ಜನವರಿ ೨೨ ರಂದು ಮಸೀದಿ, ದರ್ಗಾಗಳು ಮತ್ತು ಮದರಸಾಗಳಲ್ಲಿ ೧೧ ಬಾರಿ ಶ್ರೀ ರಾಮನ ಜಪ ಮಾಡಬೇಕು ! – ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕ ಇಂದ್ರೇಶ ಕುಮಾರ

ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕ ಇಂದ್ರೇಶ ಕುಮಾರ ಇವರಿಂದ ಮನವಿ !

ಇಂದ್ರೇಶ ಕುಮಾರ

ನವ ದೆಹಲಿ – ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯ ಇಂದ್ರೇಶ ಕುಮಾರ ಇವರು ಜನವರಿ ೨೨ ರಂದು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಮುಸಲ್ಮಾನರು ಮಸೀದಿ, ದರ್ಗಾ ಮತ್ತು ಮದರಸಾಗಳಲ್ಲಿ ೧೧ ಸಲ ‘ಶ್ರೀರಾಮ ಜೈ ರಾಮ ಜಯ ಜಯ ರಾಮ’ ಈ ಜಪ ಮಾಡಲು ಕರೆ ನೀಡಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ರಾಮ ಮಂದಿರ, ರಾಷ್ಟ್ರ ಮಂದಿರ : ಏಕ ಸಾಝಾ ವಿರಾಸತ (ರಾಮ ಮಂದಿರ, ರಾಷ್ಟ್ರ ಮಂದಿರ : ಒಂದು ಸಂಯುಕ್ತ ಪರಂಪರೆ) ಈ ಪುಸ್ತಕದ ಪ್ರಕಾಶನದ ಸಮಯದಲ್ಲಿ ಮಾತನಾಡುತ್ತಿದ್ದರು.

ಇಂದ್ರೇಶ ಕುಮಾರ ಇವರು ಮಾತನ್ನು ಮುಂದುವರೆಸುತ್ತಾ, ದೇಶದಲ್ಲಿನ ಶೇ ೯೯ ರಷ್ಟು ಮುಸಲ್ಮಾನರು ಮತ್ತು ಅಹಿಂದೂಗಳು ದೇಶದೊಂದಿಗೆ ಸಂಬಂಧವಿದೆ. ನಮ್ಮ ಪೂರ್ವಜರು ಒಂದೇ ಆಗಿದ್ದರು. ಈ ಜನರು ಕೇವಲ ಧರ್ಮ ಬದಲಾಯಿಸಿದ್ದಾರೆ, ದೇಶವಲ್ಲ. ನಮ್ಮ ಗುರುತು ಒಂದೇ ಆಗಿದೆ. ವಿದೇಶಿ ಜನರ ಜೊತೆಗೆ ನಮ್ಮದು ಯಾವುದೇ ಸಂಬಂಧವಿಲ್ಲ. ನಾನು ಗುರುದ್ವಾರ, ಚರ್ಚ್ ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ಕರೆ ನೀಡುತ್ತೇನೆ, ಅವರು ಜನವರಿ ೨೨ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆ ಈ ಸಮಯದಲ್ಲಿ ಶ್ರೀ ರಾಮಜನ್ಮಭೂಮಿಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆ ದೂರದರ್ಶನದಲ್ಲಿ ಸಾಮೂಹಿಕವಾಗಿ ವೀಕ್ಷಿಸಿ ಮತ್ತು ಭಾರತ ಹಾಗೂ ವಿಶ್ವಶಾಂತಿಗಾಗಿ, ಸಹೋದರತ್ವಕ್ಕಾಗಿ ಪ್ರಾರ್ಥನೆ ಮಾಡಿ. ಇದಕ್ಕಾಗಿ ಈ ಪ್ರಾರ್ಥನಾ ಸ್ಥಳಗಳು ಅಲಂಕರಿಸಬೇಕು ಎಂದು ಹೇಳಿದರು.

