ಕೆನಡಾದಲ್ಲಿ ಪಾಕಿಸ್ತಾನಿ ಬಲೂಚ್, ಸಿಂಧಿ ಮತ್ತು ಪಶ್ತೂನ್ ಪ್ರದೇಶಗಳ ನಾಗರಿಕರಿಂದ ಪಾಕಿಸ್ತಾನ ಸರಕಾರದ ವಿರುದ್ಧ ಪ್ರತಿಭಟನೆ !

 

ಟೊರೊಂಟೊ (ಕೆನಡಾ) – ಜನವರಿ 6 ರಂದು ಕೆನಡಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ ಬಲೂಚ್, ಸಿಂಧಿ ಮತ್ತು ಪಶ್ತೂನ್ ಪ್ರದೇಶಗಳ ನಾಗರಿಕರು ಪಾಕಿಸ್ತಾನ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ನಾಗರಿಕರು ಪಾಕಿಸ್ತಾನದಲ್ಲಿ ಸಾವಿರಾರು ಬಲೂಚ್ ನಾಗರಿಕರು ಕಣ್ಮರೆಯಾಗುತ್ತಿದ್ದಾರೆ. ಅವರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಮತ್ತು ಕೊಲೆಗಳಿಗೆ ಪಾಕಿಸ್ತಾನ ಸರಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಆಂದೋಲನವನ್ನು ‘ಬಲೂಚ್ ಹ್ಯೂಮನ್ ರೈಟ್ಸ್ ಕೌನ್ಸಿಲ್ ಆಫ್ ಕೆನಡಾ’, ‘ವರ್ಲ್ಡ್ ಸಿಂಧಿ ಕೌನ್ಸಿಲ್’ ಮತ್ತು ‘ಪಶ್ತುನ್ ಕೌನ್ಸಿಲ್ ಕೆನಡಾ’ ಜಂಟಿಯಾಗಿ ಆಯೋಜಿಸಿದ್ದರು. ಸದ್ಯಕ್ಕೆ ಪಾಕಿಸ್ತಾನದಲ್ಲಿ ಸಾವಿರಾರು ಬಲೂಚ್ ನಾಗರಿಕರು ಇಸ್ಲಾಮಾಬಾದ್ ಕಡೆಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದಾರೆ. ಅವರು ಸರಕಾರದ ವಿರುದ್ಧ ಆಂದೋಲನಗಳನ್ನು ನಡೆಸುತ್ತಿದ್ದಾರೆ.