‘ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಗೋಧ್ರಾದಂತೆ ಘಟಿಸುವ ಸಾಧ್ಯತೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಬಿ.ಕೆ .ಹರಿಪ್ರಸಾದ

ರಾಜ್ಯದ ಕಾಂಗ್ರೆಸ್ಸಿನ ಮುಖಂಡ ಬಿ.ಕೆ .ಹರಿಪ್ರಸಾದ ಅವರ ಹುರುಳಿಲ್ಲದ ದಾವೆ !

ಬೆಂಗಳೂರು – ನಾನು ನಿಮಗೆ, ಕೆಲವು ಸಂಘಟನೆಗಳ ಮುಖ್ಯಸ್ಥರು ಕೆಲವು ರಾಜ್ಯಗಳಿಗೆ ಹೋಗಿದ್ದರು ಮತ್ತು ಅವರು ಅಲ್ಲಿಯ ಕೆಲವು ಭಾಜಪದ ಮುಖಂಡರನ್ನು ಪ್ರಚೋದಿಸಿದ್ದಾರೆ ಎಂಬ ಮಾಹಿತಿ ನಾನು ನಿಮಗೆ ತಿಳಿಸುತ್ತಿದ್ದೇನೆ. ನಾನು ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ; ಆದರೆ ಅವರು ಇದನ್ನು ಮಾಡುತ್ತಿದ್ದಾರೆ. ಅವರು ಇಂತಹ ರಕ್ತಪಾತದ ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದ್ದರಿಂದ ಗೋಧ್ರಾ ಘಟನೆಯಂತಹ ಘಟನೆ ಘಟಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಕಾಂಗ್ರೆಸ್ಸಿನ ಮುಖಂಡ ಬಿ.ಕೆ. ಹರಿಪ್ರಸಾದ ಇವರು ತಮ್ಮ ಕಳವಳ ವ್ಯಕ್ತಪಡಿಸಿದರು. ೨೦೦೨ ರಲ್ಲಿ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್‌ಪ್ರಸ್‌ನ ಒಂದು ಬೋಗಿಗೆ ಹೊರಗಿನಿಂದ ಚಿಲಕ ಹಾಕಿ ಮತಾಂಧ ಮುಸಲ್ಮಾನರು ಬೆಂಕಿ ಹಚ್ಚಿದ್ದರು. ಇದರಲ್ಲಿ ೫೪ ಕರಸೇವಕರು ಹತರಾಗಿದ್ದರು. ಅದರ ನಂತರ ಗುಜರಾತ್‌ನಲ್ಲಿ ಗಲಭೆ ಭುಗಿಲೆದ್ದಿತ್ತು.

ಹರಿಪ್ರಸಾದ ಮಾತು ಮುಂದುವರಿಸಿ, ಶ್ರೀರಾಮ ಮಂದಿರ ಅಭಿಷೇಕ ಸಮಾರಂಭ ಇದು ಧಾರ್ಮಿಕವಾಗಿರದೆ ರಾಜಕೀಯ ಕಾರ್ಯಕ್ರಮವಾಗಿದೆ. ನನ್ನ ಮಾಹಿತಿಯ ಪ್ರಕಾರ ೪ ಶಂಕರಾಚಾರ್ಯರು ಹಿಂದೂ ಧರ್ಮದ ಪ್ರಮುಖರಾಗಿದ್ದಾರೆ. ೪ ಶಂಕರಾಚಾರ್ಯರು ಅಥವಾ ಯಾವುದೇ ಧಾರ್ಮಿಕ ನಾಯಕರು ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರೆ ನಾನು ಈ ಕಾರ್ಯಕ್ರಮದಲ್ಲಿ ಸಹಭಾಗಿ ಆಗುತ್ತಿದ್ದೆ. ಪ್ರಧಾನಮಂತ್ರಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಇವರು ಧಾರ್ಮಿಕ ನಾಯಕ ಅಲ್ಲದೆ ರಾಜಕಾರಣಿಗಳಾಗಿದ್ದಾರೆ. ಇದನ್ನು ನಾವು ಗಮನಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯ ಹೇಳಿಕೆ ನೀಡಿ ‘ಗೋಧ್ರಾದ ಘಟನೆ ಹಿಂದುಗಳಿಂದ ಘಟಿಸಿರುವುದು’, ಎಂದು ದಾವೆ ಮಾಡಿ ಹಿಂದುಗಳನ್ನು ‘ಕೊಲೆಗಾರ’ ಎಂದು ಬಣ್ಣಿಸುವ ಕಾಂಗ್ರೆಸ್ ಹೀನ ಪ್ರಯತ್ನ ಮಾಡುತ್ತಿದೆ ಇದನ್ನು ತಿಳಿದುಕೊಳ್ಳಿ !