ದೇಶದ ಅತಿ ದೊಡ್ಡ ಸಮುದ್ರ ಸೇತುವೆ !
ಮುಂಬಯಿ – ಪ್ರಧಾನಿ ನರೇಂದ್ರ ಮೋದಿ ಅವರು ‘ಅಟಲ್ ಬಿಹಾರಿ ವಾಜಪೇಯಿ ಶಿವಡಿ-ನವಾ ಶೇವಾ ಅಟಲ್ ಸೇತು’ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ರಾಜ್ಯಪಾಲ ರಮೇಶ್ ಬೈಸ್ ಅವರು ಉಪಸ್ಥಿತರಿದ್ದರು. ಈ ಅಟಲ್ ಸೇತುವನ್ನು ಜನವರಿ 12 ರಿಂದ ನಾಗರಿಕರಿಗೆ ತೆರೆಯಲಾಗಿದೆ.
ಅಟಲ್ ಸೇತು ಉದ್ಘಾಟನೆಯ ನಂತರ, ಪ್ರಧಾನಿ ದಿಘಾ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ನಂತರ ಅವರು ಮುಂಬಯಿ ಟ್ರಾನ್ಸ್ ಹಾರ್ಬರ್ ಲಿಂಕ್ ಮೂಲಕ ಪ್ರಯಾಣಿಸಿದರು.
‘ಅಟಲ್ ಬಿಹಾರಿ ವಾಜಪೇಯಿ ಶಿವಡಿ-ನ್ಹವ ಶೇವಾ ಅಟಲ್ ಸೇತು’ ವೈಶಿಷ್ಟ್ಯಗಳು !
ದೇಶದ ಈ ಅತಿದೊಡ್ಡ ಸಮುದ್ರ ಸೇತುವೆಯನ್ನು ಮುಂಬಯಿ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ (ಎಂ.ಎಂ.ಆರ್.ಡಿ.ಎ.) ನಿರ್ಮಿಸಿದೆ. ಈ ಸೇತುವೆಯ ಒಟ್ಟು ಉದ್ದ 22 ಕಿ.ಮೀ. ಇದರಲ್ಲಿ 16.5 ಕಿಮೀ ಸಮುದ್ರದಲ್ಲಿದ್ದು, ಅಂದಾಜು 5.5 ಕಿಮೀ ಭೂಮಿಯಲ್ಲಿದೆ. ಈ ಸೇತುವೆಯ ನಿರ್ಮಾಣಕ್ಕೆ ಇತ್ತೀಚಿನ ಜಪಾನ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಸೇತುವೆಯನ್ನು 1 ಸಾವಿರ ಕಂಬಗಳ ಮೇಲೆ ನಿರ್ಮಿಸಲಾಗಿದೆ.
ನಿರ್ಮಾಣದಲ್ಲಿ ಬಳಸುವ ಉಕ್ಕಿನ ವಿಶೇಷತೆ !
ಈ ಯೋಜನೆಯಲ್ಲಿ ಒಟ್ಟು 1 ಲಕ್ಷದ 2 ಸಾವಿರ ಟನ್ ಉಕ್ಕನ್ನು ಬಳಸಲಾಗಿದೆ. ಇಷ್ಟು ಉಕ್ಕಿನಲ್ಲಿ 4 ಬಂಗಾಳದ ಹೌರಾ ಸೇತುವೆಗಳನ್ನು ನಿರ್ಮಿಸಬಹುದು, ಈ ಸೇತುವೆ ಇಷ್ಟು ಅಗಲ ಇದೆ. ಈ ಯೋಜನೆಗೆ 8 ಲಕ್ಷ 80 ಸಾವಿರ ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಬಳಸಲಾಗಿದೆ. ಈ ಸೇತುವೆಗೆ ‘ಏಕತೆಯ ಪ್ರತಿಮೆ’ ನಿರ್ಮಿಸಲು ಅಗತ್ಯವಿರುವ ಕಾಂಕ್ರೀಟ್‌ಗಿಂತ 6 ಪಟ್ಟು ಹೆಚ್ಚು ಕಾಂಕ್ರೀಟ್ ಅಗತ್ಯವಿದೆ. ಈ ಯೋಜನೆಯಲ್ಲಿ ಬಳಸಲಾದ ಉಕ್ಕು ಐಫೆಲ್ ಟವರ್‌ನಲ್ಲಿ ಬಳಸಲಾದ ಉಕ್ಕಿಗಿಂತ 17 ಪಟ್ಟು ಹೆಚ್ಚು ಇದೆ.
‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಪ್ರಧಾನಿಗೆ ಶುಭಾಶಯ !
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ದಿವಂಗತ ಬಾಳಾಸಾಹೇಬ್ ಠಾಕ್ರೆಯವರ ಕನಸಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಕನಸು ನನಸಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಇವರು, ‘ಜೈ ಶ್ರೀ ರಾಮ್’ ಘೋಷಣೆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯ ಕೋರುವಂತೆ ಸಭಿಕರಲ್ಲಿ ಮನವಿ ಮಾಡಿದರು. ಈ ವೇಳೆ ಸಭಿಕರು ಎದ್ದು ನಿಂತು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು.