಮರಣಿಕೆಯೆಂದು ಸ್ಯ್ಟಾಂಪ್ ಪ್ರಸಿದ್ಧಗೊಳಿಸಿದರು. ಇದರ ಜೊತೆಗೆ ಪ್ರಭು ಶ್ರೀರಾಮನ ಕುರಿತು ಜಗತ್ತಿನಾದ್ಯಂತ ಪ್ರಸಿದ್ಧಿಗೊಂಡಿರುವ ಟಿಕೆಟ್‌ಗಳ ಪುಸ್ತಕ ಕೂಡ ಅವರು ಸೆಪ್ಟೆಂಬರ್ ೧೮ ರಂದು ಪ್ರಕಾಶಿಸಿದರು. ಸ್ಯ್ಟಾಂಪ್ ಅನುಕ್ರಮಣೆಯಲ್ಲಿ ಶ್ರೀರಾಮ ಮಂದಿರ, ಸೂರ್ಯ, ಶರಯೂ ನದಿ ಮತ್ತು ಮಂದಿರದ ಸುತ್ತಲಿನ ಮೂರ್ತಿಗಳ ಸಮಾವೇಶವಿದೆ.
(ಸೌಜನ್ಯ – Narendra Modi)
ಈ ಸಮಯದಲ್ಲಿ ಪ್ರಧಾನಮಂತ್ರಿ ಇವರು, ‘ಸ್ಯ್ಟಾಂಪ್ ಕಾರ್ಯ ನಿಮ್ಮೆಲ್ಲರಿಗೂ ತಿಳಿದೆ ಇದೆ, ಆದರೆ ಈ ಸ್ಯ್ಟಾಂಪ್ ಇನ್ನೊಂದು ಮಹತ್ವದ ಪಾತ್ರ ವಹಿಸುತ್ತದೆ. ಸ್ಯ್ಟಾಂಪ್ ಇದು ಇತಿಹಾಸ ಮತ್ತು ಐತಿಹಾಸಿಕ ಘಟನೆ ಮುಂದಿನ ಪೀಳಿಗೆವರೆಗೂ ತಲುಪಿಸುವ ಒಂದು ಮಾಧ್ಯಮವಾಗಿದೆ ಎಂದು ಹೇಳಿದರು.