ಈಗ ಶ್ರೀರಾಮ ಮಂದಿರದ ಉದ್ಘಾಟನೆಯ ಬಗ್ಗೆ ವಿಷ ಕಾರಿದ ‘ಇತ್ತೆಹಾದ್-ಏ-ಮಿಲ್ಲತ್ ಕೌನ್ಸಿಲ್’ನ ಮುಖ್ಯಸ್ಥ ಮೌಲಾನ (ಇಸ್ಲಾಮಿ ಅಭ್ಯಾಸಕ) ರಝಾ !

  • ನಮ್ಮ ಮಸೀದಿಗಳನ್ನು ಕಸಿದುಕೊಳ್ಳಲಾಗುತ್ತಿದೆ ! – ರಝಾ

  • ರಾಮ ಮಂದಿರದ ತೀರ್ಪಿನ ನಂತರ ಸರ್ವೋಚ್ಚ ನ್ಯಾಯಾಲಯದ ವಿಶ್ವಾಸದ ಮೇಲೆ ಕೂಡ ಪ್ರಶ್ನ ಚಿಹ್ನೆ ! 

ನವ ದೆಹಲಿ – ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಉತ್ಸಾಹ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಇದೆ. ಹೀಗೆ ಇದ್ದರೂ ಅನೇಕ ಜಾತ್ಯತೀತವಾದಿಗಳು ಮತ್ತು ಹಿಂದೂದ್ವೇಷಿ ಕಾಂಗ್ರೆಸ್ ಇವರಿಗೆ ಹೊಟ್ಟೆ ಉರಿ ಬಂದಿದೆ. ಮುಸಲ್ಮಾನ ಮುಖಂಡರು ಕೂಡ ಇದನ್ನು ವಿರೋಧಿಸುತ್ತಿದ್ದಾರೆ. ಈಗ ‘ಇತ್ತೆಹಾದ-ಏ-ಮಿಲ್ಲತ್ ಕೌನ್ಸಿಲ್’ನ ಮುಖ್ಯಸ್ಥ ಮೌಲಾನ ತೌಕಿರ ರಝಾ ಇವರು ಇದರ ವಿರುದ್ಧ ಹೇಳಿಕೆ ನೀಡಿದ್ದಾರೆ. ಅವರು ಮುಸಲ್ಮಾನರು ಪ್ರತಿಸಲ ಬಲಿದಾನ ನೀಡುವುದಿಲ್ಲ. ದೇಶದಲ್ಲಿನ ನಮ್ಮ ಮಸೀದಿ ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ಈ ವಿಷಯ ನಾವು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಝಾ ಮಾತು ಮುಂದುವರಿಸಿ, 

೧. ಭಾಜಪಾಗೆ ನಮ್ಮ ಅಜಾನ ಮೇಲೆ ಕೂಡ ಆಕ್ಷೇಪ ಇದೆ, ಈ ವಿಷಯ ಯಾರಿಂದಲು ಮರೆಯಾಗಿಲ್ಲ, ನಿಜವೆಂದರೆ ಭಾಜಪಗೆ ಮುಸಲ್ಮಾನರ ಅಸ್ತಿತ್ವವೇ ತೊಂದರೆ ಅನಿಸುತ್ತಿದೆ.

೨. ರಾಮಮಂದಿರದ ಬಗ್ಗೆ ತೀರ್ಪು ನೀಡಿದ್ದಾರೆ, ಅದರಿಂದ ಸರ್ವೋಚ್ಚ ನ್ಯಾಯಾಲಯದ ವಿಶ್ವಾಸದ ಮೇಲೆ ಕೂಡ ಪ್ರಶ್ನ ಚಿಹ್ನೆ ಉಪಸ್ಥಿತಗೊಳ್ಳುತ್ತದೆ. ಸರ್ವೋಚ್ಚ ನ್ಯಾಯಾಲಯದ ಯಾವ ನ್ಯಾಯಾಧೀಶರು ರಾಮಮಂದಿರದ ಮೇಲೆ ತೀರ್ಪು ನೀಡಿದ್ದಾರೆ, ಅವರನ್ನು ನಂತರ ರಾಜ್ಯಸಭೆಯಲ್ಲಿ ನೇಮಕಗೊಳಿಸಲಾಗಿದೆ. ಇದರ ಅರ್ಥ ರಾಮ ಮಂದಿರದ ತೀರ್ಪು ಮೊದಲನೇ ನಿಶ್ಚಯಿಸಲಾಗಿತ್ತು.

