ನವ ದೆಹಲಿ – ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯನ್ನು ಸರಕಾರಿಕರಣಗೊಳಿಸುವ ಹಾಗೆಯೇ ಹಿಂದೂಗಳಿಗೆ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ಪೂಜಿಸುವ ಅಧಿಕಾರವನ್ನು ನೀಡುವಂತೆ ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಅಲಹಾಬಾದ್ ಉಚ್ಚನ್ಯಾಯಾಲಯ ಕೂಡ 11 ಅಕ್ಟೋಬರ್ 2023 ರಂದು, ಈ ಕೋರಿಕೆಯ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ವಿಷಯವು ಈ ಮೊದಲೇ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ, ಒಂದಕ್ಕಿಂತ ಹೆಚ್ಚು ಮೊಕದ್ದಮೆಗಳನ್ನು ನಡೆಸಬಾರದು. ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
The Supreme Court rejects Hindus’ plea to grant permission to offer Pooja at SriKrishna Janmabhoomi
श्री कृष्णजन्मभूमी । मथुरा#Mathura । सुप्रीम कोर्ट pic.twitter.com/aXGdjsDhHu
— Sanatan Prabhat (@SanatanPrabhat) January 6, 2024