ಭಾರತವಿರೋಧಿ ನಿಲುವನ್ನು ತೆಗೆದುಕೊಂಡಿರುವುದರಿಂದ ಜನರಿಂದ ತಕ್ಕ ಪಾಠ ಎಂದು ವ್ಯಾಪಕ ಚರ್ಚೆ !
ಮಾಲೆ (ಮಾಲ್ಡೀವ್ಸ್) – ಭಾರತವನ್ನು ಬೆಂಬಲಿಸುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯು (ಎಂ.ಡಿ.ಪಿ.ಯು) ರಾಜಧಾನಿ ಮಾಲೆ ನಗರದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಬಹುದೊಡ್ಡ ಗೆಲುವು ಸಾಧಿಸಿದೆ. ದೇಶದ ವಿರೋಧಿ ಪಕ್ಷವಾಗಿರುವ ಎಂ.ಡಿ.ಪಿ.ಯ ಅಭ್ಯರ್ಥಿ ಎಡಮ್ ಅಜೀಂ ಮಾಲೆಯ ನೂತನ ಮೇಯರ್ ಆಗಲಿದ್ದಾರೆ. ಈ ಹುದ್ದೆಯನ್ನು ಈ ಹಿಂದೆ ಚೀನಾ ಬೆಂಬಲಿಗ ರಾಷ್ಟ್ರಪತಿ ಮಹಮ್ಮದ್ ಮುಹಿಝ್ಝು ಹೊಂದಿದ್ದರು. ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಮುಜಿಝ್ಝು ಮಹಾಪೌರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಹಾಪೌರ ಹುದ್ದೆಯ ಚುನಾವಣೆಯಲ್ಲಿ ಅವರ ಪಕ್ಷವು ದೊಡ್ಡ ಸೋಲನ್ನು ಅನುಭವಿಸಿದ ಕಾರಣ ‘ಮುಯಿಜ್ಜು ಭಾರತ ವಿರೋಧಿ ನಿಲುವನ್ನು ಹೊಂದಿರುವುದರಿಂದ ಅವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆಂದು’ ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಭಾರತದ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
(ಸೌಜನ್ಯ – Dainik Jagran – दैनिक जागरण)
ಎಂ.ಡಿ.ಪಿ.ಯನ್ನು ಮಾಜಿ ರಾಷ್ಟ್ರಪತಿ ಮಹಮ್ಮದ್ ಸೊಲಿಹ ಮುನ್ನಡೆಸುತ್ತಿದ್ದಾರೆ. ಅವರನ್ನು ‘ಭಾರತ ಪರ ನಿಲುವು ಹೊಂದಿರುವ ನಾಯಕ’ ಎಂದು ಗುರುತಿಸಲಾಗುತ್ತದೆ. ಮಹಾಪೌರ ಹುದ್ದೆಯ ಚುನಾವಣೆಯನ್ನು ಗೆದ್ದಿರುವುದು ಅವರ ಪಕ್ಷಕ್ಕೆ ಮತ್ತಷ್ಟು ಉತ್ಸಾಹ ಬಂದಿದೆ.