ಪ್ರಧಾನಮಂತ್ರಿ ಮೋದಿ ಇವರು ರಾಜಕೀಯ ಒತ್ತಡ ಹೇರಿ ಇಸ್ರೈಲ್- ಹಮಾಸ್ ಯುದ್ಧ ನಿಲ್ಲಿಸಬೇಕು ! – ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ

ದೆಹಲಿಯಲ್ಲಿನ ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಇವರ ಬೇಡಿಕೆ !

ಪ್ಯಾಲೆಸ್ಟೈನ್ ಸಮಸ್ಯೆ ಪರಿಹರಿಸುವುದಕ್ಕಾಗಿ ಇಸ್ಲಾಮಿ ದೇಶಗಳು ತಮ್ಮ ಜವಾಬ್ದಾರಿ ವಹಿಸಲಿಲ್ಲ ಎಂದು ಟಿಕೆ !

ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ

ನವ ದೆಹಲಿ – ಪ್ರಧಾನಮಂತ್ರಿ ಮೋದಿ ಇವರು ರಾಜಕೀಯ ಒತ್ತಡ ಹೇರಿ ಇಸ್ರೈಲ್-ಹಮಾಸ್ ಯುದ್ಧ ನಿಲ್ಲಿಸಬೇಕು ಎಂದು ದೆಹಲಿಯಲ್ಲಿನ ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಇವರು ಆಗ್ರಿಸಿದರು. ಇದರೊಂದಿಗೆ ಈ ಯುದ್ಧದ ಕುರಿತು ಇಸ್ಲಾಮಿ ದೇಶಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ ಎಂದೂ ಸಹ ಟೀಕಿಸಿದರು. ಭಾರತವು ಈ ಹಿಂದೆ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಇಸ್ರೈಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧ ನಿಲ್ಲಿಸುವುದಕ್ಕಾಗಿ ಎಲ್ಲ ಒತ್ತೆಯಾಳುಗಳನ್ನು ಷರತ್ತು ರಹಿತ ಬಿಡುಗಡೆಗೊಳಿಸುವ ಪ್ರಸ್ತಾವದ ಪರ ಮತ ನೀಡಿತ್ತು.

ಶಾಹಿ ಇಮಾಮ ಬುಖಾರಿ ಮಾತು ಮುಂದುವರಿಸುತ್ತಾ, ಪ್ಯಾಲೆಸ್ಟೈನ್ ಸೂತ್ರ ಈಗ ಒಂದು ಹಂತಕ್ಕೆ ತಲುಪಿದೆ. ವಿಶ್ವಸಂಸ್ಥೆ, ಅರಬ ಲಿಗ ಮತ್ತು ಗಲ್ಫ್ ಸಹಯೋಗ ಪರಿಷತ್ ಇವರ ಪ್ರಸ್ತಾವದ ಅಂತರ್ಗತ ಇದರ ಕುರಿತು ಪರಿಹಾರ ಹುಡುಕಬೇಕು. ಕೊನೆಯ ಆಸೆ ಎಂದರೆ ಭಾರತದ ಪ್ರಧಾನ ಮಂತ್ರಿ ಮೋದಿಯವರು ಇಸ್ರೈಲ್ ನ ಪ್ರಧಾನಮಂತ್ರಿಯೊಂದಿಗೆ ಇರುವ ವೈಯಕ್ತಿಕ ಸಂಬಂಧದ ಆಧಾರದಲ್ಲಿ ಯುದ್ಧ ನಿಲ್ಲಿಸಬೇಕು ಮತ್ತು ಪ್ಯಾಲೆಸ್ಟೈನ್ ಸಮಸ್ಯೆ ಪರಿಹರಿಸಲು ರಾಜಕೀಯ ಒತ್ತಡ ಹೇರಬೇಕು ಎಂದು ಹೇಳಿದರು.

ಸಂಪಾದಕರ ನಿಲುವು

* ಇಸ್ಲಾಮಿ ದೇಶಗಳು ತಮ್ಮ ಜವಾಬ್ದಾರಿ ನಿರ್ವಹಿಸಲಿಲ್ಲ; ಆದರೆ ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನು ನಡೆಯದೆ ಇದ್ದರೂ ಭಾರತಕ್ಕೆ ಹೆದರಿಸುವ ಪ್ರಯತ್ನ ಮಾಡುತ್ತವೆ !

* ಹಮಾಸ್ ಮತ್ತು ಇಸ್ರಾಯಿಲ್ ಇವಾರಲ್ಲಿನ ಯುದ್ಧ ಹಮಾಸ್ ದಿಂದ ಆರಂಭವಾಗಿದೆ. ಆದ್ದರಿಂದ ‘ಹಮಾಸ್ ಸ್ವತಃ ಅದನ್ನು ನಿಲ್ಲಿಸಬೇಕು ಮತ್ತು ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಗೊಳಿಸಬೇಕು’, ಎಂದು ಬುಖಾರಿ ಹಮಾಸ್ ಗೆ ಏಕೆ ಹೇಳುತ್ತಿಲ್ಲ ?