GangRape Virtual Reality Game : ಬ್ರಿಟನ್‌ನಲ್ಲಿ ಮೊದಲ ಬಾರಿಗೆ, 16 ವರ್ಷದ ಹುಡುಗಿಯ ಮೇಲೆ ‘ವರ್ಚುವಲ್ ರಿಯಾಲಿಟಿ ಗೇಮ್’ನಲ್ಲಿ (ವಾಸ್ತವದಂತೆ ಭಾಸವಾಗುವ ಆಟ) ಸಾಮೂಹಿಕ ಅತ್ಯಾಚಾರ !

ಲಂಡನ್ (ಬ್ರಿಟನ) – ಬ್ರಿಟನನಲ್ಲಿ ಮೊದಲ ಬಾರಿಗೆ, ‘ವರ್ಚುವಲ್ ರಿಯಾಲಿಟಿ ಗೇಮ್’ನಲ್ಲಿ, ಅಂದರೆ ‘ಮೆಟಾವರ್ಸ್’ನಲ್ಲಿ (ವಾಸ್ತವದಂತೆ ಭಾಸವಾಗುವ ಆಟ) 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಬ್ರಿಟಿಷ್ ಪೊಲೀಸರು ನೀಡಿರುವ ಮಾಹಿತಿಯನುಸಾರ ಸಂತ್ರಸ್ತೆಯು, ಕೆಲವು ಅಪರಿಚಿತರು ಅವಳ ಶರೀರದ ಬಿಂಬದ ಮೇಲೆ `ವರ್ಚುವಲ್ ರಿಯಾಲಿಟಿ ಗೇಮ್‌ ’ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದರು. ಆ ಅವಧಿಯಲ್ಲಿ ಅವಳಿಗೆ ದೈಹಿಕವಾಗಿ ಗಾಯವಾಗಿಲ್ಲ; ಆದರೆ ಅಧಿಕಾರಿಗಳ ಹೇಳಿಕೆಯಂತೆ ಅವಳ ಮನಸ್ಸಿನ ಮೇಲೆ ನಿಜವಾಗಿ ಬಲಾತ್ಕಾರಕ್ಕೆ ಒಳಗಾಗಿರುವಷ್ಟು ಆಳವಾದ ಪರಿಣಾಮವಾಗಿದೆ, ಸಂತ್ರಸ್ತೆಯು ‘ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್’ ಧರಿಸಿದ್ದಳು. ಸಧ್ಯಕ್ಕೆ ಬ್ರಿಟನ್‌ನಲ್ಲಿ ‘ವರ್ಚುವಲ್’ ಬಲಾತ್ಕಾರದ ಬಗ್ಗೆ ಯಾವುದೇ ಕಾನೂನು ಇಲ್ಲದಿರುವುದರಿಂದ ಈ ಪ್ರಕರಣದ ತನಿಖೆ ನಡೆಸುವುದು ಕಠಿಣವಾಗಲಿದೆ.

