ಮಾಂಢರದೇವ (ತಾ. ವಾಯಿ)ನಲ್ಲಿ ಶ್ರೀ ಕಾಳುಬಾಯಿ ಯಾತ್ರೆಯ ಸಂದರ್ಭದಲ್ಲಿ ಕಲಂ 36 ಜಾರಿ !

  • ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ಇವರಿಂದ ಮಾಹಿತಿ !

  • ಪ್ರಾಣಿ ಬಲಿ ಮತ್ತು ಸಂಗೀತ ವಾದ್ಯಗಳನ್ನು ನುಡಿಸಲು ನಿಷೇಧ !

ಸಾತಾರಾ – ಮಾಂಢರದೆವ (ತಾ. ವಾಯಿ) ಇಲ್ಲಿಯ ಶ್ರೀ ಕಾಳುಬಾಯಿ ಮಾಂಢರದೆವಿ ಯಾತ್ರೆಯ ನಿಮಿತ್ತ ಜನವರಿ 24 ರಿಂದ ಫೆಬ್ರವರಿ 9 ರವರೆಗೆ ಸೆಕ್ಷನ್ 36 ಅನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಪ್ರಾಣಿ ಬಲಿ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವುದನ್ನು ನಿಷೇಧಿಸಲಾಗಿದೆ ಎಂದು ಸತಾರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ತಿಳಿಸಿದ್ದಾರೆ. (ಪೊಲೀಸ್ ಅಧಿಕಾರಿ ಶೇಖ್ ಇತರ ಧರ್ಮಗಳ ಹಬ್ಬಗಳ ಸಂದರ್ಭದಲ್ಲಿ ಇಂತಹ ಕಲಂಗಳನ್ನು ಜಾರಿಗೊಳಿಸುತ್ತಾರೆಯೇ ? ಬಕ್ರಿ ಈದ್ ಸಮಯದಲ್ಲಿ ಅವರು ಪ್ರಾಣಿ ಬಲಿಯನ್ನು ನಿಷೇಧಿಸುತ್ತಾರೆಯೇ ? – ಸಂಪಾದಕರು)

ಮುಂಬಯಿ ಪೊಲೀಸ್ ಕಾಯಿದೆ, 1951 ರ ಸೆಕ್ಷನ್ 36 ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಗಾಗಿ ನೇಮಕಗೊಂಡ ಎಲ್ಲಾ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಅಧಿಕಾರವನ್ನು ನೀಡಲಾಗಿದೆ ಎಂದು ಸಮೀರ್ ಶೇಖ್ ಹೇಳಿದರು. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ಅಧಿಕಾರಗಳನ್ನು ನೀಡಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಪೊಲೀಸರು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಬಂದ್ ಮಾಡಲು ಹೆದರುತ್ತಾರೆ. ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಯಾತ್ರೆಗೆ ಸರಕಾರಿ ವ್ಯವಸ್ಥೆಗಳು ನಿರ್ಬಂಧಗಳನ್ನು ಹೇರುವುದು ನಾಚಿಕೆಗೇಡಿನ ಸಂಗತಿ !