ರಾಜಸ್ಥಾನದ ಜೈಪುರದ ಬಿಜೆಪಿ ಸಂಸದ ರಾಮಚರಣ ಬೋಹ್ರಾ ಅವರ ಬೇಡಿಕೆ
ಅಜ್ಮೆರ್ (ರಾಜಸ್ಥಾನ) – ಅಜ್ಮೆರ್‌ನಲ್ಲಿರುವ ‘ಢೈ ದಿನ್ ಕಾ ಜೋಪಡಾ’ ಎಂಬ ಮಸೀದಿಯು ಹಿಂದೆ ದೇವಾಲಯವಾಗಿರುವುದರಿಂದ ಅದನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂಬ ಬೇಡಿಕೆ ತೀವ್ರವಾಗುತ್ತಿದೆ. ಈ ಸ್ಥಳದಲ್ಲಿ ಪುನಃ ಸಂಸ್ಕೃತ ಮಂತ್ರಗಳ ಧ್ವನಿ ಮೊಳಗಲಿದೆ ಎಂದು ಬಿಜೆಪಿ ಸಂಸದ ರಾಮಚರಣ್ ಬೋಹ್ರಾ ಹೇಳಿದ್ದಾರೆ. ಈ ಕುರಿತು ಅವರು ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಜಿ. ಕಿಶನ ರೆಡ್ಡಿ ಅವರಿಗೆ ಪತ್ರ ಬರೆದು ಕೋರಲಾಗಿದೆ.
1. ‘ಢೈ ದಿನ್ ಕಾ ಜೋಪಡಾ’ ಮಸೀದಿಯು ಮೂಲತಃ ಸರಸ್ವತಿ ಕಂಠಭಾರತ ಕಾಲೇಜು ಆಗಿತ್ತು. ಇದನ್ನು ಶ್ರೀ ಸರಸ್ವತಿ ದೇವಿಗೆ ಅರ್ಪಿಸಲಾಗಿತ್ತು. ಅಲ್ಲಿ ದೇವಸ್ಥಾನವೂ ಇತ್ತು. 1192 ರಲ್ಲಿ, ಮಹಮ್ಮದ್ ಘೋರಿ ಮಹಾರಾಜ ಪೃಥ್ವಿರಾಜ ಚೌಹಾನ್ ಅವರನ್ನು ಸೋಲಿಸಿ ಅಜ್ಮೀರ್ ಅನ್ನು ವಶಪಡಿಸಿಕೊಂಡನು.
2. ನಂತರ ಘೋರಿ ತನ್ನ ಗುಲಾಮ ಕುತುಬುದ್ದೀನ್ ಐಬಕ್‌ಗೆ ನಗರದ ಎಲ್ಲಾ ದೇವಾಲಯಗಳನ್ನು ನಾಶಮಾಡಲು ಆದೇಶಿಸಿದನು. ಇದರೊಂದಿಗೆ ನಗರದಲ್ಲಿ 60 ಗಂಟೆಯೊಳಗೆ ಮಸೀದಿ ನಿರ್ಮಿಸುವಂತೆಯೂ ಆದೇಶಿಸಿದ್ದ. ಸಂಸ್ಕೃತ ಕಾಲೇಜಿನ ಸ್ಥಳದಲ್ಲಿ ಮಸೀದಿಯನ್ನು ಎರಡೂವರೆ ದಿನಗಳಲ್ಲಿ ಪೂರ್ಣಗೊಳಿಸಿದ ಕಾರಣ ಮಸೀದಿಯನ್ನು ‘ಢೈ ದಿನ್ ಕಾ ಝೋಪಡಾ’ ಎಂದು ಕರೆಯಲಾಗುತ್ತದೆ.
3. ಪ್ರಸ್ತುತ ಅಲ್ಲಿ ನಿಂತಿರುವ ಕಟ್ಟಡವು ಭಾರತೀಯ ಸಮಾಜಕ್ಕೆ ಕಳಂಕವಾಗಿದೆ ಎಂದು ಬೋಹ್ರಾ ಪತ್ರದಲ್ಲಿ ಹೇಳಿದ್ದಾರೆ. ಆದ್ದರಿಂದ ಈ ವಾಸ್ತುವನ್ನು ಅದರ ಮೂಲ ಸ್ವರೂಪಕ್ಕೆ ತರುವುದು ಮುಖ್ಯವಾಗಿದೆ.
Adhai Din Ka Jhonpra पर सियासत हुई तेज, Ram Charan Bohra के बाद अब एक और बीजेपी नेता ने क्या कहा, सुनिए pic.twitter.com/VcAqA4EsuA
— Rajasthan Tak (@Rajasthan_Tak) January 11, 2024
* ಭಾರತದಲ್ಲಿ ಹಿಂದೂಗಳ ದೇವಾಲಯಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿದ ನೂರಾರು ಪ್ರಕರಣಗಳಿವೆ. ಆದುದರಿಂದ ಕೇಂದ್ರ ಸರಕಾರವು ಇಂತಹ ಪ್ರತಿಯೊಂದು ಕಟ್ಟಡವನ್ನು ಹಿಂದಿರುಗಿಸುವಂತೆ ವಿವಿಧ ಬೇಡಿಕೆಗಳನ್ನು ಇಡುವ ಬದಲು ಭಾರತದಾದ್ಯಂತ ಇರುವ ಎಲ್ಲಾ ದೇವಾಲಯಗಳ ಪಟ್ಟಿಯನ್ನು ಮಾಡಿ ಹಿಂದೂಗಳಿಗೆ ಹಿಂದಿರುಗಿಸಲು ಕ್ರಮಕೈಗೊಳ್ಳಬೇಕು ! * ಆಗಿನ ಕಾಂಗ್ರೆಸ್ ಸರಕಾರವು ‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ’ ಈ ಕಾಯಿದೆಯನ್ನು ಮಾಡಿದ್ದರಿಂದ ದೇವಸ್ಥಾನಗಳನ್ನು ಕೆಡವಿ ಮಸೀದಿಗಳಾಗಿ ಪರಿವರ್ತಿಸಲಾದ ಯಾವುದೇ ಕಟ್ಟಡಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಈ ಕಾನೂನನ್ನು ರದ್ದುಗೊಳಿಸಬೇಕೆಂದು ಹಿಂದೂಗಳು ನಿರೀಕ್ಷಿಸುತ್ತಾರೆ ! |