ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯ ಡಾ. ಅನಿಲ ಮಿಶ್ರಾ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಮುಖ್ಯ ಯಜಮಾನ !

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದ ಮುಖ್ಯ ಯಜಮಾನರು ಪ್ರದಾನಿ ನರೇಂದ್ರಮೋದಿ ಅಲ್ಲ, ಬದಲಾಗಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ ಮಿಶ್ರಾ ಎಂದು ವರದಿಯಾಗಿದೆ. ಜನವರಿ ೧೬ ರಿಂದ ಪ್ರಾರಂಭವಾದ ಪ್ರಾಣಪ್ರತಿಷ್ಠಾಪನೆಯ ಸಂದರ್ಭದ ವಿಧಿಗಳಿಗಾಗಿ ಡಾ. ಮಿಶ್ರಾ ಯಜಮಾನರಾಗಿ ಆಯ್ಕೆಯಾಗಿದ್ದಾರೆ. ಜನವರಿ ೨೨ ರಂದು ಪ್ರತ್ಯಕ್ಷ ಮೂರ್ತಿಯ ಪ್ರತಿಷ್ಟಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶೇಷ ಯಜಮಾನ ಎಂದು ಇರುವರು, ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲ ಆನಂದಿಬೆನ ಪಟೇಲ, ಟ್ರಸ್ಟಿನ ಅಧ್ಯಕ್ಷ ಮಹಂತ ನೃತ್ಯಗೋಪಾಲದಾಸ, ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಹಾಗೂ ಡಾ. ಅನಿಲ ಮಿಶ್ರಾ ತಮ್ಮ ಪತ್ನಿಯೊಂದಿಗೆ ಮುಖ್ಯ ಸಮಾರಂಭದ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಉಪಸ್ಥಿತರಿರುತ್ತಾರೆ. ಆದಿನ ಪ್ರಧಾನಿಮೋದಿಯವರು ಶ್ರೀರಾಮಲಲ್ಲಾರಿಗೆ ನೈವೇದ್ಯ ಅರ್ಪಿಸಿ ಆರತಿ ಮಾಡುತ್ತಾರೆ.

ಡಾ. ಮಿಶ್ರಾ ಇವರು ಜನವರಿ ೧೬ ರ ಪ್ರಾಯಶ್ಛಿತ್ತ ಪೂಜೆಯಲ್ಲಿ ಸಹಭಾಗಿಯಾಗಿದ್ದರು. ಈಗ ಮುಂದಿನ ೭ ದಿನಗಳವರೆಗೆ ಅವರೇ ಯಜಮಾನ ಇರುತ್ತಾರೆ. ಜನವರಿ ೧೬ ರಂದು ಅಯೋಧ್ಯೆಯ ವಿವೇಕ ಸೃಷ್ಟಿ ಆಶ್ರಮದಲ್ಲಿ ಧಾರ್ಮಿಕ ವಿಧಿ ಪ್ರಾರಂಭವಾಗಿದೆ. ಕಾಶಿಯ ಪಂಡಿತರು ಶರಯೂ ನದಿಯಲ್ಲಿ ಸ್ನಾನ ಮಾಡಿದ ನಂತರ ಶುಭಾರಂಭ ಮಾಡುವರು. ಈ ಕಾರ್ಯಕ್ರಮದ ಮುಖ್ಯ ಅತಿಥಿ (ಯಜಮಾನ) ಡಾ. ಅನಿಲ ಮಿಶ್ರಾ ಮತ್ತು ಮೂರ್ತಿ ತಯಾರಕ ಅರುಣ ಯೋಗಿರಾಜ ಅಲ್ಲಿ ಉಪಸ್ಥಿತರಿರುವರು. ಈ ಆಚರಣೆ ಜನವರಿ ೨೧ ರ ವರೆಗೆ ನಡೆಯಲಿದೆ.