ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಿಯ ಪುರಾತನ ಆಭರಣಗಳು ನಾಪತ್ತೆಯಾಗಿರುವ ಸಾಧ್ಯತೆ ದಟ್ಟವಾಗಿದೆ !
ಪಂಢರಪುರ, ಡಿಸೆಂಬರ್ 30 (ಸುದ್ದಿ.) – 1985 ರಲ್ಲಿ ಪಂಢರಪುರದ ಶ್ರೀ ವಿಠ್ಠಲ್-ರುಕ್ಮಿಣಿ ದೇವಸ್ಥಾನದ ಸರಕಾರಿಕರಣದ ಮಾಡುವಾಗ, ಆಗಿನ ಅರ್ಚಕರಾದ ಬಡವೆ ಮತ್ತು ಉತ್ಪಾತ್ ಅವರು ದೇವತೆಗಳ ಎಲ್ಲಾ ಆಭರಣಗಳು ಮತ್ತು ಅವರ ಬಾಕಿ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದರು; ಆದರೆ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ ಸಮಿತಿ ಕಳೆದ 38 ವರ್ಷಗಳಿಂದ ಈ ಮಾಹಿತಿಯನ್ನು ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
1985 ರಿಂದ 2009 ರವರೆಗೆ 23 ವರ್ಷಗಳಲ್ಲಿ ಆಡಿಟ್ ವರದಿಗಳನ್ನು ಸಲ್ಲಿಸಲೇ ಇಲ್ಲ !
ಸರಕಾರಿಕರಣವಾದ ನಂತರ ಶ್ರೀ ವಿಠ್ಠಲ್-ರುಕ್ಮಿಣಿ ಮಂದಿರ ಸಮಿತಿಯು 1985 ರಿಂದ 2009 ರವರೆಗೆ 23 ವರ್ಷಗಳ ಕಾಲ ಆಡಿಟ್ ವರದಿಯನ್ನು ಸರಕಾರಕ್ಕೆ ಸಲ್ಲಿಸಲೇ ಇಲ್ಲ. ಪಂಢರಪುರದ ಶ್ರೀ. ಭಿಮಾಚಾರ್ಯ ವರಖೆಡಕರ ಇವರು ಮಾಹಿತಿ ಹಕ್ಕು ಅಡಿಯಲ್ಲಿ ಪಡೆದ ಮಾಹಿತಿಯ ಮೂಲಕ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗವಾಗಿದೆ.
ಕಾಲಕಾಲಕ್ಕೆ ಸೂಚನೆ ನೀಡಿದರೂ ದೇವಸ್ಥಾನ ಸಮಿತಿಯಿಂದ ಆಭರಣಗಳ ಲೆಕ್ಕ ಪರಿಶೋಧನೆ ಆಗಿಲ್ಲ !
2021-22 ನೇ ಸಾಲಿನ ಸರಕಾರದ ಹಣಕಾಸು ಲೆಕ್ಕ ಪರಿಶೋಧನಾ ವರದಿಯನ್ನು ನಾಗ್ಪುರದಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಯಿತು. ಇದರಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ ದೇವಿಯ ಪುರಾತನ ಮತ್ತು ಬೆಲೆಬಾಳುವ ಆಭರಣಗಳನ್ನು ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 2017ನೇ ಸಾಲಿನಿಂದ ಸರಕಾರದ ಹಣಕಾಸು ಲೆಕ್ಕ ಪರಿಶೋಧನಾ ವರದಿಗಳನ್ನು ಗಮನಿಸಿದರೆ, ‘ದೇವತೆಗಳ ಪುರಾತನ ಅಮೂಲ್ಯ ಆಭರಣಗಳನ್ನು ಲೆಕ್ಕಪರಿಶೋಧನೆ ಮಾಡುವಂತೆ’ ದೇವಸ್ಥಾನ ಸಮಿತಿಗೆ ಲೆಕ್ಕ ಪರಿಶೋಧಕರು ಸ್ಪಷ್ಟವಾಗಿ ಸೂಚಿಸಿದ್ದಾರೆ; ಆದರೆ ಇನ್ನೂ ದೇವಸ್ಥಾನದ ಸಮಿತಿ ಆಭರಣಗಳ ಮೌಲ್ಯಮಾಪನ ಮಾಡಿಲ್ಲ. ಈ ಎಲ್ಲಾ ವರದಿಗಳು ದೈನಿಕ ‘ಸನಾತನ ಪ್ರಭಾತ’ದಲ್ಲಿ ಲಭ್ಯವಿವೆ.
2015ರಿಂದ 2018ರವರೆಗೆ ‘ಅನುಸರಣೆ ವರದಿ’ ನೀಡಲು ವಿಳಂಬ !
(‘ಅನುಸರಣೆ ವರದಿ’ ಎಂದರೆ ಲೆಕ್ಕ ಪರಿಶೋಧನಾ ವರದಿಯ ಮೇಲೆ ದತ್ತಿ ಆಯುಕ್ತರು ನೀಡಿದ ಸೂಚನೆಗಳು. ಅವುಗಳ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ?, ಸಂಬಂಧಪಟ್ಟ ಸಂಸ್ಥೆಯು ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ.)
ಲೆಕ್ಕ ಪರಿಶೋಧಕರು 2015-16, 2016-17 ಮತ್ತು 2017-18 ನೇ ಸಾಲಿನ ತಮ್ಮ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಭರಣಗಳ ಮೌಲ್ಯಮಾಪನವನ್ನು ಸೂಚಿಸಿದ್ದರು. ಆದರೆ, ಇವುಗಳ ಅನುಪಾಲನಾ ವರದಿಯನ್ನು ದೇವಸ್ಥಾನ ಸಮಿತಿಯವರು ಸಕಾಲದಲ್ಲಿ ಸಲ್ಲಿಸಿಲ್ಲ. 2018-19ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಮೇಲಿನ ಎಲ್ಲಾ ಮೂರು ವರ್ಷಗಳ ಅನುಪಾಲನಾ ವರದಿಯನ್ನು ನೀಡಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಹೀಗಾಗಿ ದೇವಸ್ಥಾನ ಸಮಿತಿ ಕಾರ್ಯವೈಖರಿ ಅನುಮಾನಾಸ್ಪದವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಛತ್ರಪತಿ ಶಿವರಾಯರ ಕಾಲದ ಅಮೂಲ್ಯ ಆಭರಣಗಳ ಸೇರ್ಪಡೆ !
ಛತ್ರಪತಿ ಶಿವಾಜಿ ಮಹಾರಾಜರು, ಪೇಶ್ವೆಗಳು, ನಂತರದ ಸಂಸ್ಥೆಗಳು ಮುಂತಾದವರು ಶ್ರೀ ವಿಠ್ಠಲ್-ರುಕ್ಮಿಣಿ ದೇವಿಗೆ ಬೆಲೆಬಾಳುವ ಆಭರಣಗಳನ್ನು ಅರ್ಪಿಸಿದ್ದಾರೆ. ಇವುಗಳಲ್ಲಿ ಶ್ರೀ ವಿಠ್ಠಲನ ವಜ್ರದ ಕಿರೀಟ, ವಜ್ರದ ಗೆಜ್ಜೆ, ಶ್ರೀ ವಿಠ್ಠಲನ ಚಿನ್ನದ ತುಳಸಿ ಹಾರ, ಚಿನ್ನದ ಸರ ಇತ್ಯಾದಿ ಬೆಲೆಬಾಳುವ ಆಭರಣಗಳು ಸೇರಿವೆ. 2021-22 ನೇ ಸಾಲಿನ ಆರ್ಥಿಕ ವರದಿಯಲ್ಲಿ, ಶ್ರೀ ವಿಠ್ಠಲನ 203, ಶ್ರೀ ರುಕ್ಮಿಣಿ ದೇವಿಯು 111 ಆಭರಣಗಳನ್ನು ಉಲ್ಲೇಖಿಸಲಾಗಿದೆ; ಆದರೆ ಆಭರಣಗಳ ವಿವರ ನೀಡಿಲ್ಲ. ಹಿಂದಿನ ಆಡಿಟ್ ವರದಿಗಳಲ್ಲಿ ಆಭರಣಗಳ ಸಂಖ್ಯೆಯನ್ನು ಸಹ ನೀಡಲಾಗಿಲ್ಲ.
ದೇವಸ್ಥಾನದ ತೋರಿಕೆಯ ಉತ್ತರ ಮತ್ತು ಕೆಲವು ಉತ್ತರಿಸಲಾಗದ ಪ್ರಶ್ನೆಗಳು !
ಈ ಆಭರಣಗಳ ದಾಖಲೆಗಳನ್ನು ದೇವಾಲಯದೊಳಗಿನ ರಿಜಿಸ್ಟರ್‌ನಲ್ಲಿ (‘ರಿಜಿಸ್ಟರ್’) ದಾಖಲಿಸಲಾಗಿದೆ ಎಂದು ದೇವಾಲಯದಿಂದ ತೋರಿಕೆಯ ಉತ್ತರ ನೀಡಲಾಗುತ್ತಿದೆ; ಆದರೆ ಸರಕಾರಿಕರಣಗೊಂಡ ದೇವಾಲಯದ ಆಭರಣಗಳ ವಿವರವನ್ನು ಸರಕಾರಕ್ಕೆ ಏಕೆ ಸಲ್ಲಿಸಿಲ್ಲ? ಅದರ ಮೌಲ್ಯಮಾಪನವನ್ನು ಏಕೆ ಮಾಡಲಿಲ್ಲ ? ಮತ್ತು ಬ್ಯಾಲೆನ್ಸ್ ಶೀಟ್‌ನಲ್ಲಿ ಏಕೆ ಯಾವುದೇ ನಮೂದುಗಳಿಲ್ಲ ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಶ್ರೀ ವಿಠ್ಠಲ-ರುಕ್ಮಿಣಿ ದೇವಿಯ ಎಲ್ಲಾ ಆಭರಣಗಳು ಸುರಕ್ಷಿತ ! – ಬಾಲಾಜಿ ಪುದಲವಾಡ, ವ್ಯವಸ್ಥಾಪಕರು, ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ ಸಮಿತಿ, ಪಂಢರಪುರ
‘ಶ್ರೀ ವಿಠ್ಠಲ-ರುಕ್ಮಿಣಿ ದೇವಿಯ ಎಲ್ಲಾ ಪುರಾತನ ಆಭರಣಗಳು ಸುರಕ್ಷಿತವಾಗಿವೆ. ಅದರಲ್ಲಿನ ಒಂದು ಆಭರಣವೂ ಕಾಣೆಯಾಗಿಲ್ಲ. ‘ಆಭರಣಗಳು ಪುರಾತನವಾದ್ದರಿಂದ ಬೆಲೆ ಕಟ್ಟುವುದು ತುಂಬಾ ಕಷ್ಟ’ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಈ ಮೌಲ್ಯಮಾಪನ ಮಾಡಲು ಅಧಿಕಾರಿ ಬೇಕು ಎಂದು ಸರಕಾರಕ್ಕೆ ಪತ್ರ ನೀಡಿದ್ದೇವೆ. ವರದಿಯಲ್ಲಿ ಲೆಕ್ಕ ಪರಿಶೋಧಕರು ಸೂಚಿಸಿರುವ ತಿದ್ದುಪಡಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಪ್ರಸಾದ ಲಡ್ಡುಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಕಾರಣ ಸಂಬಂಧಿಸಿದ ಉಳಿತಾಯ ಗುಂಪಿನ ಗುತ್ತಿಗೆಯನ್ನು ರದ್ದುಪಡಿಸಲಾಗಿದ್ದು, ಪ್ರಸ್ತುತ ದೇವಸ್ಥಾನ ಸಮಿತಿಯು ಉತ್ತಮ ಗುಣಮಟ್ಟದ ಲಡ್ಡುಗಳನ್ನು ಸಿದ್ಧಪಡಿಸುತ್ತಿದೆ’ ಎಂದು ಶ್ರೀ ವಿಠ್ಠಲ-ರುಕ್ಮಿಣಿ ಮಂದಿರ ಸಮಿತಿ ವ್ಯವಸ್ಥಾಪಕ ಬಾಲಾಜಿ ಪುದಲವಾಡ ಇವರು ದೈನಿಕ ‘ಸನಾತನ ಪ್ರಭಾತ’ನ ಪ್ರತಿನಿಧಿಗೆ ತಿಳಿಸಿದರು.
ಸಂಪಾದಕೀಯ ನಿಲುವುದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಗುಲಗಳ ಪಾವಿತ್ರ್ಯತೆ ಕಾಪಾಡಲು ಭಕ್ತರಲ್ಲಿ ಒಪ್ಪಿಸಬೇಕು ! |