ಸಾಧಕರಿಗೆ ಸೂಚನೆ ಹಾಗೂ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !
ಸಂಚಾರಿವಾಣಿಯ ಮೂಲಕ ಸಂಪರ್ಕಿಸಿ ಅಥವಾ ಕಿರುಸಂದೇಶವನ್ನು ಕಳುಹಿಸಿ ನಾಗರಿಕರನ್ನು ಮೋಸಗೊಳಿಸುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಾತ್ಕಾಲಿಕ ಸಾಮಾಜಿಕ ಸಮಸ್ಯೆಗಳು, ನಾಗರಿಕರ ದೌರ್ಬಲ್ಯ, ಅಜ್ಞಾನ, ಮುಗ್ಧತೆ ಇತ್ಯಾದಿ ಕಾರಣಗಳಿಂದ ಸಮಾಜವನ್ನು ಅನೇಕ ದುಷ್ಟಪ್ರವೃತ್ತಿಗಳು ಮೋಸ ಮಾಡುತ್ತಿವೆ. ಇದೇ ರೀತಿ ಮುಂದಿನ ಕೆಲವು ಕಾರಣಗಳಿಗಾಗಿ ‘ಆಧಾರಕಾರ್ಡ್ ಸಂಖ್ಯೆ’, ‘ಎಟಿಎಮ್ ಪಿನ್’, ‘ಓಟಿಪಿ’ ಇತ್ಯಾದಿ ಕೇಳಿ ಅಥವಾ ಕಳುಹಿಸಿದ ಲಿಂಕ್ ‘ಕ್ಲಿಕ್’ ಮಾಡಲು ಹೇಳಿ ನಾಗರಿಕರನ್ನು ಮೋಸಗೊಳಿಸುವುದು ಈ ಹಿಂದೆಯೂ ನಡೆಯುತ್ತಿತ್ತು, ಈಗಲೂ ನಡೆಯುತ್ತಿದೆ.
೧. ಸಂಚಾರಿವಾಣಿಯ ಮೂಲಕ ಹೀಗೆ ಮೋಸ ಮಾಡಲಾಗುತ್ತದೆ !
ಅ. ವಿದ್ಯುತ್ ಬಿಲ್ನ್ನು ಸಮಯಕ್ಕೆ ಸರಿಯಾಗಿ ತುಂಬಿಸದಿರುವುದರಿಂದ ಇಂದು ರಾತ್ರಿ ೯.೩೦ ಕ್ಕೆ ನಿಮ್ಮ ವಿದ್ಯುತ್ ಜೋಡಣೆಯನ್ನು ಬಂದ ಮಾಡಲಾಗುವುದು. ಹಾಗೆ ಆಗಬಾರದೆಂದು ನಮ್ಮ …….. ಈ ಸಂಖ್ಯೆಗೆ ಫೋನ್ ಮಾಡಿರಿ.
ಆ. ಸಂಚಾರಿವಾಣಿಯ ‘ಸಿಮ್ ಕಾರ್ಡ್’ನ್ನು ‘೪ಜಿ’ ಯಿಂದ ‘೫ಜಿ’ಗೆ ‘ಟ್ರಾನ್ಸ್‌ಫರ್’ ಮಾಡಲಿಕ್ಕಿದೆ. ಹಾಗೆ ಮಾಡದಿದ್ದರೆ ನಿಮ್ಮ ‘ಕಾರ್ಡ್ ಬ್ಲಾಕ್’ ಆಗಬಹುದು ಹಾಗೂ ಅದನ್ನು ಪುನಃ ಎಂದಿಗೂ ಓಪನ್ ಮಾಡಲು ಆಗಲಾರದು. ಸಂಚಾರಿವಾಣಿ ಕಂಪನಿಯ ‘ಸರ್ವಿಸ್ ಸೆಂಟರ್’ನಲ್ಲಿ ಹೋಗಿ ಈ ಪ್ರಕ್ರಿಯೆಯನ್ನು ಮಾಡಲು ಬರುವುದಿಲ್ಲ. ಆದ್ದರಿಂದ ‘ಆನ್‌ಲೈನ್’ ಪದ್ಧತಿಯಿಂದ ಇದನ್ನು ಮಾಡಬೇಕಾಗುತ್ತದೆ.
