|
ಬೆಂಗಳೂರು – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಅಧ್ಯಯನವನ್ನು ನಡೆಸಲು ಉಡಾವಣೆ ಮಾಡಲಾಗಿದ್ದ ‘ಆದಿತ್ಯ ಎಲ್ 1’ ಬಾಹ್ಯಾಕಾಶ ನೌಕೆಯು ‘ಲಾಗ್ರೇಂಜ್ ಪಾಯಿಂಟ್ 1’ ನಲ್ಲಿ ಅಂತಿಮವಾಗಿ ಜನವರಿ 6 ರ ಮಧ್ಯಾಹ್ನ ತಲುಪಿತು. ಈ ಬಾಹ್ಯಾಕಾಶ ನೌಕೆಯನ್ನು ಸೆಪ್ಟೆಂಬರ್ 2, 2023 ರಂದು ಉಡಾವಣೆ ಮಾಡಲಾಗಿತ್ತು. 126 ದಿನಗಳಲ್ಲಿ 15 ಲಕ್ಷ ಕಿಲೋಮೀಟರ್ ಕ್ರಮಿಸಿ, ಸಂಜೆ 4 ಗಂಟೆ ಸುಮಾರಿಗೆ ಅಲ್ಲಿನ ‘ಹಾಲೋ ಆರ್ಬಿಟ್’ ನಲ್ಲಿರುವ ಈ ಪಾಯಿಂಟ ಅನ್ನು ತಲುಪಿತು. ಈ ಬಾಹ್ಯಾಕಾಶ ನೌಕೆಯು ಮುಂದಿನ ಐದು ವರ್ಷಗಳ ಕಾಲ ಸೂರ್ಯನ ಅಧ್ಯಯನವನ್ನು ನಡೆಸಲಿದೆ. ಈ ಯಶಸ್ಸಿಗಾಗಿ ಪ್ರಧಾನಮಂತ್ರಿ ಮೋದಿಯವರು ದೇಶವಾಸಿಗಳಿಗೆ ಶುಭ ಹಾರೈಸುವ ಪೋಸ್ಟ್ ಅನ್ನು ಟ್ವೀಟ್ ಮಾಡಿದ್ದಾರೆ.
ISRO’s “Aditya L1” has reached ‘Lagrange point’ !
Travelled 25 lakh kilometers in 126 days
It’ll study the Sun for the next 5 years#ISRO 🇮🇳 #AdityaL1Mission #AdityaL1pic.twitter.com/zA8spGdUlj
— Sanatan Prabhat (@SanatanPrabhat) January 6, 2024
‘ಲ್ಯಾಗ್ರೇಂಜ್ ಪಾಯಿಂಟ್ 1’ ಎಂದರೆ ಏನು?
ಇಟಾಲಿಯನ್-ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಅವರ ಹೆಸರಿನಲ್ಲಿ ‘ಲಾಗ್ರೇಂಜ್ ಪಾಯಿಂಟ್’ ಎಂದು ಹೆಸರಿಸಲಾಗಿದೆ. ಇದನ್ನು ‘ಎಲ್ 1’ ಎಂದೂ ಕರೆಯಲಾಗುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ 5 ಬಿಂದುಗಳಿವೆ, ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಬಲಗಳು ಸಮತೋಲನದಲ್ಲಿರುತ್ತವೆ. ಅಥವಾ ನೀವು ಯಾವುದೇ ವಸ್ತುವನ್ನು ಆ ಹಂತದಲ್ಲಿ ಇರಿಸಿದರೆ, ಅದು ಆ ಬಿಂದುವಿನ ಸುತ್ತಲೂ ಸುಲಭವಾಗಿ ತಿರುಗುತ್ತದೆ. ಮೊದಲ ಲ್ಯಾಗ್ರೇಂಜ್ ಪಾಯಿಂಟ್ ಭೂಮಿ ಮತ್ತು ಸೂರ್ಯನ ನಡುವೆ 15 ಲಕ್ಕ ಕಿಲೋಮೀಟರ್ ದೂರದಲ್ಲಿದೆ. ಈ ಬಿಂದೂವಿನ ಮೇಲೆ ಗ್ರಹಣದ ಯಾವುದೇ ಪ್ರಭಾವ ಬೀರುವುದಿಲ್ಲ. ಈ ಸ್ಥಾನದಿಂದ ಸೂರ್ಯನು 15 ಕೋಟಿ ಕಿಲೋಮೀಟರ್ ದೂರದಲ್ಲಿದ್ದಾನೆ.