ಪ್ರಭು ಶ್ರೀರಾಮನ ವಿಷಯವಾಗಿ ರಾಜಕೀಯ ಮಾಡುವುದು ಅಪೇಕ್ಷಿತವಿಲ್ಲ ! – ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ

ಸೋಲ್ಲಾಪುರ, ಜನವರಿ ೪ (ವಾರ್ತೆ) – ಪ್ರಭು ಶ್ರೀ ರಾಮ ಇವರು ಎಲ್ಲ ರಾಜಕಾರಣಿಗಳಿಗಿಂತಲೂ ಮಿಗಿಲಾದವರು. ಪ್ರಭು ಶ್ರೀರಾಮ ಇವರು ಸಂಪೂರ್ಣ ದೇಶದವರಾಗಿದ್ದಾರೆ. ಆದ್ದರಿಂದ ಶ್ರೀರಾಮನ ದೇವಸ್ಥಾನ ಕಟ್ಟಲಾಗುತ್ತಿದೆ. ಈ ಕಾರ್ಯಾವನ್ನು ಎಲ್ಲರೂ ಒಟ್ಟಾಗಿ ಸೇರಿ ಮಾಡುವುದು ಅಪೇಕ್ಷಿತವಾಗಿದೆ. ‘ಹಮಾಸ್’ ಇಸ್ರೇಲ್ ಮೇಲೆ ಯುದ್ಧ ಹೇರಿದ ನಂತರ ಅಲ್ಲಿಯ ಸಚಿವ ಸಂಪುಟ ವಿಸರ್ಜನೆಯಾಗಿ ಅಲ್ಲಿ ‘ಯುದ್ಧ ಸಚಿವ ಸಂಪುಟ’ ಅಸ್ತಿತ್ವಕ್ಕೆ ಬಂದಿತು. ಅದರಂತೆಯೇ ಪ್ರಭು ಶ್ರೀ ರಾಮನ ದೇವಸ್ಥಾನಕ್ಕಾಗಿ ನಾವೆಲ್ಲರೂ ಒಟ್ಟಾಗಿ ಸೇರುವುದು ಆವಶ್ಯಕವಾಗಿದ್ದು ಅದರಲ್ಲಿ ರಾಜಕೀಯ ಮಾಡುವುದು ಅಪೇಕ್ಷಿತವಿಲ್ಲ, ಎಂದು ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು ಪ್ರತಿಪಾದಿಸಿದರು. ಅವರು ಸೋಲ್ಲಾಪುರದಲ್ಲಿ ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಶ್ರೀರಾಮ ಮಂದಿರ ವಿಷಯದ ಬಗ್ಗೆ ಸಂವಾದ ನಡೆಸಲು ಈ ಸಭೆ ಆಯೋಜಿಸಲಾಗಿತ್ತು.

ಪ.ಪೂ.ಸ್ವಾಮಿಜಿ ಮಾತು ಮುಂದುವರೆಸಿ,

೧. ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಲಕ್ಷಾಂತರ ಜನರ ರಕ್ತ ಹರಿದಿದೆ. ಅನೇಕ ಪೀಳಿಗೆ ಶ್ರೀರಾಮ ಮಂದಿರದ ಸ್ಥಾಪನೆಯ ದಾರಿ ಕಾಯುತ್ತಿದ್ದಾರೆ. ಸಂಪೂರ್ಣ ದೇಶ ಕಣ್ಣಲ್ಲಿ ಪ್ರಾಣ ಇಟ್ಟುಕೊಂಡು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಎಂದಾಗುವುದು ? ಎಂದು ದಾರಿ ಕಾಯುತ್ತಿದ್ದಾರೆ. ಆದ್ದರಿಂದ ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ತಡ ಮಾಡದೆ ಅದರ ಸ್ಥಾಪನೆ ಆದಷ್ಟು ಬೇಗನೆ ಹೇಗೆ ಮಾಡುವುದು ? ಇದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ನಾವು ಜನವರಿ ೨೨ ಈ ದಿನ ಆಯ್ಕೆ ಮಾಡಿದ್ದೇವೆ.