ಇ. ವಿದೇಶಿ ವಿನಿಮಿಯ ಇಲಾಖೆಯಿಂದ (ಫಾರೇನ್ ಎಕ್ಸೇಂಜ್’ನಿಂದ) ಬೆಲೆಬಾಳುವ ವಸ್ತುಗಳನ್ನು ಬಿಡಿಸಲಿಕ್ಕಿದೆ.
ಈ. ‘ನಿಮ್ಮ ನೀವು ಇಷ್ಟಪಡದ ಕೆಲವು ಛಾಯಾಚಿತ್ರಗಳು ನನ್ನ ಹತ್ತಿರ ಇವೆ’ ‘ನೀವು ನನ್ನನ್ನು ಸಂಪರ್ಕಿಸಿದ್ದೀರಿ. ನಿಮ್ಮ ‘ಮಿಸ್ಡ ಕಾಲ್’ ನೋಡಿ ನಾನು ನಿಮ್ಮನ್ನು ಸಂಪರ್ಕಿಸಿದ್ದೇನೆ’, ಹೀಗೆ ಸಾರಾಸಗಟಾಗಿ ಸುಳ್ಳನ್ನು ಹೇಳುವುದು, ನಾಗರಿಕರು ನಿರಾಕರಿಸಿದರೆ ಮೋಸ ಮಾಡುವವರು ದುರಂಕಾರದಿಂದ ಮಾತನಾಡುತ್ತಾರೆ.
ಉ. ಕೆಲವೊಮ್ಮೆ ‘ಂಟಿಥಿ ಆಎಸ್ಞ’ ಮಾಡಲು ಕೂಡ ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಮೊಬೈಲ್‌ನಲ್ಲಿ ಇರುವ ಅಥವಾ ಮೋಬೈಲ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಹೇಳಿದ ಇತರ ಯಾವುದೇ ಆಪ್ನ್ನು ‘ಇನ್ಸ್‌ಟಾಲ್’ ಮಾಡಬಾರದು
ಊ. ಕೆಲವೊಮ್ಮೆ ಸಂಚಾರಿವಾಣಿ ಎತ್ತಿದ ತಕ್ಷಣ ಒಂದು ‘ಐ.ವಿ.ಆರ್. ಆಡಿಯೊ, (ಸ್ವಯಂಚಾಲಿತ ಟೆಲಿಫೋನ್ ಪ್ರಣಾಲಿ) ಆರಂಭವಾಗುತ್ತದೆ ಹಾಗೂ ‘ನಿಮ್ಮ ಫೋನ್ ನಂಬರ ಎರಡು ಗಂಟೆಯಲ್ಲಿ ಡಿಎಕ್ಟಿವ್’ ಆಗಲಿಕ್ಕಿದೆ, ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ೯ ಕ್ರಮಾಂಕ ಒತ್ತಿರಿ’, ಇಂತಹ ಸೂಚನೆ ಬರುತ್ತದೆ. ಇಂತಹ ಪ್ರಸಂಗಗಳಲ್ಲಿ ‘ಆ ಕಾಲ್ ಕಟ್ ಮಾಡಿ ತಮ್ಮ ‘ಸಿಮ್ ಕಾರ್ಡ್’ನ ಕಂಪನಿಯ ಗ್ರಾಹಕ ಸೇವಾಕೇಂದ್ರ’ವನ್ನು ಸಂಪರ್ಕಿಸಬೇಕು.
೨. ‘ಫೋನ್ ಅಥವಾ ಮೆಸೇಜ್’ ಇದ್ದರೆ ನಾಗರಿಕರು ಭಯಪಡದೆ ಫೋನ್ ‘ಕಟ್’ ಮಾಡಬೇಕು !
