ಇದು ವಿಧಿಯ ಇಚ್ಛೆಯಾಗಿತ್ತು ಮತ್ತು ಅದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದರು ! – ಲಾಲಕೃಷ್ಣ ಅಡ್ವಾಣಿ

ನವ ದೆಹಲಿ – ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯಮಂದಿರ ನಿರ್ಮಾಣವಾಗಬೇಕೆಂದು ವಿಧಿಯ ಇಚ್ಛೆಯಾಗಿದ್ದು; ಅದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ, ಎಂದು ಶ್ರೀರಾಮಜನ್ಮಭೂಮಿಯ ಆಂದೋಲನದಲ್ಲಿಯ ಭಾಜಪದ ಪ್ರಮುಖ ನಾಯಕ ಲಾಲಕೃಷ್ಣ ಅಡ್ವಾಣಿಯವರು ಜನವರಿ ೧೬ ರಂದು ಪ್ರಕಟವಾದ ‘ರಾಷ್ತ್ರಧರ್ಮ‘ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಈ ಹೇಳಿಕೆ ನೀಡಿದ್ದಾರೆ. ‘ರಾಮ ಮಂದಿರ ನಿರ್ಮಾಣ, ಒಂದು ದಿವ್ಯ ಕನಸಿನ ಪೂರ್ಣ(ನನಸು)‘ ಈ ಲೇಖನದ ಹೆಸರಾಗಿದೆ. ೯೬ ವರ್ಷ ಅಡ್ವಾಣಿ ಅವರು ಜನವರಿ ೨೨ ರಂದು ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಲಾಲಕೃಷ್ಣ ಆಡ್ವನಿಯವರು, ಸಂಪೂರ್ಣ ರಥಯಾತ್ರೆ ಉದ್ದಕ್ಕೂ ನರೇಂದ್ರಮೋದಿ ನನ್ನ ಜೊತೆಗಿದ್ದರು. ಆ ಸಮಯದಲ್ಲಿ ಅವರು ಹೆಚ್ಚು ಪ್ರಸಿದ್ಧರಾಗಿರಲಿಲ್ಲ; ಆದರೆ ಆ ಸಮಯದಲ್ಲಿ ಪ್ರಭು ಶ್ರೀರಾಮನು ದೇವಾಲಯವನ್ನು ನಿರ್ಮಿಸಲು ತನ್ನ ಭಕ್ತನನ್ನು(ಮೋದಿ)ಆರಿಸಿದನು. ‘ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣವಾಗಬೇಕು‘, ಹೀಗೆಂದು ವಿಧಿ ನಿರ್ಧರಿಸಿದೆ’, ಎಂದು ನನಗೆ ಅರಿವಾಯಿತು. ಮೋದಿಯವರು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಟಾಪಿಸುವರೋ ಆಗ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಪ್ರತಿನಿಧಿಸುತ್ತಾರೆ. ಭಗವಾನ್ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳಲು ಈ ದೇವಾಲಯವು ಎಲ್ಲಾ ಭಾರತೀಯರನ್ನು ಸದಾ ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.