China Spy Ship : ಚೀನಾದ ಗೂಢಚಾರಿಕೆ ನೌಕೆ ತನ್ನ ಬಂದರಿಗೆ ಬರದಂತೆ ಒಂದು ವರ್ಷ ನಿಷೇಧ !

  • ಭಾರತದ ಒತ್ತಡಕ್ಕೆ ಮಣಿದ ಶ್ರೀಲಂಕಾ !

  • ಶ್ರೀಲಂಕಾದ ಮಹತ್ವದ ನಿರ್ಧಾರ!

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾವು ಚೀನಾದ ಸಂಶೋಧನೆಯ ನೌಕೆಯನ್ನು ತನ್ನ ಬಂದರುಗಳಿಗೆ ಬರದಂತೆ ೧ ವರ್ಷಗಳ ಕಾಲ ನಿಷೇಧಿಸಿದೆ. ಚೀನಾ ಸಂಶೋಧನೆಯ ಹೆಸರಿನಲ್ಲಿ ತನ್ನ ನೌಕೆಯನ್ನು ಶ್ರೀಲಂಕಾದ ಬಂದರಿನಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿತ್ತು. ಈ ಹಿಂದೆ ಎರೆಡು ಬಾರಿ ಭಾರತದ ಆಕ್ಷೇಪಣೆಯ ಹೊರತಾಗಿಯೂ ಶ್ರೀಲಂಕಾ ತನ್ನ ಬಂದರುಗಳಲ್ಲಿ ಬರಲು ಅನುಮತಿ ನೀಡಿತ್ತು. ಈಗ ಮೂರನೆಯ ಬಾರಿಗೆ ಚೀನಾದ ನೌಕೆ ಜನವರಿ ೫ ರಂದು ಶ್ರೀಲಂಕಾದ ಬಂದರಿಗೆ ಬರುವುದಿತ್ತು; ಆದರೆ ಅದಕ್ಕೂ ಮುನ್ನ ಶ್ರೀಲಂಕಾ ಅದನ್ನು ತಿರಸ್ಕರಿಸಿ ಮುಂದಿನ ವರ್ಷವಿಡೀ ನಿಷೇಧ ಹೇರಿದೆ. ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಶ್ರೀಲಂಕಾದ ಅಧ್ಯಕ್ಷ ರಾನಿಲ ವಿಕ್ರಮ ಸಿಂಘೆ ಅವರನ್ನು ಭೇಟಿಮಾಡಿದ್ದರು. ಆಗ ಪ್ರಧಾನಿ ಮೋದಿ ಅವರ ಜೊತೆ ಈ ಸಂದರ್ಭದ ಸೂತ್ರವನ್ನು ಮಂಡಿಸಿದ್ದರು.

ಚೀನಾ ಮಾಲ್ಡಿವ್ ಬಳಿ ಬೇಡಿಕೆ !

ಚೀನಾ ಹಿಂದೂ ಮಹಾಸಾಗರದ ಮಾಲ್ಡಿವ್ ದ್ವೀಪದ ಬಳಿ ತನ್ನ ನೌಕೆಯನ್ನು ನಿಲ್ಲಿಸಲು ಅನುಮತಿ ಕೇಳಿದೆ. ಶ್ರೀಲಂಕ ನಿರಾಕರಿಸಿದ್ದರೂ ಮಾಲ್ಡಿವ್ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೆಲವು ತಿಂಗಳ ಹಿಂದೆಯಷ್ಟೆ ಮಾಲ್ಡಿವ್ ನಲ್ಲಿ ಚೀನಾಗೆ ಬೆಂಬಲಿಸುವ ರಾಷ್ಟ್ರಪತಿ ಮಹಮ್ಮದ ಮೊಯಿಜ್ಜು ಇವರ ಸರಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ‘ಚೀನಾಗೆ ನೌಕೆಯನ್ನು ದ್ವೀಪದ ಬಳಿ ನಿಲ್ಲಿಸಲು ಅನುಮತಿ ಸಿಗಬಹುದು’, ಎಂದು ಹೇಳಲಾಗುತ್ತಿದೆ.