ಮೋಸಗಾರರಿಂದ ಹೇಗಾದರೂ ಮಾಡಿ ಪರಿಸ್ಥಿತಿಯನ್ನು ದುರುಪಯೋಗಿಸಿಕೊಂಡು ಮಾತಿನಿಂದ ಮರುಳು ಮಾಡಿ ಜನರನ್ನು ಮೋಸ ಮಾಡಲಾಗುತ್ತದೆ ಅಥವಾ ಹೆದರಿಸಲಾಗುತ್ತದೆ. ಇಂತಹ ಪ್ರಸಂಗಗಳಲ್ಲಿ ಜಾಗರೂಕತೆಯ ಅಭಾವದಿಂದ ಜನರು ಮೋಸ ಮಾಡುವವರ ವಂಚನೆಗೆ ಅಥವಾ ಉಡುಗೊರೆಗಳ ಆಮಿಷಕ್ಕೆ ಬಲಿಯಾಗುವುದರಿಂದ ನಾಗರಿಕರನ್ನು ಮೋಸಗೊಳಿಸಲಾಗತ್ತದೆ. ಆದ್ದರಿಂದ ನಾಗರಿಕರಿಗೆ ಇಂತಹ ಯಾವುದೇ ಫೋನ್ ಅಥವಾ ಮೆಸೇಜ್ ಬಂದರೆ ಅವರು ಭಯಪಡಬಾರದು. ನಿಮ್ಮ ಮೋಬೈಲ್‌ನ ‘ಸಿಮ್ ಕಾರ್ಡ್’ ಹೀಗೆ ಅನಿರೀಕ್ಷಿತವಾಗಿ ರದ್ದಾಗುವುದಿಲ್ಲ ಅಥವಾ ವಿದ್ಯುತ್ ಜೋಡಣೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಮೇಲೆ ಉಲ್ಲೇಖಿಸಿದ ಯಾವುದೇ ಪ್ರಕಾರ ನಡೆಯುವುದಿಲ್ಲ. ಆದ್ದರಿಂದ ಇಂತಹ ಪ್ರಸಂಗಗಳಲ್ಲಿ ಭಯಪಡದೆ ಅಥವಾ ಯಾವುದೇ ‘ಆಫರ್’ಗೆ ಮರುಳಾಗದೆ ಆತ್ಮವಿಶ್ವಾಸದಿಂದ ಹಾಗೂ ಶಾಂತವಾಗಿದ್ದು ಉತ್ತರ ನೀಡಿ ಫೋನ್ ‘ಕಟ್’ ಮಾಡಬೇಕು.
ಮೋಸ ಮಾಡುವ ಇನ್ನೂ ಒಂದು ಪ್ರಕಾರವನ್ನು ಗಮನದಲ್ಲಿ ತೆಗೆದುಕೊಂಡು ‘ಪೇಮೆಂಟ್ ಆಪ್ಸ’ನ ಉಪಯೋಗವಾಗದ ಖಾತೆಗಳನ್ನು ರದ್ದುಪಡಿಸಿರಿ !
ಕೆಲವೊಮ್ಮೆ ಸಾಧಕರು ‘ಪೆಟಿಎಮ್’, ‘ಗೂಗಲ್ ಪೇ’ ‘ಮೋಬಿಕ್ವಿಕ್’ ಇಂತಹ ಜಾಲತಾಣಗಳಲ್ಲಿ ಹಣದ ವ್ಯವಹಾರ ಮಾಡುವ ಖಾತೆಗಳನ್ನು ತೆರೆಯುತ್ತಾರೆ. ಕ್ರಮೇಣ ಅದರಲ್ಲಿನ ಯಾವುದಾದರೊಂದು ಖಾತೆಯನ್ನು ಉಪಯೋಗಿಸಲು ಆರಂಭಿಸುತ್ತಾರೆ ಹಾಗೂ ಉಳಿದ ಖಾತೆಗಳು ಹಾಗೆಯೇ ಇರುತ್ತವೆ. ಇಂತಹ ಉಪಯೋಗಿಸದ ಹಳೆಯ ಖಾತೆಗಳ ‘ಪೇ ಲೇಟರ’ (ಈಗ ಖರ್ಚು ಮಾಡಿರಿ, ಮುಂದಿನ ತಿಂಗಳು ಹಣ ತುಂಬಿಸಿರಿ !) ಇಂತಹ ಸೌಲಭ್ಯವನ್ನು ಪರಸ್ಪರ ಉಪಯೋಗಿಸಿ ಮೋಸ ಮಾಡಬಹುದು. ಆದ್ದರಿಂದ ಸಾಧಕರ ಉಪಯೋಗವಾಗದ ಯಾವುದೇ ಖಾತೆ ಇದ್ದರೆ, ಅವರು ಅದನ್ನು ರದ್ದುಪಡಿಸಬೇಕು.
