ನವ ದೆಹಲಿ – ಮಥುರೆಯ ಶ್ರೀ ಕೃಷ್ಣನಜನ್ಮಭೂಮಿಯ ಮೇಲಿರುವ ಶಾಹಿ ಈದ್ಗಾ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಲು ಅಲಹಾಬಾದ ಉಚ್ಚ ನ್ಯಾಯಾಲಯ ಅನುಮತಿ ನೀಡಿತ್ತು. ಇದನ್ನು ಸರ್ವೋಚ್ಚ ನ್ಯಾಯಾಲಯವು ತಡೆ ನೀಡಿದ್ದು, ಈಗ ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 23 ರಂದು ನಡೆಯಲಿದೆ.
VIDEO | “The top court has stayed the Allahabad High Court order that allowed a survey (of the Shahi Idgah mosque adjoining the Krishna Janmabhoomi temple in Mathura). The court has also issued a notice to the Hindu side and sought its response. The next hearing will now be held… pic.twitter.com/yygWv1Zktq
— Press Trust of India (@PTI_News) January 16, 2024
ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ ದತ್ತಾ ಅವರ ವಿಭಾಗೀಯ ಪೀಠವು ತೀರ್ಪು ನೀಡುವಾಗ, ‘ಈ ಪ್ರಕರಣದಲ್ಲಿ ಕೆಲವು ಕಾನೂನು ತೊಡಕುಗಳು ಉಂಟಾಗಿದೆ, ಅವುಗಳ ಮೇಲೆ ಮೊದಲು ತೀರ್ಪು ನೀಡಬೇಕಾಗುತ್ತದೆ. `ಉಚ್ಚ ನ್ಯಾಯಾಲಯದಲ್ಲಿ ದೂರುದಾರರು ಆಯುಕ್ತರನ್ನು ನಿಯುಕ್ತಿಗೊಳಿಸುವಂತೆ ಏಕೆ ಆದೇಶಿಸಿದರು?’, ಎನ್ನುವುದು ಸ್ಪಷ್ಟವಾಗಿಲ್ಲ. ‘ಸ್ಥಳೀಯ ಆಯುಕ್ತರಿಂದ ನಿಮ್ಮ ನೈಜ ಬೇಡಿಕೆಗಳೇನು?’, ಎನ್ನುವ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕು ಎಂದು ಹೇಳಿದೆ.