ಫೇಸ್‌ಬುಕ್‌ನ ಮೂಲ ಕಂಪನಿ ‘ಮೆಟಾ’ 2021 ರಲ್ಲಿ ‘ಹೊರೈಝನ್ ವರ್ಲ್ಡ್ಸ್’ ಹೆಸರಿನ ‘ವರ್ಚುವಲ್ ರಿಯಾಲಿಟಿ ಗೇಮ್’ ಅನ್ನು ನಿರ್ಮಿಸಿತ್ತು. ಇದರಲ್ಲಿ ಬಳಕೆದಾರರು ಬಿಂಬ ಶರೀರವನ್ನು ನಿರ್ಮಾಣ ಮಾಡಬಹುದಾಗಿದೆ. ಈ ಆಟವನ್ನು ಆಡುವಾಗ ಇತರರ ಬಿಂಬಾತ್ಮಕ ಶರೀರವನ್ನೂ ನೋಡಬಹುದಾಗಿದೆ. `ಹೊರೈಝನ್ ವರ್ಲ್ಡ್ಸ’ ನಲ್ಲಿ ವರ್ಚುವಲ್ ಮಟ್ಟದಲ್ಲಿ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳು ಇಲ್ಲಿಯವರೆಗೆ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ‘ಮೆಟಾ’ದ ವಕ್ತಾರರು ಮಾತನಾಡಿ, ನಮ್ಮ ವೇದಿಕೆಯಲ್ಲಿ ಇಂತಹ ಅಪರಾಧಗಳಿಗೆ ಸ್ಥಾನವಿಲ್ಲ. ಇದನ್ನು ತಪ್ಪಿಸಲು, ನಾವು ನಮ್ಮ ಬಳಕೆದಾರರಿಗೆ ವೈಯಕ್ತಿಕ ಇತಿಮಿತಿಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು. ಇದು ಅಪರಿಚಿತ ವ್ಯಕ್ತಿಗಳಿಗೆ ಬಳಕೆದಾರರ ವರ್ಚುವಲ್ ಶರೀರದಿಂದ ಕೆಲವು ಅಡಿ ದೂರದಲ್ಲಿರಿಸುತ್ತದೆ.

ಅಂತಹ ಜನರು ವಾಸ್ತವಿಕ ಜಗತ್ತಿನಲ್ಲಿ ಹೆಚ್ಚು ಅಪಾಯಕಾರಿಯಾಗಿರುತ್ತಾರೆ ! – ಬ್ರಿಟನ್ನಿನ ಗೃಹ ಸಚಿವ

ಬ್ರಿಟನ್ನಿನ ಗೃಹಸಚಿವ ಜೇಮ್ಸ ಕ್ಲೆಹ್ವರ್ಲಿಯವರು ಮಾತನಾಡುತ್ತಾ, ಇಂದಿನ ಯುವ ಪೀಳಿಗೆಯು ದೊಡ್ಡ ಪ್ರಮಾಣದಲ್ಲಿ ಇದರಲ್ಲಿ ಮುಳುಗಿದ್ದಾರೆ. ಆದುದರಿಂದ ಇಂತಹ ವಿಷಯಗಳು ಅವರ ಮನಸ್ಸಿನ ಮೇಲೆ ಭಯಾನಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಇದು ಬಹಳ ಗಂಭೀರವಾದ ವಿಷಯವಾಗಿದೆ. ಇಂತಹ ಘಟನೆಗಳಿಂದ ಯಾವ ಜನರು ‘ವರ್ಚುವಲ್ ರಿಯಾಲಿಟಿ’ಯಲ್ಲಿ ಹುಡುಗಿಯೊಂದಿಗೆ ಹೀಗೆ ಮಾಡಬಲ್ಲರೋ, ಅವರು ವಾಸ್ತವಿಕ ಜಗತ್ತಿನಲ್ಲಿ ಹೆಚ್ಚು ಅಪಾಯಕಾರಿಯಾಗಿರಬಹುದು ಎಂದು ಕಂಡು ಬರುತ್ತದೆ.

‘ಮೆಟಾವರ್ಸ್’ ಎಂದರೇನು ?