ವಾಸ್ತವದಲ್ಲಿ ‘ಯಾವುದೇ ಕಾರಣಕ್ಕಾಗಿ ನಾಗರಿಕರಿಂದ ಸಂಚಾರವಾಣಿಯ ಮೂಲಕ ‘ಆಧಾರಕಾರ್ಡ್ ಸಂಖ್ಯೆ’, ‘ಎಟಿಎಮ್’ನ ಪಿನ್’, ‘ಓಟಿಪಿ’ ಕೇಳುವುದಿಲ್ಲ’, ಎಂದು ಸರಕಾರ, ಆಡಳಿತದವರು, ‘ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ’ ಇತ್ಯಾದಿ ಪದೇ ಪದೇ ಸ್ಪಷ್ಟಪಡಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಯಾರು ಕೂಡ ‘ಆಧಾರ ಕಾರ್ಡ್ ಕ್ರಮಾಂಕ’, ‘ಎಟಿಎಮ್ ಪಿನ್’, ‘ಓಟಿಪಿ’ಯಂತಹ ರಹಸ್ಯದ ಮಾಹಿತಿಗಳನ್ನು ಕೇಳಿದರೆ ಅಥವಾ ಉಡುಗೊರೆ ಸಿಕ್ಕಿದೆಯೆಂದು ‘ಲಿಂಕ್’ ಕಳುಹಿಸಿ ಅದನ್ನು ‘ಕ್ಲಿಕ್’ ಮಾಡಲು ಹೇಳಿದರೆ ಅದನ್ನು ದುರ್ಲಕ್ಷ ಮಾಡಬೇಕು.
ಇಂತಹ ಪ್ರಕಾರದ ವಂಚನೆಗಳಿಗೆ ಮರುಳಾಗಿ ನಿಮ್ಮ ಆರ್ಥಿಕ ಹಾನಿ ಮಾಡಿಕೊಳ್ಳಬೇಡಿ !
ಇಂತಹ ಮೋಸವಾದಾಗ ಅಪರಾಧವನ್ನು ದಾಖಲಿಸಿದರೂ ಮತ್ತು ಅದರ ತನಿಖೆಯಾದರೂ ಏನೂ ಲಾಭವಾಗುವುದಿಲ್ಲ. ಅಪರಾಧಿಗಳು ಸಿಗುವುದು ಹಾಗೂ ಅವರಿಗೆ ದಂಡ ನೀಡುವ ಪ್ರಮಾಣ ಮತ್ತು ನಮ್ಮ ಹಣ ವಾಪಸು ಸಿಗುವುದು ಬಹಳ ಕಡಿಮೆಯಿದೆ. ಆದ್ದರಿಂದ ‘ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂಅರ್’ (ಯಾವುದಾದರೊಂದು ಕೆಟ್ಟ ವಿಷಯ ನಡೆದು ಹೋದ ನಂತರ ಅದನ್ನು ಸುಧಾರಿಸುವುದಕ್ಕಿಂತ ಮೊದಲೆ ಅದು ಆಗಬಾರದೆಂದು ಪ್ರಯತ್ನಿಸುವುದು ಹೆಚ್ಚು ಯೋಗ್ಯವಾಗಿದೆ !) ಆದ್ದರಿಂದ ಮೊದಲೆ ಜಾಗರೂಕತೆ ವಹಿಸಿ ಮುಂದೆ ಆಗಬಹುದಾದ ಹಾನಿಯನ್ನು ತಪ್ಪಿಸಬೇಕು. ತಾವು ಜಾಗರೂಕವಾಗಿದ್ದು ಕುಟುಂಬದವರನ್ನು ಮತ್ತು ಮಿತ್ರರನ್ನೂ ಜಾಗರೂಕಗೊಳಿಸಬೇಕು ! |