ಮುಂದಿನ ಪೀಳಿಗೆ ಚಾರಿತ್ರ ಸಂಪನ್ನರಾಗಿ ನಿರ್ಮಾಣ ಮಾಡುವುದಕ್ಕಾಗಿ ಮರ್ಯಾದಾ ಪುರುಷೋತ್ತಮ ರಾಮನ ಆವಶ್ಯಕತೆ ಇದೆ ! – ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್

ಈ ಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಇವರು ಕೂಡ ಉಪಸ್ಥಿತರಿದ್ದರು. ಅವರು, ನಮಗೆ ಮರ್ಯಾದಾ ಪುರುಷೋತ್ತಮ ರಾಮನ ಅವಶ್ಯಕತೆ ಇದೆ, ಇದರಿಂದ ಮುಂಬರುವ ಪೀಳಿಗೆ ಚಾರಿತ್ರ ಸಂಪನ್ನವಾಗಿ ನಿರ್ಮಾಣವಾಗಬಹುದು. ನನ್ನ ಜನನ ಯಾರ ಮನೆಯಲ್ಲಿ ಆಗಿದೆ, ಇದಕ್ಕೆ ಮಹತ್ವ ಇಲ್ಲ, ನಾನು ಏನು ಮಾಡುತ್ತಿದ್ದೇನೆ ಇದು ಮಹತ್ವದ್ದಾಗಿದೆ ಎಂದು ಹೇಳಿದರು.

‘ಮುಸಲ್ಮಾನರು ಮಸೀದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಂತೆ ! – ಅಸದ್ದುದ್ದೀನ್ ಓವೈಸಿ

ಅಸದ್ದುದ್ದೀನ್ ಓವೈಸಿ

ಎಂ.ಐ.ಎಂ. ನ ಅಧ್ಯಕ್ಷ ಮತ್ತು ಸಾಂಸದ ಅಸದ್ದುದ್ದೀನ್ ಓವೈಸಿ ಇವರು ಇಂದ್ರೇಶ ಕುಮಾರ ಇವರ ಕರೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಮುಸಲ್ಮಾನರಿಗೆ ಮಸೀದಿಗಳನ್ನು ಸುರಕ್ಷಿತ ಇಡಲು ಕರೆ ನೀಡಿದ್ದಾರೆ. ‘ಮುಸಲ್ಮಾನರ ಮಸೀದಿ, ಮದರಸಾಗಳು ಮುಂತಾದ ಸ್ಥಳಗಳು ನಾಳೆ ಯಾರಾದರೂ ವಶಕ್ಕೆ ಪಡೆಯಬಹುದು’, ಈ ರೀತಿಯ ಹೇಳಿಕೆ ಕೂಡ ಇವರು ಹೇಳಿಕೆ ನೀಡಿದ್ದಾರೆ.

ಸಂಪಾದಕರ ನಿಲುವು

ಶ್ರೀರಾಮಮಂದಿರಕ್ಕಾಗಿ ಕೇವಲ ೧೧ ಸಲ ಶ್ರೀ ರಾಮನ ಜಪ ಮಾಡಲು ಕರೆ ನೀಡಿದ ನಂತರ ಓವೈಸಿ ಇವರಿಗೆ ಕಸಿವಿಸಿ; ಆದರೆ ಯಾವಾಗ ಹಿಂದುಗಳ ದೇವಸ್ಥಾನದಲ್ಲಿ ಸರ್ವಧರ್ಮ ಸಮಭಾವದ ಹೆಸರಿನಲ್ಲಿ ಇಫ್ತಾರ್ ಭೋಜನಕೂಟ ಆಯೋಜಿಸುತ್ತಾರೆ, ದೇವಸ್ಥಾನ ಪರಿಸರದಲ್ಲಿ ನಮಾಜ ಪಠಣೆಗೆ ಅನುಮತಿ ನೀಡುತ್ತಾರೆ, ಆಗ ಓವೈಸಿ ಮೌನವಾಗಿ ಇರುತ್ತಾರೆ, ಇದನ್ನು ತಿಳಿದುಕೊಳ್ಳಿ !