ಅಮೇರಿಕಾದಲ್ಲಿ ನಾಗರಿಕರು ಉತ್ತರ ಕೋರಿಯಾದಲ್ಲಿನ ಜನರಿಗಾಗಿ ಸಮುದ್ರದಲ್ಲಿ ಎಸೆದ ಉಡುಗೊರೆಗಳು !

ಉತ್ತರ ಕೋರಿಯಾದಲ್ಲಿ ಕ್ರಿಸ್‌ಮಸ್‌ ಮೇಲೆ ನಿಷೇಧ !

ಪ್ಯೊಂಗಯಾಂಗ (ಉತ್ತರ ಕೋರಿಯಾ) – ಉತ್ತರ ಕೋರಿಯಾದಲ್ಲಿ ಕಳೆದ ಅನೇಕ ವರ್ಷದಿಂದ ಕ್ರೈಸ್ತ ಧರ್ಮದ ಮೇಲೆ ನಿಷೇಧವಿದೆ. ಆದ್ದರಿಂದ ಇಲ್ಲಿ ಕ್ರಿಸ್‌ಮಸ್ ಆಚರಿಸಲಾಗುವುದಿಲ್ಲ. ಹೀಗೆ ಇರುವಾಗ ಅಮೇರಿಕಾದಲ್ಲಿನ ಕೆಲವು ಜನರು ಕೆಲವು ಉಡುಗೊರೆಗಳನ್ನು ಹಳದಿ ಸಮುದ್ರದಲ್ಲಿ ಎಸೆದಿದ್ದಾರೆ. ಈ ಉಡುಗೊರೆಗಳು ಆದಷ್ಟು ಬೇಗನೆ ಉತ್ತರ ಕೋರಿಯಾದ ತೀರದಲ್ಲಿ ಇರುವ ನಗರದ ವರೆಗೆ ತಲುಪುವುದು ಎಂದು ನಂಬಿದ್ದಾರೆ. ಈ ವಸ್ತುಗಳಲ್ಲಿ ಕೆಲವು ಬಾಟಲಿಗಳು ಇರುವುದು ಮತ್ತು ಅದರಲ್ಲಿ ಬೈಬಲ್ ನ ಪುಟಗಳು ಇವೆ. ಹಾಗೂ ಕೆಲವು ಬಾಟಲಿಗಳಲ್ಲಿ ಆಹಾರ ಪದಾರ್ಥಗಳು ಕೂಡ ಇವೆ. ಅಮೇರಿಕಾದಲ್ಲಿನ ನಾರ್ಥ್ ಕೊರಿಯನ್ ಫ್ರೀಡಂ ಕೊಲಿಶನ್ ಗ್ರೂಪ್ ನಿಂದ ಈ ಪ್ರಯತ್ನ ಮಾಡಲಾಗಿದೆ.

ಕ್ರೈಸ್ತ ಧರ್ಮದ ಮೇಲೆ ಏಕೆ ನಿಷೇಧ ?

ಕಿಮ್ ಇಲ್ ಸುಂಗ್ ಇವರು ೧೯೪೮ ರಲ್ಲಿ ಅಧಿಕಾರಕ್ಕೆ ಬಂದರು. ಉತ್ತರ ಕೋರಿಯಾದ ಜನರು ಅವರನ್ನು ದೇವರೆಂದೇ ನಂಬಬೇಕು ಎಂದು ಅವರ ಆಸೆ ಆಗಿತ್ತು. ಬಹಳಷ್ಟು ಕ್ರೈಸ್ತರು ಇದನ್ನು ವಿರೋಧಿಸಿದ್ದರು; ಆದ್ದರಿಂದ ಕಿಮ್ ಇಲ್ ಸುಂಗ ಇವರು ಕ್ರೈಸ್ತರನ್ನು ಕೊಲ್ಲಲು ಆರಂಭಿಸಿದರು. ಅನೇಕ ಕ್ರೈಸ್ತರಿಗೆ ಜೈಲಿಗೆ ಕಳುಹಿಸಲಾಯಿತು. ಅವರಿಗೆ ಏಸುಕ್ರಿಸ್ತನ ಮೇಲೆ ವಿಶ್ವಾಸ ಇಡುವ ಜನರನ್ನು ನಾಶ ಮಾಡುವುದಾಗಿತ್ತು. ಅಂದಿನಿಂದ ದೇಶದಲ್ಲಿ ಕ್ರೈಸ್ತ ಧರ್ಮದ ಮೇಲೆ ಮತ್ತು ಕ್ರಿಸ್‌ಮಸ್ ಮೇಲೆ ನಿಷೇಧ ಬಂದಿದೆ.