ಧರ್ಮ ಇದು ವೈಯಕ್ತಿಕ ವಿಷಯವಾಗಿದ್ದು ಅದರ ಉಪಯೋಗ ರಾಜಕೀಯ ಲಾಭಕ್ಕಾಗಿ ಆಗಬಾರದು ! – ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ದ ಹುರುಳಿಲ್ಲದ ಸಲಹೆ

ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಸೀತಾರಾಮ್ ಯೆಚ್ಯುರಿಯಿಂದ ಶ್ರೀರಾಮ ಮಂದಿರದ ಉದ್ಘಾಟನೆಗೆ ಉಪಸ್ಥಿತರಿರಲು ನಿರಾಕರಣೆ !

ನವ ದೆಹಲಿ – ಧರ್ಮವು ವೈಯಕ್ತಿಕ ಆಸಕ್ತಿಯ ವಿಷಯವಾಗಿದೆ, ಇದರ ಉಪಯೋಗ ರಾಜಕೀಯ ಲಾಭಕ್ಕಾಗಿ ಮಾಡಬಾರದೆಂದು ಮಾರ್ಕ್ಸವಾದಿ ಕಮ್ಯುನಿಸ್ ಪಕ್ಷದಿಂದ ಹೇಳಿಕೆ ನೀಡಿದೆ. ಪಕ್ಷದ ಕಾರ್ಯದರ್ಶಿ ಸೀತಾರಾಮ ಯೆಚ್ಯುರಿ ಇವರಿಗೆ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಹಭಾಗಿ ಆಗುವದಕ್ಕಾಗಿ ಆಮಂತ್ರಿಸಲಾಗಿತ್ತು; ಆದರೆ ಅವರು ಈ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಪ್ರಸಾರ ಮಾಡಲಾಗಿದೆ.

ಈ ಪೋಸ್ಟ್ ನಲ್ಲಿ, ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಒಂದು ಧಾರ್ಮಿಕ ಕಾರ್ಯಕ್ರಮದ ರೂಪಂತರ ಸರಕಾರಿ ಕಾರ್ಯಕ್ರಮದಲ್ಲಿ ಮಾಡುವುದು ದುರ್ದೈವವಾಗಿದೆ. ಇದರಲ್ಲಿ ಪ್ರಧಾನಮಂತ್ರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಇತರ ಸರಕಾರಿ ಅಧಿಕಾರಿಗಳು ನೇರವಾಗಿ ಸಹಭಾಗಿ ಆಗುತ್ತಿದ್ದಾರೆ. ಸಂವಿಧಾನದ ಪ್ರಕಾರ ಭಾರತದಲ್ಲಿ ಆಡಳಿತಕ್ಕೆ ಯಾವುದೇ ಧಾರ್ಮಿಕ ಸಂಬಂಧ ಇರಬಾರದು. ಅಧಿಕಾರದಲ್ಲಿರುವ ಪಕ್ಷ ಅದನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಾರ್ಕ್ಸವಾದಿ ಕಮ್ಯುನಿಸ್ಟ್  ಪಕ್ಷದ ಹಿಂದೂದ್ವೇಷಿ ದ್ವಂದ್ವತೆ ! ದೇವಸ್ಥಾನದ ಜಾಗದಲ್ಲಿ ಯಾವುದಾದರೂ ಮಸೀದಿಯ ಅಥವಾ ಚರ್ಚ್‌ನ ಉದ್ಘಾಟನೆ ಇದ್ದರೆ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ ಹೇಳಿಕೆ ನೀಡಲಾಗುತ್ತಿತ್ತೆ ?

ರಷ್ಯಾದಲ್ಲಿನ ಕಮ್ಯುನಿಸ್ಟ್ ಕ್ರೈಸ್ತ ಧರ್ಮದ ಹಾಗೂ ಚೀನಾದಲ್ಲಿ ಕಮ್ಯುನಿಸ್ಟ್ ಬೌದ್ಧ ಧರ್ಮದ ಪಾಲನೆ ಮಾಡುತ್ತಾರೆ; ಆದರೆ ಭಾರತದಲ್ಲಿನ ತಥಾಕಥಿತ ಹಿಂದೂ ಧರ್ಮದ ಕಮಿನಿಸ್ಟ್ ಹಿಂದೂ ಧರ್ಮವನ್ನು ಟೀಕಿಸುತ್ತಾ ಅವರು ಸಾಮ್ಯವಾದಿಗಳೆಂದು ನಟಿಸುತ್ತಾರೆ !