ನಾವು ನೋಂದಾಯಿತ ಮಠಗಳು ಮತ್ತು ದೇವಾಲಯಗಳ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತೇವೆ ಮತ್ತು ಬೋನಸ್ ಕೂಡ ನೀಡುತ್ತೇವೆ !

ಸಂತರು, ಭಕ್ತರು ಮತ್ತು ಹಿಂದುತ್ವನಿಷ್ಠರಿಗೆ ಛತ್ತೀಸ್‌ಗಢದ ಬಿಜೆಪಿ ಸರಕಾರದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಇವರಿಂದ ಭರವಸೆ !

ರಾಯ್‌ಪುರ (ಛತ್ತೀಸ್‌ಗಢ) – ಈ ಹಿಂದೆ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, ರಾಜ್ಯದ ಎಲ್ಲಾ ದೇವಸ್ಥಾನದ ಜಮೀನಿನಿಂದ ಉತ್ಪಾದಿಸಿದ ಭತ್ತವನ್ನು ಸರಕಾರ ಖರೀದಿಸಿತ್ತು. ಇದರೊಂದಿಗೆ ಸಂಪೂರ್ಣ ಬೋನಸ್ ಕೂಡ ನೀಡಲಾಗಿತ್ತು. ಆದ್ದರಿಂದ, ಮಠಗಳು ಮತ್ತು ದೇವಾಲಯಗಳ ಕೃಷಿ ಆದಾಯದಿಂದ ರಾಜ್ಯವು ಸುಲಭವಾಗಿ ಉತ್ಪಾದನೆಯನ್ನು ಪಡೆಯಬಹುದು. ಇದಲ್ಲದೇ ತುರ್ತು ಪರಿಸ್ಥಿತಿಯಲ್ಲಿ ಅಂದಿನ ಬಿಜೆಪಿ ಸರಕಾರದಿಂದ ನೆರವು ಕೂಡ ನೀಡಲಾಗಿತ್ತು; ಆದರೆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೃಷಿ ಉತ್ಪನ್ನ ಖರೀದಿ ಮತ್ತು ದೇವಸ್ಥಾನಗಳಿಗೆ ಬೋನಸ್ ವಿತರಣೆ ನಿಲ್ಲಿಸಲಾಗಿದೆ. ಇದರಿಂದ ಹಲವು ದೇವಸ್ಥಾನಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಆದ್ದರಿಂದ ದೇವಸ್ಥಾನಗಳ ಕೃಷಿ ಉತ್ಪನ್ನಗಳ ಖರೀದಿಯನ್ನು ಸರಕಾರ ಪುನರಾರಂಭಿಸಬೇಕು ಎಂದು ಸಂತರು, ಭಕ್ತರು, ಹಿಂದುತ್ವನಿಷ್ಠರು ಬಿಜೆಪಿ ಸರಕಾರದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರಿಗೆ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ. ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಇವರು ಮನವಿಯನ್ನು ಸ್ವೀಕರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದರೊಂದಿಗೆ ‘ನೋಂದಾಯಿತ ದೇವಸ್ಥಾನಗಳು, ಮಠಗಳು ಇತ್ಯಾದಿಗಳಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ, ಆದ್ದರಿಂದ ಅವರು ನೋಂದಾಯಿಸಿಕೊಳ್ಳಬೇಕು’. ಶರ್ಮಾ ಅವರು ಈ ಕುರಿತು ಸಂಬಂಧಪಟ್ಟ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಈ ಬಾರಿ ‘ಮಿಷನ್ ಸನಾತನ’ದ ಶ್ರೀ. ಮದನಮೋಹನ ಉಪಾಧ್ಯಾಯ, ನೀಲಕಂಠ ಸೇವಾ ಸಂಸ್ಥೆಯ ಪಂಡಿತ್ ನೀಲಕಂಠ ತ್ರಿಪಾಠಿ, ಛತ್ತೀಸ್‌ಗಢದ ಮಹಂತ್ ಸರ್ವೇಶ್ವರದಾಸ್, ಭಜರಂಗದಳದ ಮಹಂತ್ ನರೇಂದ್ರದಾಸ್, ಶ್ರೀ. ಅಂಕಿತ್ ದ್ವಿವೇದಿ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಹೇಮಂತ್ ಕಾನಸ್ಕರ್ ಮತ್ತು ಶ್ರೀ. ಪ್ರತೀಕ್ ರಿಜ್ವಾನಿ ಉಪಸ್ಥಿತರಿದ್ದರು.

ಛತ್ತೀಸ್‌ಗಢದಲ್ಲಿ ಶೀಘ್ರದಲ್ಲೇ ಹಲಾಲ್ ಉತ್ಪನ್ನಗಳಿಗೆ ನಿಷೇಧ !

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸುವ ಸರಕಾರದ ನಿರಂತರ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳನ್ನು ನಿಷೇಧಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ.