‘ಇಸ್ರೋ‘ನಿಂದ ಬ್ಲಾಕ್ ಹೋಲ್ ನ ಸಂಶೋಧನಾ ಉಪಗ್ರಹ ಯಶಸ್ವಿಯಾಗಿ ಉಡಾವಣೆ !

ಶ್ರೀಹರಿಕೋಟಾ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ ೧ ರಂದು ಬೆಳಗ್ಗೆ ೯-೩೦ ಕ್ಕೆ ‘ಎಕ್ಸಪೋಸ್ಯಾಟ್‘ ಎಂಬ ಹೆಸರಿನ ಬಾಹ್ಯಾಕಾಶ ದೂರದರ್ಶಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು. ಭೂಮಿಯಿಂದ ಅಂದಾಜು ೬೫೦ ಕಿಲೊಮೀಟರ್ ಎತ್ತರದಲ್ಲಿ ೪೬೯ ಕೆ.ಜಿ. ತೂಕದ ದೂರದರ್ಶಕವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ದೂರದರ್ಶಕದಲ್ಲಿ ೨ ಉಪಕರಣಗಳನ್ನು ಅಳವಡಿಸಲಾಗಿದ್ದು, ಅವುಗಳ ಮೂಲಕ ಬಾಹ್ಯಾಕಾಶದಲ್ಲಿನ ಎಕ್ಸರೇ ಮೂಲಗಳನ್ನು ಅಧ್ಯಯನ ಮಾಡಲಾಗುವುದು. ಇದರಿಂದ ಬ್ಲಾಕ್ ಹೋಲ್ ಮತ್ತು ನ್ಯೂಟ್ರಾನ್ ನಕ್ಷತ್ರಗಳ ಆಳವಾದ ಅವಲೋಕನಗಳಿಗೆ ಕಾರಣವಾಗುತ್ತದೆ. ಇದರಿಂದ ಅದರ ಬಗ್ಗೆ ಹೊಸ ಮಾಹಿತಿಯನ್ನು ಪಡೆಯಲು ಸಹಾಯವಾಗುತ್ತದೆ. ಈ ನಿಮಿತ್ತದಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಬಾಹ್ಯಾಕಾಶ ಸಂಶೋಧನೆಯು ಉತ್ತಮ ಮಾಹಿತಿಯನ್ನು ಪಡೆಯಲು ಸಹಾಯವಾಗಲಿದೆ.

ಈ ಅಭಿಯಾನದ ಜೀವಿತಾವಧಿಯು ೫ ವರ್ಷಗಳು ಎಂದು ಅಂದಾಜಿಸಲಾಗಿದೆ. ಇದು ಭಾರತದ ಮೊದಲ ‘ಪೋಲಾರಿಮೀಟರ್’ ಮಿಷನ್ ಆಗಿದೆ. ಹಾಗಾಗಿ ಬ್ಲಾಕ್ ಹೋಲ್ ನ ನಿಗೂಢ ವಿಷಯಗಳನ್ನು ಅಧ್ಯಯನ ಮಾಡಲು ಇದು ಸಹಾಯ ಮಾಡುತ್ತದೆ. ‘ಇಸ್ರೋ’ ಹೊರತಾಗಿ ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ‘ ಡಿಸೆಂಬರ್ ೨೦೨೧ ರಲ್ಲಿ ‘ಸೂಪರನೋವಾ‘ ಸ್ಪೋಟದ ಅವಶೇಷಗಳು, ಬ್ಲಾಕ್ ಹೋಲ್ ಗಳಿಂದ ಹೊರಸೂಸುವ ಕಣಗಳ ಪ್ರವಾಹ ಮತ್ತು ಇತರ ಖಗೋಳ ವಿದ್ಯಮಾನಗಳ ಕುರಿತು ಇದೇ ರೀತಿಯ ಅಧ್ಯಯನವನ್ನು ನಡೆಸಿತ್ತು.

(ಸೌಜನ್ಯ : Hindustan Times)