೨. ಪ್ರಭು ಶ್ರೀರಾಮನ ಸ್ಥಾಪನೆ ಈಗ ಆಗುತ್ತಿದ್ದರೂ ಅದಕ್ಕಾಗಿ ಎಷ್ಟೋ ದಿನಗಳ ಹಿಂದಿನಿಂದಲೇ ಅನುಷ್ಠಾನಗಳು ನಡೆಯುತ್ತಿವೆ. ಮಹಾರಾಷ್ಟ್ರದ ಪುಣೆಯಲ್ಲಿನ ೧೧ ಜನರ ಒಂದು ಗುಂಪು ಕಳೆದ ಒಂದು ಕಾಲು ವರ್ಷದಿಂದ ಅನುಷ್ಠಾನ ಮಾಡುತ್ತಿದೆ. ಇದೆಲ್ಲವೂ ಅವರ ಸ್ವಂತ ಖರ್ಚಿನಿಂದ ಮಾಡುತ್ತಿದ್ದು ಅದಕ್ಕಾಗಿ ಅವರಿಗೆ ಯಾವುದೇ ದಕ್ಷಿಣೆ ನೀಡಿಲ್ಲ. ಜನವರಿ ೧೭ ರಂದು ಪ್ರಭು ಶ್ರೀರಾಮನ ಆಗಮನವಾಗುವುದು ಮತ್ತು ಜನವರಿ ೧೮ ರಿಂದ ಪೂಜಾ ವಿಧಿಗಳು ಆರಂಭವಾಗುವುದು. ಜನವರಿ ೨೨ ರ ವರೆಗೆ ವಿವಿಧ ವಿಧಿಗಳು ನಡೆಯುವುದು.

೩. ‘ಕೆಲವು ಜನರಿಗೆ ಆಮಂತ್ರಣ ನೀಡಿಲ್ಲ’, ಎಂದು ಆರೋಪಿಸುತ್ತಿದ್ದಾರೆ: ಆದರೆ ಯಾವ ಜನರು ಆಮಂತ್ರಣ ನಿರಾಕರಿಸುವುದಿಲ್ಲ ಅಂತಹವರಿಗೆ ಅದನ್ನು ನೀಡಲಾಗುತ್ತಿದೆ. ಯಾವ ರೀತಿ ‘ಪದ್ಮ’ ಪ್ರಶಸ್ತಿ ನೀಡುವ ಮೊದಲು ‘ನಾನು’ ಈ ಪ್ರಶಸ್ತಿ ನಿರಾಕರಿಸುವುದಿಲ್ಲ’, ಎಂದು ಪ್ರತಿಜ್ಞಾಪತ್ರ ಬರೆಸಿಕೊಳ್ಳಲಾಗುತ್ತದೆ; ಕಾರಣ ಈ ಪ್ರಶಸ್ತಿ ನಿರಾಕರಿಸುವುದು ಎಂದರೆ ದೇಶಕ್ಕೆ ಅವಮಾನ ಮಾಡುವ ಹಾಗೆ ಆಗುವುದು. ಶ್ರೀರಾಮ ಮಂದಿರ ನ್ಯಾಸದಿಂದ ಪ್ರತಿಯೊಬ್ಬರಿಗೂ ಆಮಂತ್ರಣ ನೀಡಬಹುದಾಗಿತ್ತು; ಆದರೆ ಯಾರಾದರೂ ಆಮಂತ್ರಣ ನಿರಾಕರಿಸಿದರೇ ಅದು ಯೋಗ್ಯವಾಗುವುದಿಲ್ಲ.

‘ನಮಗೆ ಯಾವುದು ಉಚಿತ ಬೇಡ, ಅಂತಹ ಸ್ವಾಭಿಮಾನಿ ಸಮಾಜ ನಿರ್ಮಾಣ ಮಾಡುವುದು ರಾಜಕಾರಣಿಗಳ ಕರ್ತವ್ಯ !

