ಭಜರಂಗದಳದ ವಿರೋಧದ ನಂತರ ಮುಖ್ಯೋಪಾಧ್ಯಾಯನಿಯಿಂದ ಕ್ಷಮಾಯಾಚನೆ !
ಮೇರಠ (ಉತ್ತರಪ್ರದೇಶ) – ಇಲ್ಲಿಯ ಕದಮ ಪಬ್ಲಿಕ ಸ್ಕೂಲ ಶಾಲೆಯಲ್ಲಿ ವಿದ್ಯಾರ್ಥಿಯ ಹಣೆಯ ಮೇಲಿನ ತಿಲಕ ಅಳಿಸಿರುವ ಪ್ರಕರಣದಲ್ಲಿ ಭಜರಂಗದಳದಿಂದ ಪ್ರಶ್ನೆ ಕೇಳಲಾದ ನಂತರ ಶಾಲೆಯ ಮುಖ್ಯೋಪಾಧ್ಯಾಯನಿ ಕ್ಷಮೆ ಯಾಚಿಸಿದರು.
ಅ. ಡಿಸೆಂಬರ್ ೨೩ ರಂದು ಕೆಲವು ವಿದ್ಯಾರ್ಥಿಗಳು ಹಣೆಯ ಮೇಲೆ ತಿಲಕ ಇಟ್ಟು ಶಾಲೆಗೆ ಹೋಗಿದ್ದರು. ಆ ಸಮಯದಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರು ಅವರಿಗೆ ತಿಲಕವನ್ನು ಅಳಿಸಲು ಹೇಳಿದರು. ವಿದ್ಯಾರ್ಥಿಗಳು ನಿರಾಕರಿಸಿದ ನಂತರ ಶಿಕ್ಷಕರು ಅವರಿಗೆ ಬೆದರಿಸಿದರು ಮತ್ತು ವಿದ್ಯಾರ್ಥಿಗಳಿಗೆ ತಿಲಕ ಅಳಿಸಲು ಅನಿವಾರ್ಯಗೊಳಿಸಿದರು. ವಿದ್ಯಾರ್ಥಿಗಳು ಮನೆಗೆ ಹೋಗಿ ಪೋಷಕರಿಗೆ ಈ ಘಟನೆಯ ಕುರಿತು ಹೇಳಿದರು. ಅವರು ಬಜರಂಗದಳದ ಪ್ರಾಂತ ವಿದ್ಯಾರ್ಥಿ ಪ್ರಮುಖ ಅಭಿಷೇಕ ಚೌಹಾನ್ ಇವರಿಗೆ ಈ ಮಾಹಿತಿ ನೀಡಿದರು. ಅದರ ನಂತರ ಚೌಹಾಣ್ ಇವರು ಅವರ ಕಾರ್ಯಕರ್ತರ ಜೊತೆಗೆ ಶಾಲೆಗೆ ಹೋಗಿ ಮುಖ್ಯೋಪಾಧ್ಯಾಯಿನಿಗೆ ಮುತ್ತಿಗೆ ಹಾಕಿದರು ಮತ್ತು ಪ್ರಶ್ನೆ ಕೇಳಿದರು. ಆಗ ಮುಖ್ಯೋಪಾಧ್ಯಾಯಿನಿ ಪಾರುಲ್ ಚೌಧರಿ ಇವರು ಕ್ಷಮೆ ಯಾಚಿಸಿದರು.
ಆ. ಇದರ ಕುರಿತು ಶಾಲೆಯ ವ್ಯವಸ್ಥಾಪಕ ಸಂಜೀವ ಚೋಧರಿ ಇವರು, ತಿಲಕ ಅಳಿಸುವಂತ ಯಾವುದೇ ಘಟನೆ ನಡೆದಿಲ್ಲ. ವಿದ್ಯಾರ್ಥಿನಿಯರು ಶಾಲೆಗೆ ಲಿಪ್ಸ್ಟಿಕ್ ಮತ್ತು ಕುಂಕುಮ ತರಲು ನಿಷೇಧಿಸಲಾಗಿದೆ; ಕಾರಣ ಅವರ ಬ್ಯಾಗಿನಲ್ಲಿ ಈ ವಸ್ತುಗಳು ಕಂಡು ಬಂದಿದ್ದವು. ಇದನ್ನು ವಿದ್ಯಾರ್ಥಿನಿಯರು ಮನೆಗೆ ಹೋಗಿ ವಿದ್ಯಾರ್ಥಿಯ ಹಣೆಯ ಮೇಲಿನ ತಿಲಕ ಅಳಿಸಿರುವ ತಪ್ಪಾದ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದೂ ಶಿಕ್ಷಕ ಇರುವ ಶಾಲೆಯಲ್ಲಿ ಈ ರೀತಿಯ ಘಟನೆಗಳು ಘಟಿಸುತ್ತವೆ, ಇದರಿಂದ ಹಿಂದುಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರ ಪರಿಣಾಮವಾಗಿದೆ ಹಾಗೂ ಹಿಂದೂಗಳು ಇತರ ಧರ್ಮದ ತುಲನೆಯಲ್ಲಿ ಜಾತ್ಯತೀತವಾಗಿರುವುದನ್ನು ತೋರಿಸುತ್ತಾರೆ ಮತ್ತು ಹಿಂದೂ ದ್ರೋಹ ಮಾಡುತ್ತಾರೆ, ಇದು ಕೂಡ ಅಷ್ಟೇ ಸತ್ಯವಾಗಿದೆ ! |