ಇಸ್ರೇಲ್ ಗಾಗಿ ಬೆಹುಗಾರಿಕೆ ಮಾಡಿರುವ ಆರೋಪದಡಿಯಲ್ಲಿ ಟರ್ಕಿ ೩೩ ಶಂಕಿತರು ವಶಕ್ಕೆ !

ಇಸ್ತಂಬುಲ್ – ಹಮಾಸ ಮತ್ತು ಇಸ್ರೇಲ್ ಇವರಲ್ಲಿ ೨ ತಿಂಗಳಿಗಿಂತಲೂ ಹೆಚ್ಚು ಕಾಲ ಯುದ್ಧ ನಡೆಯುತ್ತಿದೆ. ಈ ಯುದ್ಧದ ಹಿನ್ನೆಲೆಯಲ್ಲಿ ಇರಾನ್, ಲೇಬನಾನ್. ಮತ್ತು ಟರ್ಕಿ ಇದರ ಜೊತೆಗೆ ಅನೇಕ ಇಸ್ಲಾಮಿ ದೇಶಗಳು ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮೀನ್ ನೆತಾನ್ಯಾಹು ಇವರ ವಿರುದ್ಧ ಬಹಿರಂಗ ಹೋರಾಟ ನಡೆಸುತ್ತಿದ್ದಾರೆ. ಇಸ್ರೇಲ್ ಅವರ ಜನರನ್ನು ಟರ್ಕಿಗೆ ಕಳುಹಿಸಿ ಅಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಟರ್ಕಿ ಆರೋಪಿಸಿದೆ. ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುವ ಆರೋಪದಡಿಯಲ್ಲಿ ಟರ್ಕಿ ಅಧಿಕಾರಿಗಳು ೩೩ ಶಂಕಿತರನ್ನು ವಶಕ್ಕೆ ಪಡೆದಿದೆ ಹಾಗೂ ಇತರ ೧೩ ಜನರನ್ನು ಹುಡುಕುತ್ತೇವೆ. ಇಸ್ರೇಲಿನ ಗೂಢಚಾರ ಸಂಸ್ಥೆ ಮೊಸಾದಶಿಯ ಜೊತೆ ಈ ಜನರ ಸಂಬಂಧ ಇರುವುದಾಗಿ ಟರ್ಕಿ ಅಧಿಕಾರಿಗಳು ದಾವೆ ಮಾಡಿದ್ದಾರೆ.

೧. ಕೆಲವು ದಿನಗಳ ಹಿಂದೆ ಇಸ್ರೇಲ್ ಗೂಢಚಾರ ಸಂಸ್ಥೆಯ ಮುಖ್ಯಸ್ಥ ಶಿನ್ ಬೆಟ್ ಇವರು, ಅವರ ಸಂಸ್ಥೆ ಲೆಬೆನಾನ್, ಟರ್ಕಿ ಮತ್ತು ಕತಾರ್ ಇದರ ಜೊತೆಗೆ ಇತರ ಎಲ್ಲೆ ಕಾರ್ಯನಿರತ ಇರುವ ಹಮಾಸ್ ನಾಶ ಮಾಡಲು ಸಿದ್ಧವಿದೆ ಎಂದು ಹೇಳಿದ್ದರು.

೨. ಇದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಟರ್ಕಿ ರಾಷ್ಟ್ರಾಧ್ಯಕ್ಷ ರೆಸೆಪ್ ತಯ್ಯಪ್ ಎರ್ದೋಗನ್ ಇವರು ಇಸ್ರೇಲಿಗೆ, ಟರ್ಕಿಯ ಭೂಮಿಯಲ್ಲಿ ಏನಾದರೂ ಹಮಾಸ್ ಸದಸ್ಯರ ಮೇಲೆ ದಾಳಿ ಮಾಡಿದರೆ, ಅದರ ಗಂಭೀರ ಪರಿಣಾಮ ಇಸ್ರೇಲ್ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.