ಜನವರಿ ೨೨ ರಂದು ಮಧ್ಯಾಹ್ನ ೧೨.೨೦ ರಿಂದ ೧ ಈ ಸಮಯದಲ್ಲಿ ಪ್ರಾಣ ಪ್ರತಿಷ್ಠಾಪನೆ !

ಜನವರಿ ೧೮ ರಂದು ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿ ಸ್ಥಾಪನೆ !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ದೇವಸ್ಥಾನ ನಿರ್ಮಾಣ ಕಾರ್ಯಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಕಾರ್ಯದರ್ಶಿ ಚಂಪತ ರಾಯ ಇವರು ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಕಾರ್ಯಕ್ರಮದ ಕುರಿತು ವಿಸ್ತೃತ ಮಾಹಿತಿ ನೀಡಿದರು. ಜನವರಿ ೨೨ ರಂದು ಮಧ್ಯಾಹ್ನ ೧೨ ಗಂಟೆ ೨೦ ನಿಮಿಷದಿಂದ ಮಧ್ಯಾಹ್ನ ೧ ವರೆಗೆ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮ ನಡೆಯುವುದು, ಎಂದು ಮಾಹಿತಿ ನೀಡಿದರು. ಅದರ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ. ಪೂ ಸರಸಂಘಚಾಲಕ ಡಾ. ಮೋಹನಜಿ ಭಾಗವತ ಮತ್ತು ಟ್ರಸ್ಟನ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ ಇವರ ಭಾಷಣಗಳಾಗುವುದು. ಶಿಲ್ಪಿ ಶ್ರೀ. ಅರುಣ ಯೋಗಿರಾಜ ಇವರು ಕೆತ್ತಿರುವ ಮೂರ್ತಿ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವುದು, ಎಂದು ರಾಯ ಇವರು ಹೇಳಿದರು.

ಶ್ರೀ ಚಂಪತ ರಾಯ ಇವರು ನೀಡಿರುವ ಮಾಹಿತಿ !

೧. ಕಾಶಿಯ ಮಹಾನ ವಿದ್ವಾನ ಗಣೇಶ್ವರ ಶಾಸ್ತ್ರಿ ಇವರು ಪ್ರಾಣ ಪ್ರತಿಷ್ಠಾಪನೆಯ ಸಮಯ ನಿರ್ಧರಿಸಿದ್ದಾರೆ. ವಾರಾಣಸಿಯ ಮಹಂತ ಲಕ್ಷ್ಮಿಕಾಂತ ದೀಕ್ಷಿತ ಇವರು ಪ್ರಾಣಪ್ರತಿಷ್ಠಾಪನೆಯ ವಿಧಿ ನಡೆಸುವರು.

೨. ಕಾರ್ಯಕ್ರಮದ ಸಿದ್ಧತೆಯಿಂದ ಜನವರಿ ೨೦ ಮತ್ತು ೨೧ ರಂದು ತಾತ್ಕಾಲಿಕವಾಗಿ ನಿರ್ಮಿಸಿರುವ ಮಂದಿರದಲ್ಲಿ ಶ್ರೀರಾಮಲಲ್ಲಾನ ದರ್ಶನ ನಿಲ್ಲಿಸಲಾಗುವುದು. ಇಂದು ಜನವರಿ ೧೬ ರಿಂದ ಪ್ರಾಣ ಪ್ರತಿಷ್ಠಾಪನೆಯ ವಿಧಿ ಆರಂಭವಾಗುವುದು ಅದು ಜನವರಿ ೨೧ ವರೆಗೆ ನಡೆಯುವುದು. ಅದರ ಮೊದಲು ಮೂರ್ತಿಯ ಪೂಜೆ ಜಲ ವಾಸ, ಅನ್ನ ವಾಸ, ಶೈಯ್ಶ ವಾಸ, ಔಷಧೀ ವಾಸ ಮತ್ತು ಫಲ ವಸ ಹೀಗೆ ಮಾಡಲಾಗುವುದು. ಎಲ್ಲಾ ಪೂಜೆಗಾಗಿ ೧೨೧ ಆಚಾರ್ಯರು ಇರುವರು.

