ಕಾಲಮಹಾತ್ಮೆಯ ಪ್ರಕಾರ, ೨೦೨೪ ರಲ್ಲಿ ನೈಸರ್ಗಿಕ ವಿಕೋಪಗಳ ಸಂಖ್ಯೆ ಹೆಚ್ಚಾಗುವುದರಿಂದ, ಸನಾತನದ ಎಲ್ಲಾ ಸಾಧಕರು ಪ್ರತಿದಿನ ಮುಂದಿನ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು.
ಪ್ರತಿದಿನ ಬೆಳಿಗ್ಗೆ ಎದ್ದ ನಂತರ, ಎರಡೂ ಕೈಗಳ ಅಂಗೈಗಳನ್ನು ಬಲವಾಗಿ ಉಜ್ಜಬೇಕು, ಇದರಿಂದ ಎರಡೂ ಕೈಗಳ ಅಂಗೈಗಳಲ್ಲಿ ಶಾಖ(ಉಷ್ಣತೆ) ಉತ್ಪತ್ತಿಯಾಗುತ್ತದೆ. ಅದರ ನಂತರ ಎರಡೂ ಕೈಗಳ ಅಂಗೈಗಳನ್ನು ನೋಡಿ ಮತ್ತು ಭಗವಾನ್ ವಿಷ್ಣುವನ್ನು ಸ್ಮರಿಸುತ್ತಾ ಹರಿ ಓಂ ನಿಸರ್ಗದೇವೋ ಭವ ವೇದಂ ಪ್ರಮಾಣಂ ಎಂಬ ಮಂತ್ರವನ್ನು ೧೧ ಬಾರಿ ಜಪಿಸಬೇಕು. ಕೆಲವೊಮ್ಮೆ ಇರುವೆ, ಕೆಲವೊಮ್ಮೆ ಆನೆ, ಕೆಲವೊಮ್ಮೆ ಪಕ್ಷಿ ಮತ್ತು ಕೆಲವೊಮ್ಮೆ ಪ್ರಾಣಿ, ಹೀಗೆ ಯಾವುದಾದರೊಂದು ರೂಪದಲ್ಲಿ ನಾವು ಸಪ್ತರ್ಷಿಗಳು ಸಾಧಕರು ಈ ಮಂತ್ರವನ್ನು ಜಪಿಸುತ್ತಿದ್ದಾರಲ್ಲವೇ ? ಅದರ ಮೇಲೆ ನಿಗಾ ಇರಿಸುವೆವು.
– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಮೂಲಕ, ೭.೧.೨೦೨೪)