ಯೋಜನೆಗಾಗಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಡೆಕ್ಕನ್ ಕಾಲೇಜು ನಡುವೆ ಕರಾರು !
ಪುಣೆ – ಡೆಕ್ಕನ್ ಕಾಲೇಜು ಅಭಿಮತ ವಿದ್ಯಾಪೀಠದಲ್ಲಿ ಕಳೆದ 75 ವರ್ಷಗಳಿಂದ ನಡೆದಿರುವ ಸಂಸ್ಕೃತ ಶಬ್ದಕೋಶ(ನಿಘಂಟು) ಯೋಜನೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪುನರುಜ್ಜೀವನ ದೊರೆಯಲಿದೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಇತರ ವಿಶ್ವವಿದ್ಯಾನಿಲಯಗಳು ಈ ಯೋಜನೆಗೆ ಸಹಯೋಗವನ್ನು ನೀಡಲಿದ್ದು, ಯೋಜನೆಗಾಗಿ 29 ಹುದ್ದೆಗಳನ್ನು ಭರ್ತಿ ಮಾಡಲಿದ್ದಾರೆ. ಇಲ್ಲಿಯವರೆಗೆ ಡಿಜಿಟಾಯಝೆಶನ ಮಾಡಿರುವ ದಾಖಲೆಗಳು, ನಿಘಂಟಿನ ವಿಭಾಗಗಳನ್ನು ಸಂಕೇತಸ್ಥಳದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುತ್ತದೆ. ಸಂಸ್ಕೃತ ಶಬ್ದಕೋಶ (ನಿಘಂಟು) ಯೋಜನೆಯ ಕಾರ್ಯ ಅಗಾಧವಾಗಿದ್ದು, ಇನ್ನೆರಡು ತಿಂಗಳಲ್ಲಿ ನಿಘಂಟು ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಡೆಕ್ಕನ್ ಕಾಲೇಜು ದೇಶಾದ್ಯಂತವಿರುವ ಸಂಸ್ಕೃತ ವಿಭಾಗಗಳಿಗೆ ಇದಕ್ಕಾಗಿ ಮಾರ್ಗದರ್ಶನ ಮಾಡಲಿದೆ. ವಿದ್ಯಾರ್ಥಿಗಳಿಗೆ ಕೆಲಸದ ತರಬೇತಿಗಾಗಿ ಆನ್‌ಲೈನ್ ಪಠ್ಯಕ್ರಮವನ್ನು ರಚಿಸಲಾಗುವುದು. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಈ ಯೋಜನೆಗಾಗಿ ಸಹಾಯ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ಈ ಯೋಜನೆಯ ಕೆಲಸವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು, ಅಂತರರಾಷ್ಟ್ರೀಯ ಚರ್ಚಾ ಅಧಿವೇಶನವನ್ನು ನಡೆಸಿ, ಅದರಲ್ಲಿ ಈ ಯೋಜನೆಯನ್ನು ಪ್ರಸ್ತುತಪಡಿಸಲಾಗುತ್ತದೆ. ಈ ನಿಘಂಟುವಿನ ಯೋಜನೆಯಲ್ಲಿ ತಂತ್ರಜ್ಞಾನವನ್ನು ಉಪಯೋಗಿಸುವುದರಿಂದ ಕೆಲಸ ಸುಲಭವಾಗಲಿದೆ. ಭವಿಷ್ಯದಲ್ಲಿ ಇತರ ಭಾಷೆಗಳಿಗೂ ಇಂತಹ ಯೋಜನೆಯನ್ನು ಮಾಡಬಹುದಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷ ಡಾ.ಅನಿಲ ಸಹಸ್ರಬುದ್ಧೆ ನಮೂದಿಸಿದ್ದಾರೆ.