ಅಯೋಧ್ಯೆ ಧರ್ಮನಗರದಲ್ಲಿದೆ ೮ ಮಸೀದಿಗಳು ಮತ್ತು ೪ ಸ್ಮಶಾನ !

ಅಯೋಧ್ಯೆ – ನಗರದಲ್ಲಿ ಜನವರಿ ೨೨ ರಂದು ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉತ್ಸವ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜ ಈ ಉತ್ಸವದ ಸಿದ್ಧತೆಯಲ್ಲಿ ತೊಡಗಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕೆಲವು ನಾಯಕರ ಸಹಿತ ಅನೇಕ ಕಮ್ಯುನಿಸ್ಟರು ಈ ಕಾರ್ಯಕ್ರಮಕ್ಕೆ ವಿರೋಧಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಧಾರ್ಮಿಕ ಬಣ್ಣ ನೀಡಲು ಪ್ರಯತ್ನ ಮಾಡಿ ಹಿಂದುಗಳಿಗೆ ‘ಕಟ್ಟರತೆ’ಯ ಬಣ್ಣ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ; ಆದರೆ ಶ್ರೀರಾಮ ಮಂದಿರದ ಸುತ್ತಮುತ್ತ ‘ಇದೇ ಹಿಂದುದ್ವೇಷಿಗಳ ೮ ಮಸೀದಿಗಳು ಮತ್ತು ೪ ಕಬ್ರ ಇರುವುದು, ಈ ಸತ್ಯ ಮರೆಮಾಚಿದ್ದಾರೆ. ಹೀಗೆ ಹಿಂದುಗಳ ಅಭಿಪ್ರಾಯವಾಗಿದೆ. ಅಯೋಧ್ಯೆಯಲ್ಲಿನ ಮುಸಲ್ಮಾನರು ಅವರ ಧಾರ್ಮಿಕ ಶ್ರದ್ಧೆಯ ಪಾಲನೆ ಬಹಿರಂಗವಾಗಿ ಮಾಡುತ್ತಾರೆ.

ಅಯೋಧ್ಯೆಯಲ್ಲಿ ೪ ಗುರುದ್ವಾರ ಮತ್ತು ೨ ಜೈನ ಮಂದಿರಗಳು !

ಅಯೋಧ್ಯೆ ಧರ್ಮನಗರದಲ್ಲಿ ೪ ಗುರುದ್ವಾರ ಮತ್ತು ೨ ಜೈನ ಮಂದಿರಗಳು ಇವೆ. ಪ್ರಾಚೀನ ಕಾಲದಿಂದ ಅಸ್ತಿತ್ವದಲ್ಲಿರುವ ಈ ಗುರುದ್ವಾರ ಹಿಂದೂ ಮತ್ತು ಸಿಖ್ ಧರ್ಮದ ಐಕ್ಯತೆಯ ಪ್ರತೀಕವಾಗಿದೆ. ಸಿಖ ಮತ್ತು ಜೈನ ಧರ್ಮದ ಧಾರ್ಮಿಕ ಸ್ಥಳಗಳು ಕೂಡ ಶ್ರೀರಾಮನ ಜೊತೆಗೆ ಸಂಬಂಧ ಇತ್ತು ಎಂದು ತೋರಿಸುತ್ತದೆ.

ಅಯೋಧ್ಯೆಯಲ್ಲಿ ಸುಮಾರು ೩ ಸಾವಿರದ ೪೦೦ ದೇವಸ್ಥಾನಗಳು

ಅಯೋಧ್ಯೆಯಲ್ಲಿ ಸುಮಾರು ೩ ಸಾವಿರದ ೪೦೦ ದೇವಸ್ಥಾನಗಳು ಇವೆ. ಈ ದೇವಸ್ಥಾನಗಳಲ್ಲಿ ಸನಾತನ ಧರ್ಮದ ಪ್ರಕಾರ ವಿವಿಧ ಉಪಾಸನ ಪದ್ಧತಿ ಮುಂದುವರೆದಿದೆ. ಇದರಿಂದ, ವಿವಿಧತೆ ಇದ್ದರೂ ಕೂಡ ಹಿಂದೂ ಧರ್ಮದ ತಿರುಳು ಒಂದೇ ಆಗಿದೆ, ಈ ಸಂದೇಶ ನೀಡಲಾಗುತ್ತದೆ. ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಸಮುದಾಯಕ್ಕೆ ಶ್ರೀರಾಮ ಪೂಜ್ಯ ಮತ್ತು ಸ್ವೀಕಾರಾರ್ಹ ಇದೆ.