ಅಯೋಧ್ಯೆಯ ಹೋಟೆಲ್‌ನ ಕೋಣೆಗಳ ಬಾಡಿಗೆ ಒಂದು ದಿನಕ್ಕೆ 5 ಪಟ್ಟುಗಳಷ್ಟು ಏರಿಕೆ

ಅಯೋಧ್ಯೆ (ಉತ್ತರ ಪ್ರದೇಶ) – ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ. ಇಲ್ಲಿನ ಹೋಟೆಲ್ ನಲ್ಲಿ ಒಂದು ದಿನದ ಕೋಣೆಯ ಬಾಡಿಗೆ 5 ಪಟ್ಟುಗಳಿಂದ ಏರಿಕೆಯಾಗಿದೆ. ಕೆಲವು ಐಶಾರಾಮಿ ಕೋಣೆಗಳ ಬಾಡಿಗೆ ದರ 1 ಲಕ್ಷ ರೂಪಾಯಿಗಳಷ್ಟಾಗಿದೆ. ವಿಶೇಷವೆಂದರೆ ಬಾಡಿಗೆಯ ದರದಲ್ಲಿ ಇಷ್ಟು ಏರಿಕೆಯಾಗಿದ್ದರೂ ಹೊಟೆಲಿನ ಕಾಯ್ದಿರಿಸುವಿಕೆ ಪ್ರತಿದಿನ ಹೆಚ್ಚಳವಾಗುತ್ತಿದೆ. ಜನವರಿ 22 ಕ್ಕೆ ದೇಶಾದ್ಯಂತದಿಂದ ಸುಮಾರು 3 ರಿಂದ 5 ಲಕ್ಷ ಜನರು ಅಯೋಧ್ಯೆಗೆ ಬರುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಅಯೋಧ್ಯೆಯ ಹೆಚ್ಚಿನ ಹೊಟೆಲಗಳು ಈ ಮೊದಲೇ ಭರ್ತಿಯಾಗಿವೆ ಮತ್ತು ಯಾವ ಹೊಟೆಲನಲ್ಲಿ ಜನವರಿ 22 ಕ್ಕೆ ಕೋಣೆಗಳು ಲಭ್ಯವಿದೆಯೋ, ಅವುಗಳ ಬಾಡಿಗೆಯ ದರಗಳು ಗಮನಾರ್ಹವಾಗಿ ಹೆಚ್ಚಳವಾಗಿದೆ.

(ಸೌಜನ್ಯ – Business Today)

1. ಇಲ್ಲಿನ ‘ಸಿಗ್ನೆಟ್ ಕಲೆಕ್ಷನ್’ ಹೋಟೆಲ್‌ನಲ್ಲಿ ಕೋಣೆಯ ಸದ್ಯದ ಬಾಡಿಗೆ 70 ಸಾವಿರ 240 ರೂಪಾಯಿಗಳಿವೆ. ಕಳೆದ ವರ್ಷ ಜನವರಿಯಲ್ಲಿ ಈ ಕೋಣೆಗಳ ಬಾಡಿಗೆ ಕೇವಲ 16 ಸಾವಿರ 800 ರೂಪಾಯಿಗಳಷ್ಟಿತ್ತು, ಅಂದರೆ ಅದರಲ್ಲಿ 4 ಪಟ್ಟುಗಳಷ್ಟು ಹೆಚ್ಚಳವಾಗಿದೆ.

2. ‘ರಾಮಾಯಣ’ ಹೊಟೇಲ್‌ನಲ್ಲಿ ಒಂದು ಕೋಣೆಯ ಒಂದು ದಿನದ ಬಾಡಿಗೆ 40 ಸಾವಿರ ರೂಪಾಯಿಗಳಿಗೆ ಲಭ್ಯವಿದೆ. ಕಳೆದ ವರ್ಷ ಇದರ ದರ 14 ಸಾವಿರ 900 ರೂಪಾಯಿಗಳಷ್ಟು ಇತ್ತು.

3. ಹೋಟೆಲ್ ‘ಅಯೋಧ್ಯಾ ಪ್ಯಾಲೇಸ್’ನಲ್ಲಿ ದಿನಕ್ಕೆ 18 ಸಾವಿರ 221 ರೂಪಾಯಿ ಒಂದು ದಿನಕ್ಕೆ ಒಂದು ಕೊಠಡಿಯನ್ನು ನೀಡುತ್ತದೆ. ಕಳೆದ ವರ್ಷದ ಬಾಡಿಗೆ 2 ಸಾವಿರ 722 ರೂಪಾಯಿಗಳಾಗಿತ್ತು.

ಸಂಪಾದಕೀಯ ನಿಲುವು

ಇದನ್ನು ಸರಕಾರ ನಿಯಂತ್ರಿಸಿ, ಭಕ್ತರ ಲೂಟಿಯನ್ನು ತಡೆಯಬೇಕು ಎನ್ನುವ ಅಪೇಕ್ಷೆಯಿದೆ !