ಇಂದು ದೇಶದಲ್ಲಿ ಜನರಿಗೆ ಉಚಿತವಾಗಿ ನೀಡುವುದರಲ್ಲಿ ಸ್ಪರ್ಧೆ ನಡೆಯುತ್ತಿದೆ. ವಿದ್ಯುತ್ ಬಿಲ್ ಉಚಿತ, ವೈಫೈ ಉಚಿತ, ಇಂತಹ ಅನೇಕ ವಸ್ತು ಉಚಿತವಾಗಿ ನೀಡಲಾಗುತ್ತಿದೆ. ವಾಸ್ತವದಲ್ಲಿ ಯಾರು ಶಾರೀರಿಕ ದೃಷ್ಟಿಯಿಂದ ಅಶಕ್ತರು ಅಥವಾ ಯಾರು ಯಾವುದೇ ವಿಷಯಕ್ಕೆ ಬೆಲೆ ನೀಡಿ ಪಡೆಯಲು ಸಾಧ್ಯವಿಲ್ಲ, ಅಂತಹವರಿಗೆ ಉಚಿತ ನೀಡುವುದು ಅಪೇಕ್ಷಿತವಾಗಿದೆ. ‘ನಾನು ಪಡೆದಿರುವ ಪ್ರತಿಯೊಂದು ವಸ್ತುವಿಗೆ ಬೆಲೆ ನೀಡುವುದು ನನ್ನ ಕರ್ತವ್ಯವಾಗಿದೆ’, ಅಂತಹ ಸ್ವಾಭಿಮಾನಿ ವೃತ್ತಿಯ ಸಮಾಜ ನಿರ್ಮಾಣ ಮಾಡುವುದು ಇದು ರಾಜಕಾರಣಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ಪ್ರಭು ಶ್ರೀರಾಮನ ವಿಷಯವಾಗಿ ಉದ್ದೇಶಪೂರ್ವಕ ಹೇಳಿಕೆಗಳನ್ನು ನೀಡಿ ಅವರ ಜೀವನ ಮೌಲ್ಯ ಮುಚ್ಚಿ ಹಾಕುವ ಪ್ರಯತ್ನ !

ಕೆಲವರು ‘ಶ್ರೀರಾಮ ಮಾಂಸಹಾರಿ ಆಗಿದ್ದನು’, ಹೀಗೆ ಹೇಳಿಕೆ ನೀಡಿದ್ದಾರೆ, ಅದರ ಬಗ್ಗೆ ‘ನಿಮ್ಮ ಅಭಿಪ್ರಾಯ ಏನು ?’ ಎಂದು ಕೇಳಿದಾಗ ಪ.ಪೂ. ಸ್ವಾಮೀಜಿಯವರು, ”ಯಾವ ರಾಜಕೀಯ ಜನಪ್ರತಿನಿಧಿಗಳು ಮಾಂಸಾಹಾರದ ಬಗ್ಗೆ ಮಾತನಾಡುತ್ತಿದ್ದಾರೆ, ಆ ನಾಯಕರಲ್ಲಿ ಎಷ್ಟು ಜನರು ಮಾಂಸಾಹಾರ ಮಾಡುತ್ತಾರೆ ? ಇದನ್ನು ಪರಿಶೀಲಿಸಿ ನೋಡುವುದು ಆವಶ್ಯಕವಾಗಿದೆ. ಅದರ ಪಟ್ಟಿ ತಯಾರಿಸಿದರೆ ಅದು ಎಲ್ಲರ ಮನೆಗೆ ಹೋಗುತ್ತದೆ. ಪ್ರಭು ಶ್ರೀ ರಾಮನು ಕ್ಷತ್ರಿಯನಾಗಿದ್ದನು. ಉದ್ದೇಶಪೂರ್ವಕವಾಗಿ ಈ ರೀತಿಯ ಹೇಳಿಕೆ ನೀಡಿ ಅವರ ಜೀವನ ಮೌಲ್ಯ ನಿರಾಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರಭು ಶ್ರೀರಾಮ ಯಾವ ಜೀವನ ಮೌಲ್ಯಕ್ಕಾಗಿ ಬದುಕಿದರು ಆ ಮೌಲ್ಯವನ್ನು ನಾವು ನೋಡಬೇಕು ಎಂದು ಹೇಳಿದರು.