ನಂಜನಗೂಡಿನಲ್ಲಿ ‘ದಲಿತ ಸಂಘರ್ಷ ಸಮಿತಿ’ ಕಾರ್ಯಕರ್ತರು ಶಿವ ಮತ್ತು ಪಾರ್ವತಿಯ ಮೂರ್ತಿಗಳಿಗೆ ನೀರು ಎಸೆದರು !

ಅಂಧಕಾಸುರನ ಸಂಹಾರದ ಪ್ರಸಂಗವನ್ನು ವಿರೋಧಿಸಲು ಕೃತ್ಯ ಎಸೆಗಿರುವ ದಾವೆ

ನಂಜನಗೂಡು – ಪ್ರತಿ ವರ್ಷ ಪಾರ್ವತಿ ದೇವಿ ಮತ್ತು ಭಗವಾನ್ ಶಿವ ಅಂಧಕಾಸುರ ರಾಕ್ಷಸನ ಸಂಹಾರಮಾಡಿದನ್ನು ಆಚರಿಸುವುದು ವಾಡಿಕೆ ಇದೆ. ಈ ವರ್ಷವೂ ಈ ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಅದನ್ನು ವಿರೋಧಿಸಿದವರು ಪಾರ್ವತಿ ಮತ್ತು ಶಿವನ ವಿಗ್ರಹಗಳ ಮೇಲೆ ನೀರನ್ನು ಎಸೆದು ವಿಗ್ರಹಗಳನ್ನು ಅವಮಾನಗೊಳಿಸಲು ಪ್ರಯತ್ನಿಸಿದರು. ಈ ಪ್ರಕರಣದಲ್ಲಿ ‘ದಲಿತ ಸಂಘರ್ಷ ಸಮಿತಿ’ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

1. ಮೈಸೂರಿನ ನಂಜನಗೂಡಿನಲ್ಲಿ ಕಂಠೇಶ್ವರನ ದೇವಾಲಯವಿದೆ. ಕಂಠೇಶ್ವರ ಅಥವಾ ನಂಜುಂಡೇಶ್ವರನನ್ನು ಶಿವನ ಒಂದು ರೂಪವೆಂದು ಪರಿಗಣಿಸಲಾಗಿದೆ. ಕನ್ನಡದಲ್ಲಿ ನಂಜು ಎಂದರೆ ವಿಷ ಕುಡಿಯುವುದು.

2. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ‘ಅಂಧಕಾಸುರ ವಧ’ವನ್ನು ಆಚರಿಸುವ ಸಂಪ್ರದಾಯವಿದೆ. ಈ ಸಮಯದಲ್ಲಿ ದೇವರು ರಾಕ್ಷಸನನ್ನು ವಧಿಸುವ ದೃಶ್ಯವನ್ನು ತೋರಿಸಲಾಗುತ್ತದೆ; ಆದರೆ ಈ ಬಾರಿ ಸಂಪ್ರದಾಯದ ಬಗ್ಗೆ ಗಲಾಟೆ ನಡೆದಿದೆ.

3. ಈ ಸಂಪ್ರದಾಯವನ್ನು ನಿಲ್ಲಿಸುವಂತೆ ‘ದಲಿತ ಸಂಘರ್ಷ ಸಮಿತಿ’ ಎಂಬ ಸಂಘಟನೆ ಆಗ್ರಹಿಸಿದೆ. ‘ಅಂಧಕಾಸುರ/ ಮಹಿಷಾಸುರ ನಮ್ಮ ರಾಜರಾಗಿದ್ದರು. ಹೀಗಾಗಿ ಈ ಪದ್ಧತಿಯಿಂದ ಅವರ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಸಮಿತಿ ಆರೋಪಿಸಿದೆ.

ಸಂಪಾದಕೀಯ ನಿಲುವು

ರಾಕ್ಷಸರನ್ನು ಎತ್ತಿಕಟ್ಟುವ ಮತ್ತು ದೇವರನ್ನು ಅವಮಾನ ಮಾಡುವವರಿಗೆ ಧರ್ಮಶಿಕ್ಷಣ ಎಷ್ಟು ಆವಶ್ಯಕವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ !