Power Failure : ವಿದ್ಯುತ ಉಪಕರಣಗಳಲ್ಲಿ ಅಡಚಣೆ ಕಳೆದ 2 ವಾರಗಳಿಂದ ಕತ್ತಲೆಯಲ್ಲಿ ತೋರಣಗಡ !

ತಕ್ಷಣವೇ ವಿದ್ಯುತ್ ಪೂರೈಕೆ ಪ್ರಾರಂಭಿಸಲು ‘ಸ್ಥಳೀಯ ಮಾವಳಾ(ಸೈನಿಕ) ಸಂಘಟನೆ’ಯ ಆಗ್ರಹ ! 

ವೆಲೆ (ಪುಣೆ ಜಿಲ್ಲೆ) – ವಿದ್ಯುತ್ ಉಪಕರಣಗಳಲ್ಲಿ ಅಡಚನೆಯಿಂದಾಗಿ, ತೋರಣ ಗಡಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ವಿದ್ಯುತ್ ಇಲ್ಲದ ಕಾರಣ ಡಿಸೆಂಬರ್ 20ರಿಂದ ತೋರಣ ಗಡ ಕತ್ತಲೆಯಲ್ಲಿದೆ. ಕೋಟೆಗೆ ಬರುವ ಪ್ರವಾಸಿಗರಿಗೆ ಕೋಟೆಯ ಮೇಲಿನ ಕಾವಲುಗಾರರು ಮತ್ತು ಸಣ್ಣ ಪುಟ್ಟ ಕೆಲಸಗಳನ್ನು ಮಾಡುವ ಕಾರ್ಮಿಕರಿಗೆ ಅನಾನುಕೂಲತೆಯಾಗಿದೆ. ಡಿಸೆಂಬರ್ 2023 ರ ವರೆಗೆ ವಿದ್ಯುತ್ ಉಪಕರಣಗಳನ್ನು ದುರಸ್ತಿ ಮಾಡುವವರಿದ್ದರು. ಆದರೆ ವಿದ್ಯುತ್ ಉಪಕರಣಗಳು ಸ್ಥಗಿತಗೊಂಡಿದೆ. ಈ ವಿಷಯದಲ್ಲಿ ‘ಸ್ಥಳೀಯ ಮಾವಳಾ(ಸೈನಿಕ) ಸಂಘಟನೆ’ಯು ವೆಲೆ ತಾಲೂಕಿನ ಅಧ್ಯಕ್ಷರಾದ ಜ್ಞಾನೇಶ್ವರ ವೆಗರೆ, ರಾಮಭಾವು ರಾಜಿವಡೆ, ಬಾಪು ಸಾಬಳೆ ಮುಂತಾದವರು ವೆಲೆಯ ಮುಖ್ಯ ವಿದ್ಯುತ್ ಕಚೇರಿಗೆ ಮನವಿಯನ್ನು ಸಲ್ಲಿಸುತ್ತಾ, ಕೋಟೆಯ ಮೇಲಿನ ವಿದ್ಯುತ್ ಪೂರೈಕೆಯನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಕೋರಿದ್ದಾರೆ.

ಸ್ವಾತಂತ್ರ್ಯದ ನಂತರ ಇತ್ತೀಚೆಗಷ್ಟೇ ಮೊದಲ ಬಾರಿಗೆ ಕೋಟೆಯ ಮೇಲೆ ವಿದ್ಯುತ್ ಬಂದಿತ್ತು !

ರಾಜ್ಯದ ಅತ್ಯಂತ ದುರ್ಗಮ ಕೋಟೆಯಾಗಿರುವ ತೋರಣಗಡದ ಮೇಲೆ ಸ್ವಾತಂತ್ರ್ಯದ ಬಳಿಕ ಇತ್ತೀಚೆಗಷ್ಟೇ ವಿದ್ಯುತ್ ಬಂದಿತ್ತು. ಆದರೆ ಕೋಟೆಯ ಮೇಲೆ ವಿದ್ಯುತ್ ಪೂರೈಕೆ ಪ್ರಾರಂಭವಾದಾಗಿನಿಂದ ಅದು ಮೇಲಿಂದ ಮೇಲೆ ವ್ಯತ್ಯಯವಾಗುತ್ತಿತ್ತು. ಮುಖ್ಯ ವಿತರಣಾ ಶಾಖೆಯ ಇಂಜಿನಿಯರ್ ಆಗಿರುವ ವಿನೋದ ಥೇಟೆ ಇವರು ಮಾತನಾಡಿ, ತೋರಣಗಡಕ್ಕೆ ವಿದ್ಯುತ್‌ ಪೂರೈಸುವ ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ಕೆಟ್ಟಿದ್ದು, ಅಲ್ಲಿ ಹೊಸ ವಿದ್ಯುತ್ ಉಪಕರಣಗಳನ್ನು ಅಳವಡಿಸಲಾಗುವುದು. ಮುಖ್ಯ ವಿತರಣಾ ಶಾಖೆಯ ಕಾರ್ಯಕಾರಿ ಇಂಜಿನಿಯರ್ ಆರಾಗಿರುವ ಮಾಣಿಕ ರಾಥೋಡ ಅವರು ತಕ್ಷಣ ಕ್ರಮವನ್ನು ಪ್ರಾರಂಭಿಸಿದ್ದು, ಸಂಬಂಧಿಸಿದ ಗುತ್ತಿಗೆದಾರರು 2 ದಿನಗಳಲ್ಲಿ ಉಪಕರಣಗಳನ್ನು ಅಳವಡಿಸುವವರಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಛತ್ರಪತಿ ಶಿವಾಜಿ ಮಹಾರಾಜರ ಕೋಟೆಯ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಜವಾಬ್ದಾರರಾಗಿರುವ ಅಧಿಕಾರಿಗಳ ಮೇಲೆ ಸರಕಾರ ಕಠಿಣ ಕ್ರಮವನ್ನು ಕೈಕೊಳ್ಳುವುದು ಅಪೇಕ್ಷಿತವಿದೆ !