ಅಯೋಧ್ಯೆಯಲ್ಲಿ 84 ಮೈಲಿನ ಪ್ರದಕ್ಷಿಣೆಯ ಮಾರ್ಗದಲ್ಲಿ ಮದ್ಯ ನಿಷೇಧ !

ಅಯೋಧ್ಯೆ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರವು ಅಯೋಧ್ಯೆಯ 84 ಮೈಲು ಪ್ರದಕ್ಷಿಣೆಯ ಮಾರ್ಗದಲ್ಲಿ ಮದ್ಯವನ್ನು ನಿಷೇಧಿಸಿದೆ. ರಾಜ್ಯ ಅಬಕಾರಿ ಸಚಿವ ನಿತಿನ್ ಅರ್ಗವಾಲ್ ಇವರು ಈ ವಿಷಯವನ್ನು ಘೋಷಿಸಿದರು. ಈ ಮಾರ್ಗದಲ್ಲಿರುವ 500ಕ್ಕೂ ಹೆಚ್ಚು ಮದ್ಯದಂಗಡಿಗಳು ಸ್ಥಳಾಂತರಗೊಳ್ಳಲಿವೆ.

84 ಮೈಲು ಪ್ರದಕ್ಷಿಣೆ ಎಂದರೇನು ?

ಅಯೋಧ್ಯೆಯ ರಾಜ ರಾಮನ ಸಾಮ್ರಾಜ್ಯವು 84 ಮೈಲು (252 ಕಿಮೀ) ವರೆಗೆ ಹರಡಿತ್ತು. ಇದಕ್ಕಾಗಿ 84 ಮೈಲಿ ಪ್ರದಕ್ಷಿಣೆಯ ಸಂಪ್ರದಾಯ ದಶಕಗಳಿಂದ ನಡೆದುಕೊಂಡು ಬಂದಿದೆ. ಉತ್ತರ ಪ್ರದೇಶದ 6 ಜಿಲ್ಲೆಗಳು ಈ ಪ್ರದಕ್ಷಿಣೆಯ ಮಾರ್ಗದಲ್ಲಿ ಬರುತ್ತದೆ. ಸಾಮಾನ್ಯ ಜನರು ಮಗು ಹುಟ್ಟಲು ಈ ಪ್ರದಕ್ಷಿಣೆಯನ್ನು ಮಾಡುತ್ತಾರೆ, ಸಂತರು ಮತ್ತು ಸಾಧಕರು ಮೋಕ್ಷಕ್ಕಾಗಿ ಪ್ರದಕ್ಷಿಣೆ ಹಾಕುತ್ತಾರೆ. 84 ಮೈಲು ಪ್ರದಕ್ಷಿಣೆ ಮಾಡುವುದರಿಂದ 84 ಲಕ್ಷ ಜನ್ಮಗಳಿಂದ ಮುಕ್ತಿ ಸಿಕ್ಕಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.