೩. ಯಾರಾದರೂ ನನಗೆ ರಾಮ ಮಂದಿರದ ಉದ್ಘಾಟನೆಯ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದರೆ, ನಾನು ಅದಕ್ಕೆ ಹೋಗುವುದಿಲ್ಲ. ಇದರ ಕಾರಣ ಎಂದರೆ, ಆ ಕಾರ್ಯಕ್ರಮದ ಆಯೋಜನೆ ಇದು ಧಾರ್ಮಿಕ ಕಾರಣದಿಂದ ಕಡಿಮೆ ಹಾಗೂ ರಾಜಕೀಯ ಲಾಭ ಪಡೆಯುವುದಕ್ಕಾಗಿ ಅಧಿಕ ಪ್ರಮಾಣದಲ್ಲಿ ಮಾಡಲಾಗಿದೆ. (ಹಿಂದೂಗಳ ತ್ಯಾಗದಿಂದ ಕಟ್ಟಲಾಗಿರುವ ದೇವಸ್ಥಾನದ ಕುರಿತು ವಿಷಕಾರುವ ತೌಕಿರ ರಝಾ ಇವರಿಗೆ ಯಾರು ಆಮಂತ್ರಣ ನೀಡುವುದಿಲ್ಲ ಇದನ್ನು ಅವರು ಅರಿತುಕೊಳ್ಳಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

‘ನಂಬುವಂತೆ ಸುಳ್ಳು ಹೇಳು, ಇದು ರಝಾ ಇವರಂತಹ ಮುಸಲ್ಮಾನ ನಾಯಕರ ಹಳೆ ಚಳಿಯಾಗಿದೆ. ಎಂದರೆ ಇಂತಹ ಪ್ರಚೋದನಕಾರಿ ಹೇಳಿಕೆಯ ವಿರುದ್ಧ ರಝಾ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ನಾಳೆ ನಿಜವಾಗಯು ರಾಮಮಂದಿರದ ಉದ್ಘಾಟನೆಯ ಕುರಿತು ಎಲ್ಲಾದರೂ ಯಾವುದಾದರೂ ಹಿಂಸಾಚಾರ ನಡೆದರೆ ಅದಕ್ಕೆ ರಝಾ ಹೊಣೆ ಎಂದು ಜೈಲಿಗೆ ಅಟ್ಟಬೇಕು.

ಇತಿಹಾಸದ ಇದಕ್ಕಿಂತಲೂ ವಿಪರ್ಯಾಸ ಇನ್ಯಾವುದು ಇರಲು ಸಾಧ್ಯ ? ನಿಜವೆಂದರೆ ಈಗ ಹಿಂದೂಗಳು ಈ ರೀತಿಯ ಅಪಪ್ರಚಾರದ ವಿರುದ್ಧ ಜಗತ್ತಿಗೆ ನಿಜವಾದ ಇತಿಹಾಸ ಹೇಳಬೇಕು ಮತ್ತು ‘ಅಪರಾಧೀ ತನ ಇಟ್ಟುಕೊಳ್ಳದ ಹಿಂದೂ (ಅನ್ಅಪೋಲೋಜೆಟಿಕ್ ಹಿಂದೂ) ಆಗಿರುವ ಕುರಿತು ರಾಷ್ಟ್ರ ವ್ಯಾಪಿ ಆಂದೋಲನ ಕೈಗೆತ್ತಿಕೊಳ್ಳಬೇಕು !

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಈ ರೀತಿಯ ಆಕ್ಷೇಪ ವ್ಯಕ್ತಪಡಿಸಿರುವುದು ಇದು ಪ್ರಜಾಪ್ರಭುತ್ವದ್ರೋಹಿ ಹೇಳಿಕೆ ಆಗಿದೆ. ಇಂತಹ ಮುಖಂಡರ ವಿರುದ್ಧ ಈಗ ಕಠಿಣ ಕ್ರಮ ಕೈಗೊಳ್ಳಬೇಕು !