ಶ್ರೀರಾಮಜನ್ಮಭೂಮಿಯ ವಿವಾದಾತ್ಮಕ ಸ್ಥಳದಲ್ಲಿ ಶ್ರೀರಾಮ ಮಂದಿರ ಕಟ್ಟದೆ ಅಲ್ಲಿಂದ ೩ -೪ ಕಿಲೋಮೀಟರ್ ಅಂತರದಲ್ಲಿ ಕಟ್ಟಲಾಗಿದೆ ! – ಕಾಂಗ್ರೆಸ್ಸಿನಿಂದ ಸಲ್ಲದ ಆರೋಪ

ಧೈರ್ಯ ಇದ್ದರೆ, ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಇವರು ಮಂದಿರದ ಸ್ಥಳಕ್ಕೆ ಬಂದು ಈ ವಿಷಯದ ಬಗ್ಗೆ ಹೇಳಬೇಕು ! – ಹನುಮಾನಗಢಿಯ ಮಹಂತ ರಾಜುದಾಸ ಇವರಿಂದ ಸವಾಲು

(ಮಹಂತ ಎಂದರೆ ಮಂದಿರದ ಅಥವಾ ಮಠದ ಮುಖ್ಯಸ್ಥ)

ಅಯೋಧ್ಯ (ಉತ್ತರಪ್ರದೇಶ) – ಶ್ರೀರಾಮಜನ್ಮ ಭೂಮಿಯ ವಿವಾದಾತ್ಮಕ ಸ್ಥಳದಲ್ಲಿ ಶ್ರೀರಾಮ ಮಂದಿರ ಕಟ್ಟದೆ ಅಲ್ಲಿಂದ ಮುಂದೆ ೩ -೪ ಕಿಲೋಮೀಟರ್ ಅಂತರದಲ್ಲಿ ಮಂದಿರ ಕಟ್ಟಲಾಗಿದೆ ಎಂದು ಕಾಂಗ್ರೆಸ್ ಮತ್ತು ಇತರ ಕೆಲವು ರಾಜಕೀಯ ಪಕ್ಷಗಳು ಆರೋಪಿಸಿವೆ. ಈ ಆರೋಪದ ಕುರಿತು ಇಲ್ಲಿಯ ಹನುಮಾನ ಗಢಿಯ ಪೂಜಾರಿ ಮಹಂತ ರಾಜುದಾಸ ಇವರು, ‘ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿರುವ ಜಾಗದಲ್ಲಿ ಶ್ರೀರಾಮಮಂದಿರ ಕಟ್ಟಲಾಗಿಲ್ಲ’, ಎಂದು ಕಾಂಗ್ರೆಸ್ ಹೇಳಿದೆ, ಹಾಗಾದರೆ ಮಂದಿರ ಎಲ್ಲಿ ಕಟ್ಟಲಾಗಿದೆ ? ಧೈರ್ಯ ಇದ್ದರೆ ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಇವರು ಇಲ್ಲಿ ಬಂದು ಹೇಳಬೇಕು. ಕಾಂಗ್ರೆಸ್ಸಿನ ಹಿರಿಯರು, ಶ್ರೀರಾಮ ಮಂದಿರ ಎಲ್ಲಿ ಕಟ್ಟಲಾಗಿದೆ ? ಎಂದು ಹೇಳಬೇಕು. ಅವರ ಪೂರ್ವಜರು ಸನಾತನ ಧರ್ಮ ಒಡೆಯುವುದಕ್ಕಾಗಿ ಪ್ರಯತ್ನ ಮಾಡಿದ್ದಾರೆ. ಯಾವ ಸ್ಥಳದಲ್ಲಿ ನಮ್ಮ ಮಂದಿರ ಇದೆ ಅದೇ ಜಾಗಕ್ಕಾಗಿ ನಾವು ಹೋರಾಡುತ್ತಿದ್ದೆವು, ಆದೆ ಸ್ಥಳ ನಮಗೆ ದೊರೆತಿದೆ ಮತ್ತು ಅದೇ ಸ್ಥಳದಲ್ಲಿ ಮಂದಿರ ಕಟ್ಟಲಾಗಿದೆ.