ಪಪುವಾ ನ್ಯೂಗಿನಿಯಲ್ಲಿ ಪೊಲೀಸರ ಮುಷ್ಕರದಲ್ಲಿ ನಡೆದ ಹಿಂಸಾಚಾರದಲ್ಲಿ 15 ಮಂದಿ ಸಾವು

ಪೋರ್ಟ್ ಮೊರೆಸ್ಬಿ (ಪಾಪುವಾ ನ್ಯೂಗಿನಿಯಾ) – ಇಲ್ಲಿನ ಪೊಲೀಸರು ಜನವರಿ 10 ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಪಪುವಾ ನ್ಯೂಗಿನಿಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರ ಸಂಬಳ ಹೆಚ್ಚಿಸುವ ಬದಲು ಶೇ.50ರಷ್ಟು ಕಡಿತಗೊಳಿಸಲಾಗಿದೆ. ಆದ್ದರಿಂದ ಸಿಟ್ಟಿಗೆದ್ದ ಪೊಲೀಸರು ಮುಷ್ಕರ ನಡೆಸಿ ಸಂಸತ್ತಿನ ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಮುಷ್ಕರ ನಡೆಸಿದ್ದರಿಂದ ನಗರದಲ್ಲಿ ಹಿಂಸಾಚಾರ ಹೆಚ್ಚಾಯಿತು. ಜನರು ಇಲ್ಲಿ ಲೂಟಿ ಮಾಡಲು ಪ್ರಾರಂಭಿಸಿದರು. ಜನರು ವಾಣಿಜ್ಯ ಸಂಕೀರ್ಣಗಳು ಮತ್ತು ಅಂಗಡಿಗಳಿಗೆ ನುಗ್ಗಿ ವಸ್ತುಗಳನ್ನು ದೋಚಿದರು ಮತ್ತು ಲೂಟಿ ಮಾಡಿದರು. ಕೆಲವರು ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಹಾಗೂ ಸಣ್ಣಪುಟ್ಟ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಜನರು ಸಂಸತ್ತಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಪ್ರಧಾನಿ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹಚ್ಚಿದರು. ಪೋರ್ಟ್ ಮೊರೆಸ್ಬಿ ಮತ್ತು ಲಾಯೆ ನಗರಗಳಲ್ಲಿ ನಡೆದ ಹಿಂಸಾಚಾರದಲ್ಲಿ ಒಟ್ಟು 15 ಜನರು ಸಾವನ್ನಪ್ಪಿದರು.

(ಸೌಜನ್ಯ  : ABC News (Australia)

ಪಪುವಾ ನ್ಯೂಗಿನಿಯ ಪ್ರಧಾನಿ ಜೇಮ್ಸ್ ಮರಾಪೆ ದೇಶವಾಸಿಗಳ ಕ್ಷಮೆ ಯಾಚಿಸಿದರು !

ಇಂತಹ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಪೊಲೀಸರ ಗೈರು ಹಾಜರಿಯ ಲಾಭವನ್ನು ಜನರು ಪಡೆದುಕೊಂಡರು. ಕಾನೂನು ಉಲ್ಲಂಘಿಸುವುದು ತಪ್ಪು. ಇದರಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಈ ಘಟನೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ಈ ಇಡೀ ಘಟನೆಗೆ ನಾನು ಕ್ಷಮೆಯಾಚಿಸುತ್ತೇನೆ. ಕಂಪ್ಯೂಟರ್‌ನಲ್ಲಿನ ತಾಂತ್ರಿಕ ದೋಷದಿಂದ ಪೊಲೀಸರ ಸಂಬಳ ಕಡಿಮೆಯಾಗಿದೆ. ತಾಂತ್ರಿಕ ದೋಷವನ್ನು ಶೀಘ್ರವೇ ಸರಿಪಡಿಸಲಾಗುವುದು. ಹಿಂದಿನ ಬಾಕಿಯ ಜೊತೆಗೆ ಮುಂದಿನ ತಿಂಗಳ ಸಂಬಳ ಎಲ್ಲರಿಗೂ ಸಿಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಹರಡಿತು ಮತ್ತು ಜನರು ಅದನ್ನು ನಿಜವೆಂದು ಒಪ್ಪಿಕೊಂಡರು. ಇದು ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಹೇಳಿದರು.