ಆಢಳಿತಾರೂಢ ಪಕ್ಷದ ಪದಾಧಿಕಾರಿಗಳಿಂದ ಬಾಂಗ್ಲಾದೇಶದಲ್ಲಿನ ಹಿಂದೂ ಕುಟುಂಬದ ೮ ಎಕರೆ ಭೂಮಿ ಲೂಟಿ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಅಧಿಕಾರದಲ್ಲಿರುವ ಅವಾಮಿ ಲೀಗ್ ಪಕ್ಷದ ಸಂಬಂಧಿತ ಕಟ್ಟರವಾದಿ ಗುಂಪು ರವೀಂದ್ರನಾಥ ರಾಯ್ ಈ ಹಿಂದೂ ಕುಟುಂಬದ ೮ ಎಕರೆ ಭೂಮಿ ಕಾನೂನ ಬಾಹಿರವಾಗಿ ವಶಕ್ಕೆ ಪಡೆದುಕೊಂಡಿದೆ. ಪೊಲೀಸರ ಬಳಿ ದೂರು ನೀಡಿದ ನಂತರ ಕೂಡ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಘಟನೆ ಹಿತಬಂಧ ಉಪಜೀಲ್ಲೆಯ ಪರೂಲಿಯ ಗ್ರಾಮದಲ್ಲಿ ನಡೆದಿದೆ. ಮತಾಂಧರಿಂದ ಈ ಕುಟುಂಬಕ್ಕೆ ಬೆದರಿಕೆ ನೀಡುವುದರ ಜೊತೆಗೆ ಅವರ ಮೇಲೆ ದಾಳಿ ಮಾಡುವ ಪ್ರಯತ್ನ ಕೂಡ ಮಾಡಲಾಗಿದೆ.

೧. ಇಲ್ಲಿಯ ‘ದ ಡೈಲಿ ಸ್ಟಾರ್’ ವಾರ್ತಾ ಪತ್ರಿಕೆಯಲ್ಲಿ ಪ್ರಸಾರ ಮಾಡಲಾಗಿರುವ ವಾರ್ತೆಯ ಪ್ರಕಾರ ಭೂಮಿಯ ಮೇಲೆ ನಿಯಂತ್ರಣ ಪಡೆಯುವವರಲ್ಲಿ ಅವಾಮಿ ಲೀಗ್ ಪಕ್ಷದ ಮುಖಂಡ ಹಫೀಜುಲ್ ಇಸ್ಲಾಂ, ಅಬುಲ್ ಕಲಾಂ, ಹಜರತ್ ಅಲಿ ಮತ್ತು ರೇದವಾನ್ ಅಹಮದ್ ಇವರ ಸಮಾವೇಶವಿದೆ. ಅಫೀಜುಲ್ ಇವನು ಪತಿಕಪಾರಾ ಪ್ರದೇಶದ ಅಧ್ಯಕ್ಷ ಹಾಗೂ ಅಬುಲ್ ಕಾರ್ಯದರ್ಶಿ ಆಗಿದ್ದಾನೆ.

೨. ಪೋಲಿಸ್ ಅಧಿಕಾರಿ ಶಾಹ ಆಲಂ ಇವರು, ನಮ್ಮ ಬಳಿ ಭೂಮಿಯ ಮೇಲೆ ಕಾನೂನ ಬಾಹಿರ ನಿಯಂತ್ರಣ ಪಡೆದಿರುವ ದೂರು ಬಂದಿದೆ. ಈ ಭೂಮಿಯ ಕುರಿತಾದ ಪ್ರಕರಣ ಇರುವ ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸುವುದಕ್ಕಾಗಿ ಪ್ರತಿಕಾಪರಾ ಯೂನಿಯನ್ ಪರಿಷತ್ತಿನ ಅಧ್ಯಕ್ಷರಿಗೆ ಹೇಳಲಾಗಿದೆ ಎಂದು ಹೇಳಿದರು.

೩. ಪರಿಷತ್ತಿನ ಅಧ್ಯಕ್ಷ ಮಜಿಬುಲ್ ಆಲಂ ಇವರು, ರವೀಂದ್ರ ರಾಯ್ ಇವರ ದೂರಿನ ವಿಚಾರಣೆ ನಡೆಸಿ ಅದು ಸತ್ಯ ಆಗಿದ್ದರೆ ಆರೋಪಿಗಳ ಮೇಲೆ ಕಾನೂನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

* ಬಾಂಗ್ಲಾದೇಶದ ಅಧಿಕಾರದಲ್ಲಿರುವ ಅವಾಮಿ ಲೀಗ್ ಸರಕಾರದ ಪ್ರಧಾನಮಂತ್ರಿ ಶೇಖ ಹಸೀನಾ ಇವರ ಭಾರತದ ಜೊತೆಗೆ ಸಂಬಂಧ ಒಳ್ಳೆಯದಾಗಿದೆ. ಆದರೂ ಕೂಡ ಅವರ ದೇಶದಲ್ಲಿ ಅಧಿಕಾರ ಇರುವ ಅವರ ಪಕ್ಷದ ಪದಾಧಿಕಾರಿಗಳೇ ಹಿಂದುಗಳ ಮೇಲೆ ಅನ್ಯಾಯ ಮಾಡುತ್ತಾರೆ ಇದು ಖೇದಕರವಾಗಿದೆ.