೩. ಪೂಜೆಯ ಸಮಯದಲ್ಲಿ ದೇಶದಲ್ಲಿನ ಎಲ್ಲಾ ರೀತಿಯ ವಾದ್ಯಗಳು ನುಡಿಸಲಾಗುವುದು. ಇದರಲ್ಲಿ ಕೊಳಲು, ಧೋಲ, ತಂಬೂರಿ, ಬಿಹಾರದ ಪಖವಾಜ, ಶಹನಾಯಿ, ರಾವಣಹತ್ತ ಮುಂತಾದ ವಾದ್ಯಗಳ ಸಮಾವೇಶವಿದೆ.

೪. ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವ ಶ್ರೀರಾಮಲಲ್ಲಾನ ಮೂರ್ತಿಯ ತೂಕ ೧೫೦ ರಿಂದ ೨೦೦ ಕೆಜಿ ಇದೆ. ಶ್ರೀರಾಮಲಲ್ಲಾನ ನಿಂತಿರುವ ಮೂರ್ತಿ ಜನವರಿ ೧೮ ರಂದು ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವುದು.

೫. ಭಾರತದಲ್ಲಿನ ಎಲ್ಲಾ ಪ್ರಮುಖ ನದಿಗಳ ಜಲ ಅಯೋಧ್ಯೆಗೆ ತಲುಪಿದೆ. ರಾಮಲಲ್ಲಾಗೆ ಎಲ್ಲ ಜಲಗಳ ಅಭಿಷೇಕ ಮಾಡಲಾಗುವುದು. ನೇಪಾಳದಲ್ಲಿನ ಶ್ರೀ ರಾಮನ ಅತ್ತೆಯ ಮನೆಯಿಂದ ಮತ್ತು ಛತ್ತಿಸಗಡದಲ್ಲಿನ ಅವನ ತಾತನ ಮನೆಯಿಂದ ಉಡುಗೊರೆಗಳು ಬಂದಿವೆ.

೬. ಪ್ರಾಣಪ್ರತಿಷ್ಠಾಪನೆ ದಿನದಂದು ಪ್ರಧಾನಮಂತ್ರಿ ಮೋದಿ, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿ ಬೇನ್ ಪಟೇಲ್, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಅಧ್ಯಕ್ಷ ನೃತ್ಯ ಗೋಪಾಲದಾಸ ಗರ್ಭಗುಡಿಯಲ್ಲಿ ಉಪಸ್ಥಿತರಿರುವರು.

೭. ಆಮಂತ್ರಿತರಲ್ಲಿ ಸಂತರು, ಧರ್ಮಗುರುಗಳು, ದೇಶದಲ್ಲಿನ ಪ್ರಮುಖ ಪೊಲೀಸ ಅಧಿಕಾರಿಗಳು, ಅರೆಸೇನಾ ಪಡೆಯ ಅಧಿಕಾರಿಗಳು, ಸಾಹಿತಿಗಳು, ಪದ್ಮ ಪ್ರಶಸ್ತಿ ವಿಜೇತರ ಸಮಾವೇಶವಿದೆ. ಮಂದಿರ ಕಟ್ಟುವ ಎಲ್.ಅಂಡ್.ಟಿ., ಟಾಟಾ ಈ ಕಂಪನಿಯ ೧೦೦ ಕ್ಕೂ ಹೆಚ್ಚಿನ ಇಂಜಿನಿಯರಗಳು ಮತ್ತು ಕಾರ್ಮಿಕರು, ಇವರಲ್ಲದೆ ಶೈವ, ವೈಷ್ಣವ, ಸಿಖ್, ಬೌದ್ಧ, ಜೈನ , ಕಬೀರಪಂಥಿ, ಇಸ್ಕಾನ್, ಭಾರತ ಸೇವಾಶ್ರಮ ಸಂಘ, ರಾಮಕೃಷ್ಣ ಮಿಷನ್, ಗಾಯತ್ರಿ ಪರಿವಾರ, ರಾಧಾ ಸ್ವಾಮಿ, ಗುಜರಾತಿನ ಸ್ವಾಮಿ ನಾರಾಯಣ, ಲಿಂಗಾಯತರು, ಮುಂತಾದ ಸಂಪ್ರದಾಯದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಾಗುವರು.

೮. ಜನವರಿ ೨೨ ರಂದು ಸಂಜೆ ದೇಶದಲ್ಲಿನ ನಾಗರೀಕರು ಅವರ ಮನೆಗಳಲ್ಲಿ ಕನಿಷ್ಠ ೫ ದೀಪಗಳನ್ನು ಹಚ್ಚಬೇಕು ಎಂದು ಹೇಳಿದರು.