ಮೆಟಾವರ್ಸ್ ಒಂದು ನೈಜವೆಂದು ಭಾಸಗೊಳಿಸುವ ಜಗತ್ತು ಆಗಿದೆ. ಅಲ್ಲಿ ಯಾರು ಬೇಕಾದರೂ ಭಾಸವಾಗುವಂತೆ ಪ್ರವೇಶಿಸಬಹುದು. ಇದರಲ್ಲಿ ಅವನು ಆ ಸ್ಥಳದಲ್ಲಿ ಶಾರೀರಿಕವಾಗಿ ಉಪಸ್ಥಿತನಾಗಿರುವಂತಹ ಭಾವನೆ ಇರುತ್ತದೆ. ಇದರಲ್ಲಿ ಸ್ವತಃ ತನ್ನ ಭಾಸವಾಗುವ ಶರೀರವನ್ನು ನಿರ್ಮಾಣ ಮಾಡಬಹುದಾಗಿದೆ. ಈ ಮೂಲಕ, ಅಂತಹ ದೇಹವನ್ನು ನಿರ್ಮಾಣ ಮಾಡುವವರು ತಿರುಗಾಡಬಹುದು, ಖರೀದಿ ಮಾಡಬಹುದು, ಇತರ ಜನರನ್ನು ಭೇಟಿಯಾಗಬಹುದು. ಆಸ್ತಿ ಖರೀದಿಸಬಹುದು ಮತ್ತು ವಾಸ್ತವಿಕ ಜಗತ್ತಿನಲ್ಲಿ ಏನನ್ನು ಮಾಡುತ್ತಾರೆಯೋ ಅದೆಲ್ಲವನ್ನೂ ಮಾಡಬಹುದು. ಇಲ್ಲಿ ‘ಕ್ರಿಪ್ಟೋ’ ಅನ್ನು ಹಣವೆಂದು ಬಳಸಲಾಗುತ್ತದೆ. ‘ಮೆಟಾವರ್ಸ್’ ಅನ್ನು ಅನುಭವಿಸಲು, ಬಳಕೆದಾರರು ‘ವಿ.ಆರ್. ಹೆಡ್ ಸೆಟ’ ಮತ್ತು ‘ವಿ.ಆರ್. ಕಂಟ್ರೋಲರ’ ಗಳಂತಹ ಭಾಸವಾಗುವ ವಾಸ್ತವಿಕತೆಯ ಉಪಕರಣಗಳ ಆವಶ್ಯಕತೆಯಿರುತ್ತದೆ.

1993 ರಲ್ಲಿ ಮೊದಲ ಬಾರಿಗೆ ಭಾಸವಾಗುವ ಬಲಾತ್ಕಾರವಾಗಿತ್ತು !

ಭಾಸವಾಗುವ ಬಲಾತ್ಕಾರದ ಮೊದಲ ಘಟನೆ 1993 ರಲ್ಲಿ ಬಹಿರಂಗವಾಗಿತ್ತು. ತದನಂತರ 2022 ರಲ್ಲಿ, ಫೇಸಬುಕ್ ನ `ಮೆಟಾವ್ಹರ್ಸ’ನಲ್ಲಿ ಪ್ರವೇಶಿಸಿದ ಒಂದು ಗಂಟೆಯೊಳಗೆ ಒಬ್ಬ ಮಹಿಳಾ ಸಂಶೋಧಕಿಯ ಮೇಲೆ ಅಲ್ಲಿ ಉಪಸ್ಥಿತವಿರುವ ಬೇರೊಂದು ರೂಪದಲ್ಲಿ ಬಲಾತ್ಕಾರ ಮಾಡಿದ್ದನು. ಆ ಮಹಿಳಾ ಸಂಶೋಧಕಿಯು, ಬಲಾತ್ಕಾರವು ಭಾಸವಾಗುವ ಜಗತ್ತಿನಲ್ಲಿ ನಡೆದಿತ್ತು. ಆದಾಗ್ಯೂ ಅವಳಿಗೆ ಅವಳ ಮೇಲೆಯೇ ಬಲಾತ್ಕಾವಾದಂತೆ ಅನಿಸುತ್ತಿತ್ತು ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ವಿಜ್ಞಾನ ಎಷ್ಟೇ ಹೊಸಹೊಸ ಸಂಶೋಧನೆಗಳನ್ನು ಕಂಡು ಹಿಡಿದರೂ, ಮನುಷ್ಯನ ಮಾನಸಿಕತೆ ವಿಕೃತವಾಗಿದ್ದರೆ, ಅಂತಹ ಸಂಶೋಧನೆಗಳ ಉಪಯೋಗ ಅಯೋಗ್ಯ ವಿಷಯಗಳಿಗೆ ಉಪಯೋಗಿಸಲ್ಪಡುತ್ತದೆಯೆನ್ನುವುದು, ಮತ್ತೊಮ್ಮೆ ಗಮನಕ್ಕೆ ಬರುತ್ತದೆ !